ವಾಯು ರಕ್ಷಣಾ ವ್ಯವಸ್ಥೆಯ ಕ್ಷಿಪಣಿಯ ಪರೀಕ್ಷಿಸಿದ ಭಾರತ

ನವದೆಹಲಿ: ಒಡಿಶಾದ ಬಾಲಸೋರ್ ಕರಾವಳಿಯಲ್ಲಿ ಭಾರತೀಯ ಸೇನೆಯು ಮಧ್ಯಮ ಶ್ರೇಣಿಯ  ನೆಲದಿಂದ ಮೇಲ್ಮೈ  ವಾಯು ಕ್ಷಿಪಣಿ ವಾಯು ರಕ್ಷಣಾ ವ್ಯವಸ್ಥೆಯ ಪರೀಕ್ಷಾರ್ಥ ಉಡಾವಣೆಯನ್ನು ಭಾನುವಾರ ಯಶಸ್ವಿಯಾಗಿ ನಡೆಸಿದೆ ಎಂದು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಮಾಹಿತಿ ನೀಡಿದೆ.

“MRSAM-ಆರ್ಮಿ ಕ್ಷಿಪಣಿ ವ್ಯವಸ್ಥೆಯ ಹಾರಾಟವನ್ನು ಐಟಿಆರ್‌ (ITR) ಬಾಲಸೋರ್, ಒಡಿಶಾದಿಂದ ಸುಮಾರು 10:30 ಗಂಟೆಗೆ ಪರೀಕ್ಷಿಸಿತು, ಇದು ದೀರ್ಘ ವ್ಯಾಪ್ತಿಯಲ್ಲಿ ಹೆಚ್ಚಿನ ವೇಗದ ವೈಮಾನಿಕ ಗುರಿಯನ್ನು ಪ್ರತಿಬಂಧಿಸುತ್ತದೆ” ಎಂದು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಟ್ವೀಟ್‌ನಲ್ಲಿ ತಿಳಿಸಿದೆ.
ಎಂಆರ್​ಎಸ್​ಎಎಂ-ಆರ್ಮಿ ಕ್ಷಿಪಣಿ ವ್ಯವಸ್ಥೆಯ ನೌಕೆಯ ಪರೀಕ್ಷೆಯನ್ನು ಬಾಲಸೋರ್​ನ ಐಟಿಆರ್​ನಿಂದ ಸುಮಾರು 10:30ಕ್ಕೆ ಉಡಾವಣೆ ಮಾಡಲಾಯಿತು. ಈ ವ್ಯವಸ್ಥೆಯು ಭಾರತೀಯ ಸೇನೆಯ ಒಂದು ಭಾಗವಾಗಿದೆ. ಪರೀಕ್ಷೆಯಲ್ಲಿ ಕ್ಷಿಪಣಿಯು ಬಹಳ ದೂರದಲ್ಲಿದ್ದ ಗುರಿಯನ್ನು ನೇರವಾಗಿ ಹೊಡೆದಿದ್ದು, ಉಡಾವಣೆ ಯಶಸ್ವಿಯಾಗಿದೆ ಎಂದು ಡಿಆರ್‌ಡಿಒ ಅಧಿಕಾರಿಗಳು ತಿಳಿಸಿದ್ದಾರೆ.

ಹಲವಾರು ಹೊಸ ಸ್ಥಳೀಯ ವ್ಯವಸ್ಥೆಗಳನ್ನು ಮೌಲ್ಯೀಕರಿಸುವ ಪರೀಕ್ಷಾರ್ಥವಾಗಿ ಜನವರಿ 20ರಂದು ಬ್ರಹ್ಮೋಸ್ ಸೂಪರ್ಸಾನಿಕ್ ಕ್ರೂಸ್ ಕ್ಷಿಪಣಿಯನ್ನು ಒಡಿಶಾದ ಇಂಟಿಗ್ರೇಟೆಡ್ ಟೆಸ್ಟ್ ರೇಂಜ್ (ಐಟಿಆರ್​)ನಿಂದ ಉಡಾವಣೆ ಮಾಡಲಾಯಿತು.

ಪ್ರಮುಖ ಸುದ್ದಿ :-   ಈ ಹಳ್ಳಿಯಲ್ಲಿರುವ ಮತದಾನ ಕೇಂದ್ರದ ಒಬ್ಬರೇ ಒಬ್ಬರು ಮತದಾರರಿಗಾಗಿ 40 ಕಿಮೀ ನಡೆದುಕೊಂಡು ಹೋದ ಚುನಾವಣಾ ಸಿಬ್ಬಂದಿ...!

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement