ನವದೆಹಲಿ: ಮಧ್ಯಪ್ರದೇಶದ ರತ್ಲಂ ಜಿಲ್ಲೆಯಲ್ಲಿ ಮಹಿಳೆಯೊಬ್ಬರು ಮಂಗಳವಾರ (ಮಾರ್ಚ್ 29) ಎರಡು ತಲೆ ಮತ್ತು ಮೂರು ಕೈಗಳಿರುವ ಮಗುವಿಗೆ ಜನ್ಮ ನೀಡಿದ್ದಾರೆ.
ನವಜಾತ ಶಿಶುವನ್ನು ಹೆಚ್ಚಿನ ಚಿಕಿತ್ಸೆಗಾಗಿ ಇಂದೋರ್‌ನ ಮಹಾರಾಜ ಯಶವಂತರಾವ್ ಆಸ್ಪತ್ರೆಯ ಎನ್ ಐಸಿಯು ಗೆ ದಾಖಲಿಸಲಾಗಿದೆ. ಮಗುವಿಗೆ ಎರಡು ತಲೆಗಳು, ಒಂದು ದೇಹ, ಮೂರು ಕೈಗಳಿವೆ. ಎರಡು ಎಲ್ಲರಿಗೂ ಇರುವಂತೆ ಸಾಮಾನ್ಯ ಸ್ಥಾನದಲ್ಲಿದ್ದರೆ ಒಂದು ಮಗುವಿನ ತಲೆಯ ಹತ್ತಿರವಿದೆ. ಅಲ್ಲದೆ ಮಗು ಎರಡು ಹೃದಯಗಳನ್ನು ಹೊಂದಿದೆ.
advertisement
9535127775 / 9901837775 / 6364528715 / 08362775155 / https://icsmpucollege.com/
ಮಾಹಿತಿಯ ಪ್ರಕಾರ, ನೀಮ್ ಚೌಕ್‌ನ ನಿವಾಸಿಯಾಗಿದ್ದ ಮಹಿಳೆಗೆ ಅಲ್ಟ್ರಾಸೌಂಡ್ ನಡೆಸಿದ ವೇಳೆ, ಅವಳಿ ಮಕ್ಕಳಿದ್ದಾರೆ ಎಂದು ವೈದ್ಯರು ಪೋಷಕರಿಗೆ ತಿಳಿಸಿದ್ದರು, ಆದರೆ ಈ ಸ್ಥಿತಿಯ ಬಗ್ಗೆ ವಿವರಿಸಿರಲಿಲ್ಲ ಎಂದು ದೂರಿದ್ದಾರೆ.
ಮಕ್ಕಳ ವಿಶೇಷ ತಜ್ಞ ಡಾ.ಬ್ರಿಜೇಶ್ ಲಹೋಟಿ ಅವರ ಪ್ರಕಾರ, ಮಗುವಿನ ಈ ಸ್ಥಿತಿಯನ್ನು ಡೈಸೆಫಾಲಿಕ್ ಪ್ಯಾರಾಪಾಗಸ್ ಎಂದು ಕರೆಯಲಾಗುತ್ತದೆ, ಇದು ಒಂದೇ ದೇಹದ ಮೇಲೆ ಎರಡು ತಲೆಗಳನ್ನು ಅಕ್ಕಪಕ್ಕದಲ್ಲಿ ಹೊಂದಿರುವ ಅಪರೂಪದ ಭಾಗಶಃ ಅವಳಿ ರೂಪವಾಗಿದೆ.
ಇಂತಹ ಪ್ರಕರಣಗಳು ಅಪರೂಪ ಮತ್ತು ಶಿಶುಗಳ ಸ್ಥಿತಿಯು ವಿಶೇಷವಾಗಿ ಆರಂಭಿಕ ದಿನಗಳಲ್ಲಿ ಅನಿಶ್ಚಿತವಾಗಿರುತ್ತದೆ , ಹೀಗಾಗಿ ಮಗುವನ್ನು ನಿಗಾದಲ್ಲಿ ಇರಿಸಿದ್ದೇವೆ. ಸದ್ಯಕ್ಕೆ ಯಾವುದೇ ರೀತಿಯ ಶಸ್ತ್ರಚಿಕಿತ್ಸೆಗೆ ಯೋಚಿಸಿಲ್ಲ” ಎಂದು ಅವರು ಮಾಧ್ಯಮಗಳಿಗೆ ತಿಳಿಸಿದರು.
ನಿಮ್ಮ ಕಾಮೆಂಟ್ ಬರೆಯಿರಿ