ಕರ್ನಾಟಕ ಸಾಹಿತ್ಯ ಅಕಾಡೆಮಿ ವಿವಿಧ ಪ್ರಶಸ್ತಿಗಳು ಪ್ರಕಟ: ಜಿನದತ್ತ ದೇಸಾಯಿ, ನಾ.ಮೊಗಸಾಲೆ ಸೇರಿ ಐವರಿಗೆ 2021ನೇ ಸಾಲಿನ ಗೌರವ ಪ್ರಶಸ್ತಿ, ಸಂಪೂರ್ಣ ಪಟ್ಟಿ ಇಲ್ಲಿದೆ

ಬೆಂಗಳೂರು: ಕರ್ನಾಟಕ ಸಾಹಿತ್ಯ ಅಕಾಡೆಮಿ 2021ನೇ ಸಾಲಿನ ವರ್ಷದ ಗೌರವ ಪ್ರಶಸ್ತಿ, ಸಾಹಿತ್ಯ ಶ್ರೀ ಹಾಗೂ 2020ನೇ ಸಾಲಿನ ಪುಸ್ತಕ ಬಹುಮಾನ ಮತ್ತು ವಿವಿಧ ದತ್ತಿ ಬಹುಮಾನ ಪ್ರಶಸ್ತಿಗಳನ್ನು ಗುರುವಾರ ಪ್ರಕಟಿಸಲಾಗಿದೆ.
ವರ್ಷದ ಗೌರವ ಪ್ರಶಸ್ತಿಗೆ ಧಾರಾವಾಡದ ಹಿರಿಯ ಸಾಹಿತಿ ಜಿನದತ್ತ ದೇಸಾಯಿ, ಕಾಸರಗೋಡಿನ ಡಾ. ನಾ.ಮೊಗಸಾಲೆ, ವಿಜಯಪುರದ ಡಾ. ಸರಸ್ವತಿ ಚಿಮ್ಮಲಗಿ, ಬೆಳಗಾವಿಯ ಪ್ರೊ. ಬಸವರಾಜ ಕಲ್ಗುಡಿ, ಚಿತ್ರದುರ್ಗದ ಯಲ್ಲಪ್ಪ ಕೆ.ಕೆ.ಪುರ ಆಯ್ಕೆ ಆಗಿದ್ದಾರೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಬಿ.ವಿ.ವಸಂತಕುಮಾರ್‌ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಪ್ರಶಸ್ತಿ 50 ಸಾವಿರ ರೂ.ನಗದಿ ಹಾಗೂ ಮತ್ತು ಪುರಸ್ಕಾರ ಒಳಗೊಂಡಿದೆ ಎಂದು ಹೇಳಿದರು.

ಸಾಹಿತ್ಯಶ್ರೀ ಪ್ರಶಸ್ತಿ ಪುರಸ್ಕೃತರು..

ಸಾಹಿತ್ಯಶ್ರೀ ಪ್ರಶಸ್ತಿಗೆ 10 ಮಂದಿಯನ್ನು ಆಯ್ಕೆ ಮಾಡಲಾಗಿದೆ. ಈ ಪ್ರಶಸ್ತಿ 25 ಸಾವಿರ ರೂ. ಮತ್ತು ಪುರಸ್ಕಾರ ಒಳಗೊಂಡಿದೆ. ಪುಸ್ತಕ ಬಹುಮಾನ ತಲಾ 25 ಸಾವಿರ ರೂ. ಮತ್ತು ಸ್ಮರಣಿಕೆ ಹೊಂದಿದೆ ಎಂದು ತಿಳಿಸಿದರು.
2021ನೇ ಸಾಲಿನ ಸಾಹಿತ್ಯ ಶ್ರೀ ಪುರಸ್ಕೃತರು:
ಡಾ| ಚಂದ್ರಕಲಾ ಬಿದರಿ, ಪ್ರೊ| ಎಂ.ಎನ್‌.ವೆಂಕಟೇಶ್‌, ಡಾ| ಚನ್ನಬಸವಯ್ಯ ಹಿರೇಮಠ, ಡಾ| ಮ.ರಾಮಕೃಷ್ಣ, ಅಬ್ದುಲ್‌ ರಶೀದ್‌, ಡಾ. ವೈ.ಎಂ.ಭಜಂತ್ರಿ, ಜೋಗಿ, ಮೈಸೂರು ಕೃಷ್ಣಮೂರ್ತಿ, ಗಣೇಶ ಅಮೀನಗಡ, ಆಲೂರು ದೊಡ್ಡನಿಂಗಪ್ಪ.

2020ನೇ ಸಾಲಿನ ಪುಸ್ತಕ ಬಹುಮಾನ ಪುರಸ್ಕೃತರು:
ಆರನಕಟ್ಟೆ ರಂಗನಾಥ ( ಕಾವ್ಯ -ಕಾರುಣ್ಯದ ಮೋಹಕ ನವಿಲುಗಳೆ ), ಮಂಜುಳಾ ಹಿರೇಮಠ (ಸಂಕಲ-ಗಾಯಗೊಂಡವರಿಗೆ ), ಎಚ್‌.ಟಿ.ಪೊತೆ ( ಕಾದಂಬರಿ-ಬಯಲೆಂಬೊ ಬಯಲು ), ಎಸ್‌. ಸುರೇಂದ್ರನಾಥ್‌ (ಸಣ್ಣಕತೆ: ಬಂಡಲ್‌ ಕತೆಗಳು), ಮಂಗಳ ಟಿ.ಎಸ್‌. (ನಾಟಕ -ಆರೋಹಿ ), ಎನ್‌. ರಾಮನಾಥ್‌ (ಲಲಿತ ಪ್ರಬಂಧ-ನಿದ್ರಾಂಗನೆಯ ಸೆಳವಿನಲ್ಲಿ ), ಭಾರತಿ ಬಿ.ವಿ ( ಪ್ರವಾಸ ಸಾಹಿತ್ಯ -ನಕ್ಷತ್ರಗಳ ಸುಟ್ಟ ನಾಡಿನಲ್ಲಿ ), ಕೃಷ್ಣ ಕೊಲ್ಲಾರ ಕುಲಕರ್ಣಿ ( ಜೀವನಚರಿತ್ರೆ/ ಆತ್ಮಕಥೆ  - ಗ್ರಾಮ ಸ್ವರಾಜ್ಯ’ ಸಾಕಾರಗೊಳಿಸಿದ ರಾಮಪ್ಪ ಬಾಲಪ್ಪ ಬಿದರಿ), ಬಸವರಾಜ ಸಬರದ (ಸಾಹಿತ್ಯ ವಿಮರ್ಶೆ – ಹೈದರಾಬಾದ್‌ ಕರ್ನಾಟಕದ ಆಧುನಿಕ ಸಾಹಿತ್ಯ ಮೀಮಾಂಸೆ), ಕೆ.ರವೀಂದ್ರನಾಥ (ಗ್ರಂಥ ಸಂಪಾದನೆ -ಲಿಂಗಣ್ಣ ಕವಿಯ ವರರಮ್ಯ ರತ್ನಾಕರ), ವೈ.ಜಿ. ಭಗವತಿ (ಮಕ್ಕಳ ಸಾಹಿತ್ಯ-ಮತ್ತೆ ಹೊಸ ಗೆಳೆಯರು), ಎಸ್‌.ಪಿ. ಯೋಗಣ್ಣ (ವಿಜ್ಞಾನ ಸಾಹಿತ್ಯ- ಆಧ್ಯಾತ್ಮಿಕ ಆರೋಗ್ಯ ದರ್ಷನ), ಎಂ.ಎಂ.ಗುಪ್ತ (ಮಾನವಿಕ – ಗಾಂಧೀಯ ಅರ್ಥಶಾಸ್ತ್ರ ), ಪಿ. ತಿಪ್ಪೇಸ್ವಾಮಿ ಚಳ್ಳಕೆರೆ (ಸಂಶೋಧನೆ- ಮ್ಯಾಸಬೇಡರ ಮೌಖಿಕ ಕಥನಗಳು), ಕೇಶವ ಮಳಗಿ (ಅನುವಾದ-ಹೂವಿನ ಸುಗಂಧ ), ಸುಧಾಕರನ್‌ ರಾಮಂತಳಿ (ಅನುವಾದ-ಶಿವಂಡೆ ಕಡುಂತುಡಿ ), ಅನುವಾದ-ಕನ್ನಡದಿಂದ ಭಾರತೀಯ ಭಾಷೆಗೆ ), ನರಹಳ್ಳಿ ಬಾಲಸುಬ್ರಹ್ಮಣ್ಯ ( ವೈಚಾರಿಕ ಬರಹ-ಪದ ಸೋಪಾನ), ಸಿದ್ಧಗಂಗಯ್ಯ ಹೊಲತಾಳು (ಸಂಕೀರ್ಣ ಸುವರ್ಣಮುಖಿ), ಎಸ್‌.ಬಿ. ಬಸೆಟ್ಟಿ (ಲೇಖಕರ ಮೊದಲ ಸ್ವತಂತ್ರಕೃತಿ- ಭಾರತದ ರಾಷ್ಟ್ರಧ್ವಜ: ವಿಕಾಸ ಹಾಗೂ ಸಂಹಿತೆ ).

2020ನೇ ಸಾಲಿನ ವಿವಿಧ ದತ್ತಿ ಬಹುಮಾನ ಪ್ರಕಟಿಸಲಾಗಿದ್ದು, 10 ದತ್ತಿನಿಧಿ ಬಹುಮಾನ ಪುರಸ್ಕೃತರು
ಕಾವ್ಯ- ಹಸ್ತ ಪ್ರತಿ (ಚಿ.ಶ್ರೀನಿವಾಸರಾಜು ದತ್ತಿನಿಧಿ ಬಹುಮಾನ)-ಬೆಳದಿಂಗಳ ಚೆಲುವು: ಪದ್ಮಜಾ ಜಯತೀರ್ಥ ಉಮರ್ಜಿ
ಕಾದಂಬರಿ (ಚದುರಂಗದತ್ತಿ ನಿಧಿ ಬಹುಮಾನ) -ದೊಡ್ಡತಾಯಿ: ಎಂಎಸ್ ವೇದಾ
ಲಲಿತ ಪ್ರಬಂಧ (ವಿ.ಸೀತಾರಾಮಯ್ಯ ಸೋದರಿ ಇಂದಿರಾದತ್ತಿ ನಿಧಿ ಬಹುಮಾನ) -ವಠಾರ ಮೀಮಾಂಸೆ : ಆರತಿ ಘಟಿಕಾರ್
ಜೀವನ ಚರಿತ್ರೆ (ಸಿಂಪಿ ಲಿಂಗಣ್ಣ ದತ್ತಿನಿಧಿ ಬಹುಮಾನ)-ಕಾಗೆ ಮುಟ್ಟಿದ ನೀರು: ಪುರುಷೋತ್ತಮ ಬಿಳಿಮಲೆ
ಸಾಹಿತ್ಯ ವಿಮರ್ಷೆ (ಪಿ.ಶ್ರೀನಿವಾಸರಾವ್ ದತ್ತಿನಿಧಿ ಬಹುಮಾನ)-ಕುವೆಂಪು ಸ್ತ್ರೀಸಂವೇದನೆ:ತಾರಿಣಿ ಶುಭದಾಯಿನಿ
ಅನುವಾದ-1 (ಎಲ್.ಗುಂಡಪ್ಪ ಮತ್ತು ಶಾರದಮ್ಮ ದತ್ತಿ ನಿಧಿ ಬಹುಮಾನ)-ಸೀತಾ: ಪದ್ಮರಾಜ ದಂಡಾವತಿ
ಲೇಖಕರ ಮೊದಲ ಸ್ವತಂತ್ರಕೃತಿ (ಮಧುರಚೆನ್ನ ದತ್ತಿ ನಿಧಿ ಬಹುಮಾನ )-ಕೂರ್ಗ್ ರೆಜಿಮೆಂಟ್: ಕುಶ್ವಂತ್ ಕೋಳಿಬೈಲು
ಕನ್ನಡದಿಂದ ಇಂಗ್ಲಿಷಿಗೆ ಅನುವಾದ (ಅಮೆರಿಕನ್ನಡ ದತ್ತಿನಿಧಿ ಬಹುಮಾನ)-The Bride in the Rainy Mountains-ಕೆ.ಎಂ.ಶ್ರೀನಿವಾಸ ಗೌಡ, ಜಿ.ಕೆ.ಶ್ರೀಕಂಠ ಮೂರ್ತಿ
ವೈಚಾರಿಕ/ಅಂಕಣ ಬರಹ (ಬಿ.ವಿ. ವೀರಭದ್ರಪ್ಪ ದತ್ತಿನಿಧಿಬಹುಮಾನ)-ಸಮರಸದ ದಾಂಪತ್ಯ: ನಡಹಳ್ಳಿ ವಸಂತ
ದಾಸ ಸಾಹಿತ್ಯ (ಶ್ರೀಮತಿಜಲಜಾ ಶ್ರೀಪತಿ ಆಚಾರ್ಯ ಗಂಗೂರ್ ದತ್ತಿ ನಿಧಿ ಬಹುಮಾನ)-ಪುರಂದರದಾಸರ ಬಂಡಾಯಪ್ರಜ್ಞೆ: ಶ್ರೀನಿವಾಸ ಸಿರನೂರಕರ್

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement