ರಾಜ್ಯದಲ್ಲಿ ಗ್ರಾಹಕರಿಗೆ ವಿದ್ಯುತ್‌ ಶಾಕ್ ; ಪ್ರತಿ ಯೂನಿಟ್‌ಗೆ ದರ ಹೆಚ್ಚಳ‌, ಏ.1ರಿಂದಲೇ ಜಾರಿ

ಬೆಂಗಳೂರು : ದೇಶಾದ್ಯಂತ ಇಂಧನ ಹಾಗೂ ದಿನಬಳಕೆಯ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿದ್ದು, ಈಗ ಇದರ ಬೆನ್ನಲ್ಲೇ ರಾಜ್ಯದ ಜನತೆಗೆ ಮತ್ತೊಂದು ಶಾಕಿಂಗ್‌ ಸುದ್ದಿ ಹೊರಬಿದ್ದಿದೆ.
ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಮಂಡಳಿಯು ನಾಡಿನ ಜನತೆಗೆ ವಿದ್ಯುತ್‌ ಬೆಲೆ ಏರಿಕೆ ಮಾಡಿದೆ. ಬೆಸ್ಕಾಂ ಪರಿಷ್ಕೃತ ದರದಲ್ಲಿ ಏರಿಕೆ ಮಾಡಲಾಗಿದ್ದು, ಏ.1ರಿಂದಲೇ ಈ ಪರಿಷ್ಕೃತ ದರ ಜಾರಿಯಾಗಿದೆ. ವಿದ್ಯುತ್ ದರ ಪ್ರತಿ ಯೂನಿಟ್ ಗೆ ಸರಾಸರಿ 35 ಪೈಸೆ ಹೆಚ್ಚಳ ಮಾಡಿ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್‌ಸಿ) ಸೋಮವಾರ ಆದೇಶ ಹೊರಡಿಸಿದೆ.

ವಸಂತ ನಗರದ ಕೆಇಆರ್​​ಸಿ ಕಚೇರಿಯಲ್ಲಿ ಸೋಮವಾರ ಕೆಇಆರ್​​ಸಿ ಆಯೋಗದ ನಿಯೋಜಿತ ಅಧ್ಯಕ್ಷ ಎಚ್.ಎನ್.ಮಂಜುನಾಥ್, 2022-23ನೇ ಸಾಲಿನ ವಿದ್ಯುತ್ ದರ ಪರಿಷ್ಕರಣೆ ಪ್ರಕಟಿಸಿದ್ದಾರೆ .ರಾಜ್ಯದಲ್ಲಿರುವ ಬೆಸ್ಕಾಂ, ಹೆಸ್ಕಾಂ. ಮೆಸ್ಕಾಂ, ಸೆಸ್ಕಾಂ, ಜೆಸ್ಕಾಂ ವ್ಯಾಪ್ತಿಯಲ್ಲಿ ಪ್ರತಿ ಯೂನಿಟ್ ವಿದ್ಯುತ್ ದರವನ್ನು ಸರಾಸರಿ 35 ಪೈಸೆ ಏರಿಕೆ (ಶೇ.4.33) ಮಾಡಿರುವುದನ್ನು ಪ್ರಕಟಿಸಿದ್ದಾರೆ.
ರಾಜ್ಯದಲ್ಲಿರುವ ಐದು ಎಸ್ಕಾಂಗಳು 11,320 ಕೋಟಿ ರೂ.ಗಳ ಕಂದಾಯ ಕೊರತೆ ನೀಗಿಸಲು ಪ್ರತಿ ಯೂನಿಟ್ ಗೆ ಸರಾಸರಿ 1.85 ಪೈಸೆ ಅಂದರೆ ಶೇ.23.83 ರಷ್ಟು ಹೆಚ್ಚಳ ಮಾಡುವಂತೆ ಕೋರಿದ್ದವು. ಈ ಬಗ್ಗೆ ಸವಿಸ್ತರವಾಗಿ ವಿಚಾರಣೆ ಮಾಡಿದ ಕೆಇಆರ್‌ಸಿ ಆಯೋಗ 2022-23ಕ್ಕೆ ಅನ್ವಯವಾಗುವಂತೆ ಈ ಪರಿಷ್ಕೃತ ದರವನ್ನು ನಿಗದಿ ಪಡಿಸಿ ಜಾರಿ ಮಾಡಿದೆ.

ಪ್ರಮುಖ ಸುದ್ದಿ :-   ನೇಹಾ ಹಿರೇಮಠ ಕೊಲೆ ಪ್ರಕರಣ: ಆರೋಪಿ ಫಯಾಜ್‌ ಆರು ದಿನ ಸಿಐಡಿ ಕಸ್ಟಡಿಗೆ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement