ಇಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಸರ್ಕಾರದ ಭವಿಷ್ಯ ನಿರ್ಧಾರ

ಇಸ್ಲಾಮಾಬಾದ್: ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ಅವಿಶ್ವಾಸ ನಿರ್ಣಯದ ಮೇಲೆ ಇಂದು ಭಾನುವಾರ, ಮತದಾನ ನಡೆಯಲಿದ್ದು, ಇಮ್ರಾನ್ ಸರ್ಕಾರದ ಅಳಿವು ಅಥವಾ ಉಳಿವು ನಿರ್ಣಯವಾಗಲಿದೆ.
ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಮತದಾನ ನಡೆಯಲಿದ್ದು, ವಿರೋಧ ಪಕ್ಷಗಳು ಅವಿಶ್ವಾಸ ನಿರ್ಣಯ ಮಂಡಿಸಿದ ಸುಮಾರು ಒಂದು ತಿಂಗಳ ನಂತರ ಮತದಾನ ನಡೆಯುತ್ತಿದೆ.

342 ಸಂಖ್ಯಾ ಬಲವನ್ನು ಹೊಂದಿರುವ ಪಾಕ್ ಸಂಸತ್ತಿನಲ್ಲಿ ಇಮ್ರಾನ್‌ ಸರ್ಕಾರಕ್ಕೆ ಅಧಿಕಾರದಲ್ಲಿರಲು 172 ಮತಗಳು ಬೇಕು. ಆದರೆ ಸರ್ಕಾರದ ಅಂಗ ಪಕ್ಷಗಳೂ ಮಿತ್ರಪಕ್ಷಗಳ ಜೊತೆ ಕೈಜೋಡಿಸಿವೆ. ಹೀಗಾಗಿ ಇಮ್ರಾನ್ ಸರ್ಕಾರದ ಪರಿಸ್ಥಿತಿ ಡೋಲಾಯಮಾನವಾಗಿದೆ.
ಈ ನಡುವೆ ಪ್ರತಿಪಕ್ಷ ಶಾಸಕರು ಸಂಸತ್ತಿಗೆ ಆಗಮಿಸದಂತೆ ತಡೆಯಲು ಪಾಕಿಸ್ತಾನ್ ತೆಹ್ರಿಕ್ -ಇ-ಇನ್ಸಾಫ್ ಪಕ್ಷದ ಪ್ರಮುಖರು ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಅಲ್ಲದೆ ತಮ್ಮ ಪರವಾಗಿ ಬೀದಿಗಿಳಿದು ಶಾಂತಿಯುತವಾಗಿ ಯುವಕರು ಪ್ರತಿಭಟಿಸಬೇಕು ಎಂದು ಇಮ್ರಾನ್ ಖಾನ್ ಮನವಿ ಮಾಡಿರುವುದಾಗಿ ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement