ಹುಬ್ಬಳ್ಳಿ: ಎಸ್‌ಎಸ್‌ಎಲ್‌ಸಿ ಪರೀಕ್ಷೆ ವೇಳೆ ಜೇನು ದಾಳಿ- ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲು

posted in: ರಾಜ್ಯ | 0

ಹುಬ್ಬಳ್ಳಿ: ಕೇಶ್ವಾಪುರದ ಸೇಂಟ್ ಮೈಕಲ್ ಶಾಲೆಯ ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರದಲ್ಲಿ ಜೇನು ಹುಳುಗಳು ದಾಳಿ ನಡೆಸಿವೆ.
ಪರೀಕ್ಷೆ ಕೊಠಡಿಗೆ ನುಗ್ಗಿದ ಜೇನುಹುಳುಗಳು ಪರೀಕ್ಷೆ ವಿದ್ಯಾರ್ಥಿಗಳು, ಪೊಲೀಸ್​ ಸಿಬ್ಬಂದಿ, ಶಿಕ್ಷಕರ ಮೇಲೆ ದಾಳಿ ಮಾಡಿವೆ. ಸೋಮವಾರ ಗಣಿತ ವಿಷಯ ಪರೀಕ್ಷೆ ನಡೆಯುತ್ತಿತ್ತು. ಜೇನುಹುಳುಗಳು, ಪರೀಕ್ಷಾ ಕೇಂದ್ರಕ್ಕೆ​ ದಾಳಿ ಮಾಡಿದೆ. ಭಯದಿಂದ ವಿದ್ಯಾರ್ಥಿಗಳು ದಿಕ್ಕಾಪಾಲಾಗಿ ಹೊರ ಓಡಿದರು. ಇಬ್ಬರು ವಿದ್ಯಾರ್ಥಿಗಳು, ಮುಖ್ಯಶಿಕ್ಷಕ, ದೈಹಿಕ ಶಿಕ್ಷಕ, ಪೊಲೀಸ್ ಸಿಬ್ಬಂದಿ ಸೇರಿದಂತೆ ಒಟ್ಟು ಐವರನ್ನು ಕಚ್ಚಿವೆ. ಜೇನು ಕಡಿತಕ್ಕೊಳಗಾದವರನ್ನ ಕಿಮ್ಸ್​ಗೆ ದಾಖಲಿಸಲಾಗಿದೆ.
ಪರೀಕ್ಷಾ ಕೇಂದ್ರಕ್ಕೆ 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಬಂದಿದ್ದರು. ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು, ರಗ್ಗು ಹೊತ್ತು ಬೆಂಕಿ ಹಚ್ಚಿ ಹೆಜ್ಜೇನು ದಾಳಿಯಿಂದ ಮಕ್ಕಳನ್ನು ರಕ್ಷಣೆ ಮಾಡಿದ್ದಾರೆ. ಶಾಲೆಯ ಅಕ್ಕಪಕ್ಕದ ಮನೆಯವರು ವಿದ್ಯಾರ್ಥಿಗಳ‌ ಮೈಗೆ ಹೊದಿಕೆಗಳನ್ನು ಮುಚ್ಚಿ ಹೆಜ್ಜೇನುಗಳ ದಾಳಿ ತಪ್ಪಿಸಿದ್ದಾರೆ ಎಂದು ಹೇಳಲಾಗಿದೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 1

ಓದಿರಿ :-   ರಾಜ್ಯದಲ್ಲಿ ಧಾರಾಕಾರ ಮಳೆ: ಕೆಲವೆಡೆ ಶಾಲೆಗಳಿಗೆ ರಜೆ ಘೋಷಣೆ
advertisement

ನಿಮ್ಮ ಕಾಮೆಂಟ್ ಬರೆಯಿರಿ