ರಷ್ಯಾ-ಉಕ್ರೇನ್‌ ನಡುವೆ ಭಾರತವು ಮಧ್ಯಸ್ಥಿಕೆ ವಹಿಸಬಹುದು: ರಷ್ಯಾದ ವಿದೇಶಾಂಗ ಸಚಿವರ ಮಹತ್ವದ ಹೇಳಿಕೆ

ನವದೆಹಲಿ: ರಷ್ಯಾ ಮತ್ತು ಉಕ್ರೇನ್‌ ನಡುವೆ ಭಾರತವು ಮಧ್ಯವರ್ತಿ ಪಾತ್ರ ವಹಿಸಬಹುದು ಎಂದು ರಷ್ಯಾದ ವಿದೇಶಾಂಗ ಸಚಿವ ಲಾವ್ರೊವ್ ಶುಕ್ರವಾರ ತಮ್ಮ ಅಧಿಕೃತ ಭೇಟಿಯ ವೇಳೆ ಮಹತ್ವದ ಹೇಳಿಕೆ ನೀಡಿದ್ದಾರೆ.

ಭಾರತವು ಒಂದು ಪ್ರಮುಖ ದೇಶವಾಗಿದೆ. ಭಾರತವು ಸಮಸ್ಯೆಯ ಪರಿಹಾರವನ್ನು ಒದಗಿಸುವ ಆ ಪಾತ್ರವನ್ನು ವಹಿಸುತ್ತದೆ ಎಂದಾದರೆ, ಭಾರತವು ಅಂತಾರರಾಷ್ಟ್ರೀಯ ಸಮಸ್ಯೆಗಳಿಗೆ ನ್ಯಾಯಯುತ ಮತ್ತು ತರ್ಕಬದ್ಧವಾದ ದೃಷ್ಟಿಕೋನವನ್ನು ಹೊಂದಿದ್ದರೆ, ಅಂತಹ ಪ್ರಕ್ರಿಯೆಯನ್ನು ಬೆಂಬಲಿಸಬಹುದು ಎಂದು ಅವರು ಹೇಳಿದರು.
ದೆಹಲಿಯಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಲಾವ್ರೊವ್, ಭಾರತವು ರಷ್ಯಾದ ಒಕ್ಕೂಟದಿಂದ ಏನನ್ನಾದರೂ ಖರೀದಿಸಲು ಬಯಸಿದರೆ “ಚರ್ಚೆ ಮಾಡಲು ಮತ್ತು ಪರಸ್ಪರ ಸ್ವೀಕಾರಾರ್ಹ ಸಹಕಾರವನ್ನು ತಲುಪಲು ಸಿದ್ಧವಾಗಿದೆ. ರಷ್ಯಾ ಮತ್ತು ಭಾರತವು ಉತ್ತಮ ಸಂಬಂಧವನ್ನು ಹೊಂದಿವೆ ಎಂದರು.

ಭದ್ರತಾ ಸವಾಲುಗಳನ್ನು ಎದುರಿಸಲು ಮಾಸ್ಕೋ ನವದೆಹಲಿಯನ್ನು ಹೇಗೆ ಬೆಂಬಲಿಸುತ್ತದೆ ಎಂದು ಕೇಳಿದಾಗ, ಎರಡು ದೇಶಗಳ ಮಾತುಕತೆಗಳು ನಾವು ಹಲವು ದಶಕಗಳಿಂದ ಭಾರತದೊಂದಿಗೆ ಅಭಿವೃದ್ಧಿಪಡಿಸಿದ ಸಂಬಂಧಗಳಿಂದ ನಿರೂಪಿಸಲ್ಪಟ್ಟಿವೆ. ಸಂಬಂಧಗಳು ಕಾರ್ಯತಂತ್ರದ ಪಾಲುದಾರಿಕೆಗಳಾಗಿವೆ…ಇದರ ಆಧಾರದ ಮೇಲೆ ನಾವು ನಮ್ಮ ಸಹಕಾರವನ್ನು ಉತ್ತೇಜಿಸುತ್ತಿದ್ದೇವೆ ಎಂದರು.

ಪ್ರಮುಖ ಸುದ್ದಿ :-   ಐಪಿಎಲ್‌ (IPL)2024: ಹಾರ್ದಿಕ್ ಪಾಂಡ್ಯ- ಲಸಿತ್ ಮಾಲಿಂಗ ನಡುವೆ ಮುನಿಸು..? ಈ ವೀಡಿಯೊಗಳನ್ನು ನೋಡಿ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement