ಹೊಸ ಟೋಲ್‌ಗಳ ಶುಲ್ಕ ಸೇರಿ ಟಿಕೆಟ್‌ ದರಗಳು ಅನ್ವಯ: ರಿಯಾಯಿತಿ ಮಾಸಿಕ ಬಸ್‌ ಪಾಸ್‌ ಸೌಲಭ್ಯ ಪಡೆದುಕೊಳ್ಳಲು ಕೋರಿಕೆ

posted in: ರಾಜ್ಯ | 0

ಹುಬ್ಬಳ್ಳಿ: ಕೆಲವು ಮಾರ್ಗಗಳಲ್ಲಿ ಹೊಸದಾಗಿ ಟೋಲ್‌ಗಳು ಪ್ರಾರಂಭವಾಗಿರುವುದರಿಂದ ಟಿಕೆಟ್ ಪಡೆದು ಪ್ರಯಾಣ ಮಾಡುವವರಿಗೆ ಟೋಲ್ ಶುಲ್ಕ ಸೇರಿ ಟಿಕೆಟ್‌ ದರಗಳು ಅನ್ವಯವಾಗುತ್ತದೆ. ಆದರೆ ಮಾಸಿಕ ರಿಯಾಯಿತಿ ಬಸ್‌ ಪಾಸ್‌ ಪಡೆದು ಪ್ರಯಾಣಿಸಿದರೆ ವೆಚ್ಚ ಬಹಳ ಕಡಿಮೆಯಾಗುತ್ತದೆ ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹೇಳಿದೆ.
ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವತಿಯಿಂದ ಈಗಾಗಲೇ ದಿನನಿತ್ಯ ನಿಯಮಿತವಾಗಿ ಸಂಚರಿಸುವ ಎಲ್ಲ ಸಾರ್ವಜನಿಕ ಪ್ರಯಾಣಿಕರ ಹಿತದೃಷ್ಟಿಯಿಂದ ಮಾಸಿಕ ರಿಯಾಯಿತಿ ಬಸ್ ಪಾಸ್‌ಗಳನ್ನು ಸಂಸ್ಥೆಯ ವ್ಯಾಪ್ತಿಯ ಎಲ್ಲಾ ವಿಭಾಗಗಳಲ್ಲಿ ವಿತರಿಸಲಾಗುತ್ತಿದೆ.
ಆದರೆ ಪ್ರಸ್ತುತ ಕೆಲವು ಮಾರ್ಗಗಳಲ್ಲಿ ಹೊಸದಾಗಿ ಟೋಲ್‌ಗಳು ಪ್ರಾರಂಭವಾಗಿರುವುದರಿಂದ ಟಿಕೆಟ್ ಪಡೆದು ಪ್ರಯಾಣ ಮಾಡುವವರಿಗೆ ಟೋಲ್ ಶುಲ್ಕ ಸೇರಿ ಟಿಕೆಟ್‌ ದರಗಳು ಅನ್ವಯವಾಗುತ್ತದೆ. ಈ ಮಾಸಿಕ ರಿಯಾಯಿತಿ ಬಸ್ ಪಾಸ್‌ಗಳನ್ನು ಸಾರ್ವಜನಿಕ ಪ್ರಯಾಣಿಕರು ಪಡೆದುಕೊಂಡಲ್ಲಿ ಒಟ್ಟಾರೆ ಅವರು ಒಂದು ತಿಂಗಳು ಟಿಕೆಟ್ ಪಡೆದು ಪ್ರಯಾಣಿಸಿದಲ್ಲಿ ತಗಲುವ ವೆಚ್ಚಕ್ಕೆ ಹೋಲಿಸಲಾಗಿ ಕನಿಷ್ಠ ಶೇ45 ರಿಂದ ಶೇ46ರಷ್ಟು ಪ್ರಯಾಣದ ವೆಚ್ಚದಲ್ಲಿ ಉಳಿತಾಯವಾಗುತ್ತದೆ. ಮಾಸಿಕ ರಿಯಾಯಿತಿ ಬಸ್ ಪಾಸುಗಳ ಕುರಿತು ಏನಾದರೂ ಅಹವಾಲುಗಳಿದ್ದರೆ ದೂರವಾಣಿ ಸಂಖ್ಯೆ -7760998003 ಸಂಪರ್ಕಿಸಲು ಕೋರಿದೆ.
ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯಾಪ್ತಿಯಲ್ಲಿ ಜಿಲ್ಲೆ, ತಾಲೂಕು ಹಾಗೂ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ವೇಳೆಗನುಸಾರವಾಗಿ ಸಾರಿಗೆ ಸೇವೆ ಲಭ್ಯವಿರುವುದರಿಂದ ಸಾರ್ವಜನಿಕ ಪ್ರಯಾಣಿಕರು ಈ ಮಾಸಿಕ ರಿಯಾಯಿತಿ ಬಸ್ ಪಾಸ್ ಸೇವೆಯ ಸದುಪಯೋಗ ಪಡೆದುಕೊಂಡು ಪ್ರಯಾಣದ ದರದಲ್ಲಿ ಉಳಿತಾಯ ಮಾಡಬಹುದಾಗಿದೆ. ಆದ್ದರಿಂದ ಸುಗಮ ಹಾಗೂ ಸುರಕ್ಷಿತ ಪ್ರಯಾಣಕ್ಕಾಗಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸುಗಳಲ್ಲಿಯೇ ಪ್ರಯಾಣಿಸುವಂತೆ ಮತ್ತು ಸಂಸ್ಥೆಯು ವಿತರಿಸುತ್ತಿರುವ ವಿವಿಧ ಮಾದರಿಯ ರಿಯಾಯಿತಿ ಬಸ್ ಪಾಸುಗಳ ಪ್ರಯೋಜನ ಪಡೆದು ಸಂಸ್ಥೆಯೊಂದಿಗೆ ಸಹಕರಿಸುವಂತೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಮುಖ್ಯ ಸಂಚಾರ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ಕೋರಿದ್ದಾರೆ.

ಓದಿರಿ :-   ಯುವಕನ ಕೈಗೆ ಮಗುಕೊಟ್ಟು ಮಹಿಳೆ ನಾಪತ್ತೆಯಾಗಿದ್ದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ಪ್ರೀತಿಗೆ ಅಡ್ಡಿಯಾದ ಮಗುವನ್ನು ದೂರ ಮಾಡಲು ಪ್ರೇಮಿ-ಪ್ರೇಮಿಕಾ ಮಾಡಿದ ಬೃಹನ್ನಾಟಕ ಬೆಳಕಿಗೆ..!

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 1

advertisement

ನಿಮ್ಮ ಕಾಮೆಂಟ್ ಬರೆಯಿರಿ