ಅವಿವಾಹಿತ ಮಗಳು ತನ್ನ ಮದುವೆ ಖರ್ಚನ್ನು ಪೋಷಕರಿಂದ ಪಡೆಯಬಹುದು: ಹೈಕೋರ್ಟ್

ರಾಯ್‌ಪುರ: ಹಿಂದೂ ದತ್ತು ಮತ್ತು ನಿರ್ವಹಣೆ ಕಾಯ್ದೆಯಡಿ ಅವಿವಾಹಿತ ಮಗಳು ತನ್ನ ಪೋಷಕರಿಂದ ಮದುವೆಯ ಖರ್ಚನ್ನು ಪಡೆಯಲು ಅರ್ಹಳು ಎಂದು ಛತ್ತೀಸ್‌ಗಢ ಹೈಕೋರ್ಟ್ ಹೇಳಿದೆ. “
ಭಾರತೀಯ ಸಮಾಜದಲ್ಲಿ ಸಾಮಾನ್ಯವಾಗಿ ಮದುವೆಗೂ ಮುನ್ನ ಮತ್ತು ಮದುವೆಯ ನಂತರ ಹಲವು ರೀತಿಯ ವೆಚ್ಚಗಳನ್ನು ಮಾಡಬೇಕಾಗುತ್ತದೆ. ಆ ಹಣವನ್ನು ಪೋಷಕರಿಂದ ಮಗಳು ಪಡೆಯಬಹುದು ಎಂದು ಛತ್ತೀಸ್​ಗಢ ಹೈಕೋರ್ಟ್ ಹೇಳಿದೆ ಎಂದು ಬಾರ್ ಮತ್ತು ಬೆಂಚ್ ವರದಿ ಮಾಡಿದೆ.
ಹೆಣ್ಣುಮಕ್ಕಳು ತಮ್ಮ ಮದುವೆಗೆ ಪೋಷಕರಿಂದ ಹಣ ಪಡೆಯಬಹುದು ಎಂಬ ಬಗ್ಗೆ ಹಕ್ಕನ್ನು ಕೊಡಲಾಗಿದೆ. ಅಂತಹ ಹಕ್ಕುಗಳನ್ನು ಅವಿವಾಹಿತ ಹೆಣ್ಣುಮಕ್ಕಳು ಪ್ರತಿಪಾದಿಸಿದಾಗ ನ್ಯಾಯಾಲಯ ನಿರಾಕರಿಸಲು ಸಾಧ್ಯವಿಲ್ಲ ಎಂದು ಛತ್ತೀಸ್​ಗಢದ ಉಚ್ಚ ನ್ಯಾಯಾಲಯವು ಹೇಳಿದೆ
ವಿವಾಹದ ಉದ್ದೇಶಕ್ಕಾಗಿ ತನ್ನ ಪೋಷಕರಿಂದ 25 ಲಕ್ಷ ರೂ. ಮೊತ್ತವನ್ನು ಕೋರಿ ಅವಿವಾಹಿತ ಮಗಳು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ಕೌಟುಂಬಿಕ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾದ ಮೇಲ್ಮನವಿಯನ್ನು ನ್ಯಾಯಮೂರ್ತಿಗಳಾದ ಗೌತಮ್ ಭಾದುರಿ ಮತ್ತು ಸಂಜಯ್ ಎಸ್ ಅಗರವಾಲ್ ಅವರ ವಿಭಾಗೀಯ ಪೀಠವು ವಿಚಾರಣೆ ನಡೆಸುತ್ತಿದೆ.

ಪ್ರಮುಖ ಸುದ್ದಿ :-   'ಅನುಮಾನ ಆಧರಿಸಿ ಇವಿಎಂ ವಿರುದ್ಧ ನಿರ್ದೇಶನ ನೀಡಲು ಸಾಧ್ಯವೇ? : ಸುಪ್ರೀಂ ಕೋರ್ಟ್ ಪ್ರಶ್ನೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement