ಚಿಕ್ಕಬಳ್ಳಾಪುರ: ಶನಿವಾರ ಸಂಜೆ ಮನೆಯಿಂದ ನಾಪತ್ತೆಯಾಗಿದ್ದ ಅಕ್ಕ-ತಂಗಿ ಶವವಾಗಿ ಇಂದು, ಭಾನುವಾರ ಚಿಕ್ಕಬಳ್ಳಾಪುರದ ಕಂದವಾರ ಕೆರೆಯಲ್ಲಿ(Lake) ಪತ್ತೆಯಾಗಿದೆ.ಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.
advertisement
9535127775 / 9901837775 / 6364528715 / 08362775155 / https://icsmpucollege.com/
ಮೃತರನ್ನು ಅಕ್ಕ-ತಂಗಿಯರಾದ ಅಗಲಗುರ್ಕಿ ಗ್ರಾಮದ ಅಶ್ವಿನಿ(16) ಮತ್ತು ನಿಶ್ಚಿತಾ(14) ಎಂದು ಗುರುತಿಸಲಾಗಿದೆ.
ಮುನಿಸಿಕೊಂಡು ಅಶ್ವಿನಿ, ತನ್ನ ತಂಗಿಯನ್ನೂ ಕರೆದುಕೊಂಡು ಮನೆಯಿಂದ ನಿನ್ನೆ ಸಂಜೆ ಹೊರ ಹೋಗಿದ್ದಳು ಎನ್ನಲಾಗಿದೆ.
ರಾತ್ರಿ ಎಷ್ಟೊತ್ತಾದರೂ ಮನೆಗೆ ಬಂದಿರಲಿಲ್ಲ. ಮನೆಯವರು ಊರೆಲ್ಲಾ ಹುಡುಕಾಡಿದರೂ ಸುಳಿವು ಅವರ ಸಿಕ್ಕಿರಲಿಲ್ಲ. ಭಾನುವಾರ ಮಧ್ಯಾಹ್ನದ ಸುಮಾರಿಗೆ ಚಿಕ್ಕಬಳ್ಳಾಪುರ ನಗರದ ಕಂದವಾರ ಕೆರೆಯಲ್ಲಿ ಅಕ್ಕ-ತಂಗಿ ಇಬ್ಬರ ಶವ ಪತ್ತೆಯಾಗಿದೆ. ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕೆ ಸದ್ಯ ವ್ಯಕ್ತವಾಗಿದೆ. ಚಿಕ್ಕಬಳ್ಳಾಪುರ ನಗರ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ