ಫೋನ್‌ ಕರೆ ಮಾಡಿದಾಗ ಕೇಳುತ್ತಿದ್ದ ಕೊರೊನಾ ಜಾಗೃತಿ ಸಂದೇಶ ಸ್ಥಗಿತಕ್ಕೆ ಸರ್ಕಾರದ ಚಿಂತನೆ: ವರದಿ

ನವದೆಹಲಿ: ಯಾರಿಗಾದರೂ ಫೋನ್‌ ಕರೆ ಮಾಡಿದಾಗ ಕೇಳಿಬರುತ್ತಿದ್ದ ಕೊರೊನಾ ಜಾಗೃತಿ ಸಂದೇಶ ಶೀಘ್ರದಲ್ಲೆ ಸ್ಥಗಿತಗೊಳ್ಳಲಿದೆ. ಸುಮಾರು ಎರಡು ವರ್ಷಗಳ ಕಾಲ ಮೊಬೈಲ್ʼನಲ್ಲಿ ನಿರಂತರವಾಗಿ ಕೇಳಿಬರುತ್ತಿದ್ದ ಕಾಲರ್ ಟ್ಯೂನ್ ಅನ್ನು ತೆಗೆದು ಹಾಕಲು ಸರ್ಕಾರ ಯೋಚಿಸುತ್ತಿದೆ ಎಂದು ವರದಿಗಳು ತಿಳಿಸಿವೆ.
ಈ ಹಿಂದೆ ಕೋವಿಡ್ ವೈರಸ್ ಬಗ್ಗೆ ಜಾಗೃತಿ ಮೂಡಿಸಲು ಮೊಬೈಲ್ ಫೋನ್‌ಗಳಲ್ಲಿ ಕೊರೊನಾ ಕಾಲರ್ ಟ್ಯೂನ್‌ಗಳನ್ನ ಬಳಸಲಾಗುತ್ತಿತ್ತು. ಎಲ್ಲ ಮೊಬೈಲ್‌ಗಳಲ್ಲಿ ಕೊರೊನಾ ಕಾಲರ್ ಟ್ಯೂನ್ ಪ್ಲೇ ಆಗುತ್ತಿದ್ದ ಉದ್ದೇಶ ಈಗ ಈಡೇರಿದೆ. ಈ ಕಾಲರ್ ಟ್ಯೂನ್ ನಿಲ್ಲಿಸುವಂತೆ ಹಲವರು ಸರ್ಕಾರಕ್ಕೆ ಅರ್ಜಿ ಸಲ್ಲಿಸಿದ್ದಾರೆ. ತುರ್ತು ಸಂದರ್ಭದಲ್ಲಿ ಪ್ರಮುಖ ಕರೆಗಳು ವಿಳಂಬವಾಗುತ್ತವೆ. ಈ ಕಾಲರ್ ಟ್ಯೂನ್ ಪ್ರಮುಖ ಕರೆಗಳನ್ನ ಹಿಡಿದಿಟ್ಟುಕೊಳ್ಳುವ ಮತ್ತು ತುರ್ತು ಪರಿಸ್ಥಿತಿಯಲ್ಲಿ ಕರೆಗಳನ್ನ ನಿಧಾನಗೊಳಿಸುತ್ತಿತ್ತು.

ಈ ಸಂದೇಶ ತನ್ನ ಉದ್ದೇಶವನ್ನು ಪೂರ್ಣಗೊಳಿಸಿದ ಕಾರಣಕ್ಕೆ ಅದನ್ನು ತೆಗೆದು ಹಾಕುವಂತೆ ಆರೋಗ್ಯ ಇಲಾಖೆಗೆ ಟೆಲಿಕಮ್ಯೂನಿಕೇಶನ್ ವಿಭಾಗ ಪತ್ರ ಬರೆದಿದೆ. ದೂರಸಂಪರ್ಕ ಇಲಾಖೆ (DoT) ಕೇಂದ್ರ ಆರೋಗ್ಯ ಸಚಿವಾಲಯಕ್ಕೆ ಪತ್ರ ಬರೆದು ಈ ಪೂರ್ವ ಕರೆ ಪ್ರಕಟಣೆಗಳು ಮತ್ತು ಕಾಲರ್ ಟ್ಯೂನ್‌ಗಳನ್ನು ಕೈಬಿಡುವಂತೆ ಮನವಿ ಮಾಡಿದೆ ಎಂದು ಪಿಟಿಐ ವರದಿ ಮಾಡಿದೆ.
ಕೋವಿಡ್-19 ಪೂರ್ವ ಕರೆ ಪ್ರಕಟಣೆಗಳು ಮತ್ತು ಟೆಲಿಕಾಂ ಸೇವಾ ಪೂರೈಕೆದಾರರಿಗೆ ಕಾಲರ್ ಟ್ಯೂನ್‌ಗಳ ಅನುಷ್ಠಾನಕ್ಕೆ ಸೂಚನೆಗಳನ್ನು ನೀಡುವಂತೆ ಕೇಂದ್ರ ಆರೋಗ್ಯ ಸಚಿವಾಲಯವು DoT ಗೆ ನಿರ್ದೇಶನ ನೀಡಿತ್ತು.
ಈ ಸೇವಾ ಪೂರೈಕೆದಾರರು ನಾಗರಿಕರಲ್ಲಿ ಜಾಗೃತಿ ಮೂಡಿಸಲು ಮತ್ತು ಸಾಂಕ್ರಾಮಿಕ ಸಮಯದಲ್ಲಿ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳು ಮತ್ತು ಲಸಿಕೆಗಳ ಬಗ್ಗೆ ತಿಳಿಸಲು ಕೊರೊನಾವೈರಸ್‌ಗೆ ಸಂಬಂಧಿಸಿದ ಪೂರ್ವ ಕರೆ ಪ್ರಕಟಣೆಗಳು ಮತ್ತು ಕಾಲರ್ ಟ್ಯೂನ್‌ಗಳನ್ನು ಅಳವಡಿಸಿದ್ದಾರೆ.

ಪ್ರಮುಖ ಸುದ್ದಿ :-   ಖರ್ಗೆ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ತಪಾಸಣೆ: ಚುನಾವಣಾಧಿಕಾರಿಗಳ ವಿರುದ್ಧ ಕಾಂಗ್ರೆಸ್‌ ಕಿಡಿ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement