ರಷ್ಯಾದಿಂದ ತೈಲ ಆಮದು ಹೆಚ್ಚಳದ ವಿರುದ್ಧ ಭಾರತಕ್ಕೆ ಎಚ್ಚರಿಕೆ ನೀಡಿದ ಅಮೆರಿಕ

ನವದೆಹಲಿ: ರಷ್ಯಾದಿಂದ ತೈಲ ಆಮದು ಪ್ರಮಾಣದಲ್ಲಿ ಭಾರತವು ಗಣನೀಯವಾಗಿ ಹೆಚ್ಚಳ ಮಾಡುತ್ತಿರುವುದು ಭಾರತವನ್ನು ‘ದೊಡ್ಡ ಅಪಾಯ’ಕ್ಕೆ ಸಿಲುಕಿಸಲಿದೆ ಎಂದು ಅಮೆರಿಕ ಎಚ್ಚರಿಸಿದೆ.
ಉಕ್ರೇನ್ ಮೇಲಿನ ದಾಳಿ ಕಾರಣ ರಷ್ಯಾ ವಿರುದ್ಧ ವಿವಿಧ ನಿರ್ಬಂಧಗಳನ್ನು ವಿಧಿಸಲು ಅಮೆರಿಕ ಸಿದ್ಧತೆ ನಡೆಸುತ್ತಿರುವ ಸಂದರ್ಭದಲ್ಲಿ, ಭಾರತವು ರಷ್ಯಾದಿಂದ ತೈಲ ಆಮದು ಪ್ರಮಾಣದಲ್ಲಿ ಗಣನೀಯವಾಗಿ ಹೆಚ್ಚಳ ಮಾಡುತ್ತಿರುವುದು ಸರಿಯಲ್ಲ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ರಷ್ಯಾ ಮೇಲೆ ಅಮೆರಿಕ ಹೇರಿರುವ ಹಾಲಿ ನಿರ್ಬಂಧಗಳು, ರಷ್ಯಾ ತೈಲವನ್ನು ಖರೀದಿ ಮಾಡದಂತೆ ಯಾವ ದೇಶವನ್ನೂ ನಿರ್ಬಂಧಿಸುವುದಿಲ್ಲ. ಆದರೆ, ವಿವಿಧ ದೇಶಗಳು ರಷ್ಯಾದಿಂದ ಖರೀದಿಸುತ್ತಿರುವ ತೈಲ ಪ್ರಮಾಣವನ್ನು ಸಹಜ ಮಟ್ಟಕ್ಕೆ ಸೀಮಿತಗೊಳಿಸುವಂತೆ ನಿರ್ಬಂಧಿಸುವ ನಿಟ್ಟಿನಲ್ಲಿ ಅಮೆರಿಕ ಮುಂದಾಗಲಿದೆ ಎಂದು ಈ ಎಚ್ಚರಿಸಿದೆ.
ಅಮೆರಿಕದ ಉಪ ರಾಷ್ಟ್ರೀಯ ಆರ್ಥಿಕ ಭದ್ರತಾ ಸಲಹೆಗಾರ ದಲೀಪ್ ಸಿಂಗ್ ಅವರು ಭಾರತಕ್ಕೆ ಭೇಟಿ ನೀಡಿರುವ ಸಂದರ್ಭದಲ್ಲಿಯೇ, ರಷ್ಯಾ ವಿದೇಶಾಂಗ ಸಚಿವ ಸೆರ್ಜೈ ಲಾವ್ರೋವ್ ಅವರು ಎರಡು ದಿನಗಳ ಪ್ರವಾಸಕ್ಕೆ ನವದೆಹಲಿಗೆ ಭೇಟಿ ನೀಡುತ್ತಿದ್ದು, ಈ ವೇಳೆ ಅಮೆರಿಕ ಅಧಿಕಾರಿಗಳಿಂದ ಈ ಹೇಳಿಕೆ ಬಂದಿದೆ.

ಪ್ರಮುಖ ಸುದ್ದಿ :-   ವೀಡಿಯೊಗಳು : ಪೇಟ ಧರಿಸಿ ಐತಿಹಾಸಿಕ ಪಾಟ್ನಾ ಗುರುದ್ವಾರದಲ್ಲಿ ಭಕ್ತರಿಗೆ ಊಟ ಬಡಿಸಿದ ಪ್ರಧಾನಿ ಮೋದಿ

ಜಗತ್ತಿನ ಮೂರನೇ ಅತಿ ದೊಡ್ಡ ತೈಲ ಆಮದು ದೇಶವಾಗಿರುವ ಭಾರತವು, ರಿಯಾಯಿತಿ ದರದಲ್ಲಿ ಕಚ್ಚಾ ತೈಲ ನೀಡುವ ರಷ್ಯಾ ಆಫರ್ ಪಡೆದುಕೊಂಡಿತ್ತು. ಫೆಬ್ರವರಿ 24ರಿಂದ ರಷ್ಯಾದಿಂದ ಕನಿಷ್ಠ 13 ಮಿಲಿಯನ್ ಬ್ಯಾರೆಲ್ ತೈಲ ಆಮದು ಮಾಡಿಕೊಳ್ಳಲಾಗಿದೆ. 2021ರ ಇಡೀ ವರ್ಷದಲ್ಲಿ ರಷ್ಯಾದಿಂದ ಖರೀದಿ ಮಾಡಿದ್ದು 16 ಮಿಲಿಯನ್ ಬ್ಯಾರೆಲ್ ಆಗಿದೆ.
“ರಷ್ಯಾ ಒದಗಿಸುವ ರಿಯಾಯಿತಿ ದರದ ತೈಲವನ್ನು ಭಾರತ ಖರೀದಿ ಮಾಡುವುದಕ್ಕೆ ಅಮೆರಿಕದಿಂದ ಯಾವುದೇ ಆಕ್ಷೇಪಣೆಯಿಲ್ಲ. ಆದರೆ ಹಿಂದಿನ ವರ್ಷಕ್ಕೆ ಹೋಲಿಸಿದರೆ ಆಮದು ಗಣನೀಯವಾಗಿ ಹೆಚ್ಚಬಾರದು ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ತೈಲ ಖರೀದಿಗೆ ಸಂಬಂಧಿಸಿದಂತೆ ರಷ್ಯಾ ಮತ್ತು ಭಾರತ ನಡುವಿನ ಮಾತುಕತೆ ಕುರಿತು ಅಮೆರಿಕಕ್ಕೆ ಅರಿವಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರರರು ತಿಳಿಸಿದ್ದಾರೆ. “ಉಕ್ರೇನ್ ಮೇಲೆ ನಡೆಸುತ್ತಿರುವ ಈ ವಿನಾಶಕಾರಿ ಯುದ್ಧದ ಆಯ್ಕೆಯನ್ನು ಕ್ರೆಮ್ಲಿನ್ ಆದಷ್ಟು ಶೀಘ್ರವೇ ನಿಲ್ಲಿಸುವಂತೆ ಒತ್ತಡ ಹೇರಲು ಕಠಿಣ ನಿರ್ಬಂಧಗಳು ಸೇರಿದಂತೆ, ಸಮಗ್ರ ಪ್ರತಿಕ್ರಿಯೆಗಾಗಿ ಭಾರತ ಮತ್ತು ಜಗತ್ತಿನ ಎಲ್ಲ ಕಡೆಯಲ್ಲಿನ ನಮ್ಮ ಪಾಲುದಾರರ ಜೊತೆ ಮಾತುಕತೆ ಮುಂದುವರಿಸುತ್ತೇವೆ” ಎಂದು ವಕ್ತಾರರು ಹೇಳಿದ್ದಾರೆ.
ಅಮೆರಿಕ ಮತ್ತು ಅದರ ಮಿತ್ರ ದೇಶಗಳು ವಿಧಿಸುತ್ತಿರುವ ನಿರ್ಬಂಧಗಳನ್ನು ಕಡೆಗಣಿಸಿ ರಷ್ಯಾ ಪ್ರಸ್ತಾಪ ಪರಿಗಣಿಸುತ್ತಿರುವ ಭಾರತದ ನಡೆಯನ್ನು ಆಸ್ಟ್ರೇಲಿಯಾ ಕೂಡ ಟೀಕಿಸಿದೆ.
ಪ್ರಜಾಪ್ರಭುತ್ವಗಳು ಜೊತೆಯಾಗಿ ಕೆಲಸ ಮಾಡುವುದು ಈ ಸಮಯದಲ್ಲಿ ಮುಖ್ಯವಾಗಿದೆ. ಎರಡನೇ ವಿಶ್ವ ಯುದ್ಧದ ಬಳಿಕ ನಾವು ರೂಪಿಸಿರುವ ನಿಯಮ ಆಧಾರಿತ ನಡೆಯನ್ನು ಉಳಿಸಿಕೊಳ್ಳಬೇಕಿದೆ ಎಂದು ಆಸ್ಟ್ರೇಲಿಯಾದ ವಾಣಿಜ್ಯ ಸಚಿವ ಡೆನ್ ಟೆಹಾನ್ ಹೇಳಿದ್ದಾರೆ.

ಪ್ರಮುಖ ಸುದ್ದಿ :-   ದೆಹಲಿ ಸಿಎಂ ನಿವಾಸದಲ್ಲಿ ತನ್ನ ಮೇಲೆ ಹಲ್ಲೆ ; ಎಎಪಿ ನಾಯಕಿ ಸ್ವಾತಿ ಮಲಿವಾಲ್ ಎಂದು ಹೇಳಿಕೊಂಡ ಮಹಿಳೆಯಿಂದ ಪೊಲೀಸರಿಗೆ 2 ಕರೆಗಳು : ಮೂಲಗಳು

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement