ಆನ್‌ಲೈನ್‌ ಗೇಮ್‌ ನಿಷೇಧ ಕಾನೂನು ರದ್ದು: ಕರ್ನಾಟಕ ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ರಾಜ್ಯ ಸರ್ಕಾರದಿಂದ ಮೇಲ್ಮನವಿ

ನವದೆಹಲಿ: ಆನ್‌ಲೈನ್ ಗೇಮ್‌ ಸೇರಿದಂತೆ ಸ್ಕಿಲ್‌ ಗೇಮ್‌ಗಳನ್ನು ನಿಷೇಧಿಸುವ ಮತ್ತು ಅಪರಾಧೀಕರಿಸುವ ಕಾನೂನನ್ನು ರದ್ದುಗೊಳಿಸಿದ ಕರ್ನಾಟಕ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ ಎಂದು ಬಾರ್‌ ಅಂಡ್‌ ಬೆಂಚ್‌ ವರದಿ ಮಾಡಿದೆ.

ಆನ್‌ಲೈನ್ ಗೇಮಿಂಗ್ ನಿಷೇಧಿಸಿದ ಕರ್ನಾಟಕ ಪೊಲೀಸ್ (ತಿದ್ದುಪಡಿ) ಕಾಯಿದೆ- 2021ರ ಕೆಲವು ನಿಯಮಾವಳಿಗಳನ್ನು ಹೈಕೋರ್ಟ್ ಕಳೆದ ಫೆಬ್ರವರಿ 14ರಂದು ರದ್ದುಗೊಳಿಸಿತ್ತು.

ವರದಿ ಪ್ರಕಾರ, ಸಾರ್ವಜನಿಕ ಸುವ್ಯವಸ್ಥೆ” ಮತ್ತು “ಸಾರ್ವಜನಿಕ ಆರೋಗ್ಯ” ಕಾಪಾಡಲು ವಿಶೇಷವಾಗಿ ಸೈಬರ್ ಅಪರಾಧದ ಅಪಾಯ ಭಾರೀ ಪ್ರಮಾಣದಲ್ಲಿ ಹೆಚ್ಚಿದ್ದು ಪೊಲೀಸರಿಗೆ ಸಂಬಂಧಿಸಿದಂತೆ ತಿದ್ದುಪಡಿ ಕಾಯಿದೆಯ ಅಗತ್ಯವನ್ನು ಹೈಕೋರ್ಟ್ ಗಮನಿಸಿಲ್ಲ ಎಂದು ರಾಜ್ಯ ಸರ್ಕಾರ ತನ್ನ ಮೇಲ್ಮನವಿಯಲ್ಲಿ ಪ್ರತಿಪಾದಿಸಿದೆ. ಕಳೆದ ಮೂರು ವರ್ಷಗಳಲ್ಲಿ ರಾಜ್ಯಾದ್ಯಂತ ಇಂತಹ 28,000 ಪ್ರಕರಣಗಳು ದಾಖಲಾಗಿವೆ ಎಂದು ಅದು ಹೇಳಿದೆ.

ರದ್ದಾಗಿರುವ ಕಾನೂನು ಯಾವುದೇ ಸೂಕ್ತ ವ್ಯಕ್ತಿ ಅಥವಾ ಸಂಸ್ಥೆ ಆಡಬಹುದಾದ ಕೌಶಲ್ಯದ ಆಟಗಳನ್ನು ನಿಷೇಧಿಸಿಲ್ಲ ಅಥವಾ ನಿಯಂತ್ರಿಸಲು ಯತ್ನಿಸಿಲ್ಲ ಎಂದು ನ್ಯಾಯವಾದಿ ಶುಭ್ರಾಂಶು ಪಾಧಿ ಅವರ ಮೂಲಕ ಸಲ್ಲಿಸಲಾದ ಮೇಲ್ಮನವಿಯಲ್ಲಿ ತಿಳಿಸಲಾಗಿದೆ.

ಪ್ರಮುಖ ಸುದ್ದಿ :-   ಕುಮಟಾ : ಕಣ್ಣುಗಳನ್ನು ದಾನ ಮಾಡಿ ಸಾವಿನ ನಂತರವೂ ಸಾರ್ಥಕ್ಯದ ಕಾರ್ಯ

ಅಕ್ಟೋಬರ್ 5, 2021 ರಂದುಕರ್ನಾಟಕ ಸರ್ಕಾರ ಜಾರಿಗೆ ತಂದಿದ್ದ ತಿದ್ದುಪಡಿ ಕಾಯಿದೆಯು ಮೊದಲೇ ಹಣ ಪಾವತಿಸಿ ಟೋಕನ್‌ ಪಡೆದು ಆಡುವ ಇಲ್ಲವೇ ನಂತರ ಪಾವತಿಸಬಹುದಾದ ಜೂಜು ಅಥವಾ ಬೆಟ್ಟಿಂಗ್‌ ಗಳನ್ನು ನಿಷೇಧಿಸಿತ್ತು. ಅಲ್ಲದೆ ಇದು ಯಾವುದೇ ಜೂಜಾಟಕ್ಕೆ ಸಂಬಂಧಿಸಿದಂತೆ ವರ್ಚುವಲ್‌ ನಗದು ಮತ್ತು ಹಣದ ಎಲೆಕ್ಟ್ರಾನಿಕ್‌ ವರ್ಗಾವಣೆಯನ್ನು ಕೂಡ ತಡೆಯುತ್ತಿತ್ತು. ತಿದ್ದುಪಡಿ ಕಾಯಿದೆ ಉಲ್ಲಂಘಿಸಿದರೆ ಗರಿಷ್ಠ ಮೂರು ವರ್ಷಗಳ ಜೈಲು ಶಿಕ್ಷೆ ಮತ್ತು ₹ 1 ಲಕ್ಷದವರೆಗೆ ದಂಡ ವಿಧಿಸಬಹುದಾಗಿತ್ತು.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement