20 ಕೆಜಿ ಆರ್‌ಡಿಎಕ್ಸ್‌, 20 ಸ್ಲೀಪರ್ ಸೆಲ್‌ಗಳಿವೆ : ಪ್ರಧಾನಿ ಮೋದಿ ಹತ್ಯೆಗೆ ಭಯೋತ್ಪಾದಕ ಗುಂಪುಗಳಿಂದ ಸ್ಕೆಚ್‌ ಎಂದು ಎನ್‌ಐಎಗೆ ಬೆದರಿಕೆ ಮೇಲ್‌

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೊಲ್ಲುವುದಾಗಿ ಎನ್‌ಐಎಗೆ ಇ-ಮೇಲ್ ಬಂದ ನಂತರ ಭದ್ರತಾ ಏಜೆನ್ಸಿಗಳು tIvfr ಕಟ್ಟೆಚ್ಚರ ವಹಿಸಿವೆ. ಈ ಷಡ್ಯಂತ್ರ ಬಯಲಾಗಬಾರದು ಎಂದು ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಇಮೇಲ್ ಕಳುಹಿಸಿದ ಬೆದರಿಕೆ ಹಾಕಿದ್ದಾನೆ.
ವರದಿಗಳ ಪ್ರಕಾರ, ಈ ಕೆಲಸಕ್ಕಾಗಿ ಕನಿಷ್ಠ 20 ಸ್ಲೀಪರ್ ಸೆಲ್‌ಗಳನ್ನು ಸಕ್ರಿಯಗೊಳಿಸಲಾಗಿದೆ. ಈ ಸ್ಲೀಪರ್ ಸೆಲ್‌ಗಳು 20 ಕೆಜಿ ಆರ್‌ಡಿಎಕ್ಸ್ ಅನ್ನು ಸಹ ಹೊಂದಿವೆ ಎಂದು ಇ ಮೇಲ್‌ ನಲ್ಲಿ ಹೇಳಲಾಗಿದೆ.
ಇ ಮೇಲ್ ಪ್ರಕಾರ, ಈ ಕೆಲಸವನ್ನು ಮಾಡಬಲ್ಲ ಜನರೊಂದಿಗೆ ಅವರು ಸಂಪರ್ಕದಲ್ಲಿದ್ದಾರೆ ಮತ್ತು ಈ ದೇಶಕ್ಕೆ ದೊಡ್ಡ ದುರಂತವನ್ನು ಉಂಟುಮಾಡುತ್ತಾರಂತೆ. ಅದಕ್ಕಾಗಿ ಫೆಬ್ರವರಿ 28 ರಂದು ದೇಶಾದ್ಯಂತ ಸ್ಲೀಪರ್ ಸೆಲ್‌ಗಳನ್ನು ಸಕ್ರಿಯಗೊಳಿಸಿರುವುದಾಗಿ ಹೇಳಿಕೊಂಡಿದ್ದಾರೆ.

ಇ ಮೇಲ್ ಸ್ವೀಕರಿಸಿರುವ ಎನ್ಐಎಯ ಮುಂಬೈ ಶಾಖೆ, ತಾನು ಇಮೇಲ್ ಅನ್ನು ವಿವಿಧ ಏಜೆನ್ಸಿಗಳೊಂದಿಗೆ ಹಂಚಿಕೊಂಡಿದೆ ಎಂದು ಹೇಳಿದೆ. ಸೈಬರ್ ಸೆಕ್ಯುರಿಟಿ ಏಜೆನ್ಸಿ ಈಗ ಇಮೇಲ್ ಕಳುಹಿಸಿರುವ ಐಪಿ ವಿಳಾಸವನ್ನು ಗುರುತಿಸಲು ಪ್ರಯತ್ನಿಸುತ್ತಿದೆ.
ಪ್ರಧಾನಿ ಮೋದಿಯನ್ನು ಕೊಲ್ಲುವುದಾಗಿ ತನಿಖಾ ಸಂಸ್ಥೆಗೆ ಬೆದರಿಕೆ ಇಮೇಲ್ ಬಂದಿರುವುದು ಇದೇ ಮೊದಲಲ್ಲ. 2018 ರಲ್ಲಿ, ಪುಣೆ ಪೊಲೀಸರಿಗೆ ಬರೆದ ಪತ್ರದಲ್ಲಿ “ರಾಜೀವ್ ಗಾಂಧಿ ಮಾದರಿಯ” ಶೈಲಿಯಲ್ಲಿ ಪ್ರಧಾನಿ ಮೋದಿಯನ್ನು ಹತ್ಯೆ ಮಾಡುವ ಸಂಚು ರೂಪಿಸಲಾಗಿದೆ ಎಂದು ಹೇಳಲಾಗಿತ್ತು.
ಇ ಮೇಲ್ ಸ್ವೀಕರಿಸಿರುವ ಎನ್ಐಎಯ ಮುಂಬೈ ಶಾಖೆ, ಇಮೇಲ್ ಅನ್ನು ವಿವಿಧ ಏಜೆನ್ಸಿಗಳೊಂದಿಗೆ ಹಂಚಿಕೊಂಡಿದೆ. ಮೇಲ್‌ ಕಳುಹಿಸಿದವರ ಐಪಿ ವಿಳಾಸವನ್ನು ಟ್ರ್ಯಾಕ್ ಮಾಡುತ್ತಿದ್ದಾರೆ ಮತ್ತು ಕಳುಹಿಸುವವರ ಬಗ್ಗೆ ಇತರ ಮಾಹಿತಿಯನ್ನು ಸಂಗ್ರಹಿಸುತ್ತಿದ್ದಾರೆ ಎಂದು ಬೆಳವಣಿಗೆಯ ನಿಕಟ ಮೂಲಗಳು ತಿಳಿಸಿವೆ. ಸದ್ಯಕ್ಕೆ ಎನ್‌ಐಎ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ

ಪ್ರಮುಖ ಸುದ್ದಿ :-   ವೀಡಿಯೊ...| ವಂದೇ ಭಾರತ ರೈಲಿನಡಿ ಸಿಲುಕಿದ ಹಸು ; ಪ್ರಾಣಾಪಾಯದಿಂದ ಪಾರಾಗಿದ್ದೇ ಒಂದು ವಿಸ್ಮಯ..

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement