ಒಂದು ವಾರದಲ್ಲಿ 6ನೇ ಬಾರಿ ಪೆಟ್ರೋಲ್​-ಡೀಸೆಲ್​ ಬೆಲೆ ಏರಿಕೆ..!

ನವದೆಹಲಿ: ಒಂದೇ ವಾರದಲ್ಲಿ 6ನೇ ಬಾರಿಗೆ ಪೆಟ್ರೋಲ್​ ಮತ್ತು ಡೀಸೆಲ್​ ಬೆಲೆಯಲ್ಲಿ ಏರಿಕೆಯಾಗಿದ್ದು, ಇಂದು, ಸೋಮವಾರ (ಮಾ.28) ಪೆಟ್ರೋಲ್ ಬೆಲೆಯಲ್ಲಿ 30 ಮತ್ತು ಡೀಸೆಲ್​ ಬೆಲೆಯಲ್ಲಿ 35 ಪೈಸೆಯಷ್ಟು ಏರಿಕೆಯಾಗಿದೆ.
ಮಾರ್ಚ್​ 22 ರಿಂದ ಆರಂಭವಾದ ಇಂಧನ ದರ ಏರಿಕೆಯು ಮಾ. 24 ಒಂದು ದಿನ ಹೊರತುಪಡಿಸಿ ವಾರದ ಉಳಿದೆಲ್ಲ ದಿನಗಳೂ ಏರಿಕೆ ಕಂಡಿವೆ. . ಉಕ್ರೇನ್​-ರಷ್ಯಾ ಯುದ್ಧದಿಂದ ಕಚ್ಚಾ ತೈಲ ಬೆಲೆ ಏರಿಕೆಯಾಗಿದೆ. ಇಂಧನ ದರ ಏರಿಕೆಯಾಗುತ್ತಿರುವುದರಿಂದ ಅಗತ್ಯ ವಸ್ತುಗಳ ಬೆಲೆಯಲ್ಲಿಯೂ ಹೆಚ್ಚಳವಾಗಲಿದೆ. ಕಳೆದ 7 ದಿನಗಳಲ್ಲಿ ಲೀಟರಿಗೆ 4 ರೂ.ಗಳಷ್ಟು ಇಂಧನ ದರ ಏರಿಕೆಯಾಗಿದೆ.
ಇಂದು ಬೆಳಗ್ಗೆ 6 ಗಂಟೆಯಿಂದಲೇ ದರ ಏರಿಕೆ ಪರಿಷ್ಕರಣೆಯಾಗಿದ್ದು, ಇಂದಿನ ಇಂಧನ ದರ ಈ ಕೆಳಕಂಡಂತಿದೆ

ಬೆಂಗಳೂರು
ಪೆಟ್ರೋಲ್​: ಪ್ರತಿ ಲೀಟರ್​ಗೆ 104.73 ರೂ.
ಡೀಸೆಲ್​: ಪ್ರತಿ ಲೀಟರ್​ಗೆ 85.04 ರೂ.

ದೆಹಲಿ
ಪೆಟ್ರೋಲ್​: 99.41 ರೂ.
ಡೀಸೆಲ್​: 90.77 ರೂ.

ಮುಂಬೈ
ಪೆಟ್ರೋಲ್​: 114.18 ರೂ.
ಡೀಸೆಲ್​: 98.48 ರೂ.

ಕೋಲ್ಕತ್ತಾ
ಪೆಟ್ರೋಲ್​: 108.83 ರೂ.
ಡೀಸೆಲ್​: 93.92 ರೂ.

ಪ್ರಮುಖ ಸುದ್ದಿ :-   ನೀವು ಅಮಾಯಕರಲ್ಲ : ಬಾಬಾ ರಾಮದೇವ, ಆಚಾರ್ಯ ಬಾಲಕೃಷ್ಣಗೆ ಸುಪ್ರೀಂ ಕೋರ್ಟ್‌ ಮತ್ತೆ ತರಾಟೆ

ಚೆನ್ನೈ
ಪೆಟ್ರೋಲ್​: 104.90 ರೂ.
ಡೀಸೆಲ್​: 95.00 ರೂ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement