ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆ: ಉಚಿತ ಪಡಿತರ ಮತ್ತೆ 6 ತಿಂಗಳವರೆಗೆ ವಿಸ್ತರಣೆ

ನವದೆಹಲಿ: ದೇಶದ ಬಲಿಷ್ಠತೆ ಪ್ರತಿ ನಾಗರಿಕನ ಶಕ್ತಿಯ ಮೇಲೆ ನಿಂತಿದೆ. ಹಾಗಾಗಿ ಉಚಿತ ಆಹಾರಧಾನ್ಯ ವಿತರಿಸುವ ಯೋಜನೆಯನ್ನು ಇನ್ನೂ ಆರು ತಿಂಗಳವರೆಗೆ ವಿಸ್ತರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟವು ಶನಿವಾರದಂದು ʻಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆʼ (PM-GKAY) ಅನ್ನು ಸೆಪ್ಟೆಂಬರ್‌ರವರೆಗೆ ಅಂದರೆ, ಇನ್ನೂ ಆರು ತಿಂಗಳ ವರೆಗೆ ವಿಸ್ತರಿಸಲಾಗಿದೆ.
ಈ ಯೋಜನೆಯನ್ನು ದೇಶದಲ್ಲಿ ಮಹಾಮಾರಿ ಕೊರೊನಾ ವೈರಸ್ ಹಾವಳಿ ಹೆಚ್ಚಾಗಿದ್ದ ಕಾರಣಕ್ಕಾಗಿ ಏಪ್ರಿಲ್ 2020 ರಲ್ಲಿ ಒಂದು ತಿಂಗಳ ಮೊದಲ ಲಾಕ್‌ಡೌನ್ ಸಮಯದಲ್ಲಿ ಜಾರಿಗೆ ತರಲಾಯಿತು. ಈಗ ಮತ್ತೊಮ್ಮೆ ಮುಂದಿನ ಆರು ತಿಂಗಳ ಕಾಲ ಯೋಜನೆ ವಿಸ್ತರಣೆಯಾಗಿದೆ. ಹೀಗಾಗಿ ದೇಶದ 80 ಕೋಟಿ ಪಡಿತರ ಕಾರ್ಡ್​​ದಾರರಿಗೆ ಉಚಿತವಾಗಿ ರೇಷನ್​ ಸಿಗಲಿದೆ.
ಉತ್ತರ ಪ್ರದೇಶ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಿರುವ ಯೋಗಿ ಆದಿತ್ಯನಾಥ್ ಕೂಡ ಮುಂದಿನ ಮೂರು ತಿಂಗಳ ಕಾಲ ಉಚಿತವಾಗಿ ಪಡಿತರ ನೀಡುವುದಾಗಿ ಘೋಷಿಸಿದ್ದರು. ಹೀಗಾಗಿ ಇದು ಜೂನ್​​ 30ರ ವರೆಗೆ ಇದು ವಿಸ್ತರಣೆಗೊಂಡಿದೆ.
ಈ ಯೋಜನೆಯು ದೇಶಾದ್ಯಂತ 80 ಕೋಟಿ ಪಡಿತರ ಚೀಟಿದಾರರಿಗೆ 5 ಕೆಜಿ ಅಕ್ಕಿ ಅಥವಾ ಗೋಧಿ ಮತ್ತು ಪ್ರತಿ ವ್ಯಕ್ತಿಗೆ 1 ಕೆಜಿ ಬೇಳೆಕಾಳುಗಳನ್ನು ತಿಂಗಳಿಗೆ ಪೂರೈಸುತ್ತದೆ. ಕೇಂದ್ರದ ಆಹಾರ ಧಾನ್ಯಗಳ ಪೂರೈಕೆಯ ಹೊರತಾಗಿ ಉತ್ತರ ಪ್ರದೇಶ ಸರ್ಕಾರವು ರಾಜ್ಯದೊಂದಿಗೆ ಪಟ್ಟಿ ಮಾಡಲಾದ ಫಲಾನುಭವಿಗಳಿಗೆ ತಲಾ 1 ಕೆಜಿ ಬೆಂಗಾಲಿ ಅಥವಾ ಚನ್ನಾ, ಎಣ್ಣೆ ಮತ್ತು ಉಪ್ಪನ್ನು ಪೂರೈಸಲು ತಿಂಗಳಿಗೆ 950 ರೂ. ಕೋಟಿ ಖರ್ಚು ಮಾಡುತ್ತದೆ.

ಓದಿರಿ :-   ನಿಮ್ಮ ಹೆಸರು ಮೊಹಮ್ಮದ್? : ಮಾನಸಿಕ ಅಸ್ವಸ್ಥ ವ್ಯಕ್ತಿಗೆ ಥಳಿತ, ನಂತರ ಶವವಾಗಿ ಪತ್ತೆ

 

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 1

advertisement

ನಿಮ್ಮ ಕಾಮೆಂಟ್ ಬರೆಯಿರಿ