ಬಿರ್ಭೂಮ್ ಹತ್ಯೆಗೆ ಸಂಬಂಧಿಸಿ ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ಗದ್ದಲ: ಅಶಿಸ್ತಿನ ವರ್ತನೆಗಾಗಿ 5 ಬಿಜೆಪಿ ಶಾಸಕರ ಅಮಾನತು

ಕೋಲ್ಕತ್ತಾ: ಅಶಿಸ್ತಿನ ವರ್ತನೆಗಾಗಿ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಸೇರಿದಂತೆ ಪಶ್ಚಿಮ ಬಂಗಾಳದ ಐವರು ಬಿಜೆಪಿ ಶಾಸಕರನ್ನು ವಿಧಾನಸಭೆ ಸ್ಪೀಕರ್ ಬಿಮನ್ ಬಂದೋಪಾಧ್ಯಾಯ ಅವರು ಸೋಮವಾರ ಸದನದಲ್ಲಿ ಅಮಾನತುಗೊಳಿಸಿದ್ದಾರೆ.
ಬಿರ್ಭೂಮ್ ಹಿಂಸಾಚಾರದ ಬಗ್ಗೆ ಚರ್ಚಿಸಲು ಪ್ರತಿಪಕ್ಷಗಳು ಒತ್ತಾಯಿಸಿದ ನಂತರ ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ಗೊಂದಲ ಉಂಟಾದ ನಂತರ ಅಮಾನತುಗಳನ್ನು ಮಾಡಲಾಯಿತು.

ಬಿರ್ಭೂಮ್ ಹಿಂಸಾಚಾರದಲ್ಲಿ ಎಂಟು ಜನರು ಮೃತಪಟ್ಟ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕಾನೂನು-ಸುವ್ಯವಸ್ಥೆಯ ಪರಿಸ್ಥಿತಿಯ ಬಗ್ಗೆ ಚರ್ಚೆಗೆ ಪ್ರತಿಪಕ್ಷಗಳು ಒತ್ತಾಯಿಸಿದವು. ಇದು ಬಜೆಟ್ ಅಧಿವೇಶನದ ಕೊನೆಯ ದಿನವಾಗಿತ್ತು. ಆದರೆ ಸರ್ಕಾರ ಸ್ಪಷ್ಟವಾಗಿ ನಿರಾಕರಿಸಿದೆ.
ನಂತರ ಬಿರ್ಭೂಮ್ ಹಿಂಸಾಚಾರ ಪ್ರಕರಣದ ಕುರಿತು ಕೋಲ್ಕತ್ತಾದ ವಿಧಾನಸಭೆಯಲ್ಲಿ ಗದ್ದಲ ಸ್ಫೋಟಗೊಂಡಿತು. ಘಟನೆಯ ವೇಳೆ ಬಿಜೆಪಿ ಶಾಸಕ ಮನೋಜ್ ತಿಗ್ಗಾ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ. ಟಿಎಂಸಿ ಶಾಸಕ ಅಸಿತ್ ಮಜುಂದಾರ್ ಅವರು ಗೊಂದಲದಲ್ಲಿ ಗಾಯಗೊಂಡಿದ್ದಾರೆ ಎಂದು ಹೇಳಿದ್ದಾರೆ.
ಭಾರತೀಯ ಜನತಾ ಪಕ್ಷದ ಐವರು ಶಾಸಕರಾದ ಸುವೇಂದು ಅಧಿಕಾರಿ, ಮನೋಜ್ ತಿಗ್ಗಾ, ನರಹರಿ ಮಹತೋ, ಶಂಕರ್ ಘೋಷ್, ದೀಪಕ್ ಬರ್ಮನ್ ಅವರನ್ನು ವಿಧನಾಸಭೆಯಲ್ಲಿ ಗದ್ದಲ ಮಾಡಿದ್ದಕ್ಕಾಗಿ ಅಮಾನತುಗೊಳಿಸಲಾಗಿದೆ.

ಪ್ರಮುಖ ಸುದ್ದಿ :-   ಪಾಟ್ನಾ ರೈಲ್ವೆ ನಿಲ್ದಾಣದ ಸಮೀಪದ ಹೊಟೇಲ್‌ ನಲ್ಲಿ ಬೆಂಕಿ ಅವಘಡ : 6 ಮಂದಿ ಸಾವು

ಟಿಎಂಸಿ ತನ್ನ ಶಾಸಕರೊಂದಿಗೆ ಕೋಲ್ಕತ್ತಾ ಪೊಲೀಸ್ ಸಿಬ್ಬಂದಿಯನ್ನು ಸಿವಿಲ್ ಡ್ರೆಸ್‌ನಲ್ಲಿ ಕರೆತಂದಿದೆ ಎಂದು ಬಿಜೆಪಿ ಆರೋಪಿಸಿದೆ. ಬಿಜೆಪಿ ನಾಯಕ ಅಮಿತ್ ಮಾಳವಿಯಾ ಅವರು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿರುವ ವೀಡಿಯೊದಲ್ಲಿ ಶಾಸಕರ ಗುಂಪು ಪರಸ್ಪರ ತಳ್ಳಿಕೊಂಡು ಕೂಗುತ್ತಾ, ವಿಧಾನಸಭೆಯೊಳಗೆ “ಕೋಲಾಹಲ” ಸೃಷ್ಟಿಸಿರುವುದನ್ನು ನೋಡಬಹುದು.
ಈ ವಿಷಯದಲ್ಲಿ ಕೇಂದ್ರದ ಮಧ್ಯಸ್ಥಿಕೆ ಕೋರಿ ಬಿಜೆಪಿ ಪ್ರತಿಭಟನೆ ಹಮ್ಮಿಕೊಂಡಿದೆ. “ನಾನು ನನ್ನ ದೂರನ್ನು ಸ್ಪೀಕರ್‌ಗೆ ಬರೆಯುತ್ತೇನೆ, ನಿಯಮಗಳ ಪ್ರಕಾರ ಕ್ರಮಕ್ಕೆ ಒತ್ತಾಯಿಸುತ್ತೇನೆ” ಎಂದು ಸುವೇಂದು ಅಧಿಕಾರಿ ಹೇಳಿದರು.

ಪ್ರಮುಖ ಸುದ್ದಿ :-   ಮೋದಿ, ರಾಹುಲ್ ಗಾಂಧಿಯಿಂದ ನೀತಿ ಸಂಹಿತೆ ಉಲ್ಲಂಘನೆ ಆರೋಪ: ಉತ್ತರ ನೀಡಲು ಚುನಾವಣಾ ಆಯೋಗ ಸೂಚನೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement