ಪಶ್ಚಿಮ ಬಂಗಾಳ: ವಿಶ್ವವಿದ್ಯಾನಿಲಯದ ಕುಲಪತಿಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ ಗೂಂಡಾವರ್ತನೆ ತೋರಿದ ವಿದ್ಯಾರ್ಥಿಗಳ ಗುಂಪು

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಅಲಿಯಾ ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿಗಳ ಗುಂಪೊಂದು ಉಪಕುಲಪತಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ ವೀಡಿಯೊ ವೈರಲ್ ಆಗಿದೆ.
ಈ ವಿಡಿಯೋ ಈಗ ರಾಜ್ಯದಲ್ಲಿ ರಾಜಕೀಯ ಗದ್ದಲಕ್ಕೆ ಕಾರಣವಾಗಿದೆ. ಉಪಕುಲಪತಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪಿ ಗಿಯಾಸುದ್ದೀನ್ ಮೊಂಡಲ್ ತೃಣಮೂಲ ಕಾಂಗ್ರೆಸ್‌ನೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂಬ ಬಿಜೆಪಿ ಆರೋಪಿಸಿದೆ.
ವೀಡಿಯೊವನ್ನು ಹಂಚಿಕೊಂಡ ಪಶ್ಚಿಮ ಬಂಗಾಳದ ರಾಜ್ಯಪಾಲ ಜಗದೀಪ್ ಧಂಕರ್ ಅವರು ಮುಖ್ಯ ಕಾರ್ಯದರ್ಶಿಯಿಂದ ಈ ಘಟನೆಯ ಬಗ್ಗೆ ವರದಿ ಕೇಳಿದ್ದಾರೆ. ವೀಡಿಯೊ ಸ್ಪಷ್ಟ ಭಾಷೆಯನ್ನು ಹೊಂದಿದೆ. ಇದರಲ್ಲಿ ವೀಕ್ಷಕರ ವಿವೇಚನೆಗೆ ಸಲಹೆ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.

ವಿಶ್ವವಿದ್ಯಾನಿಲಯದ ನ್ಯೂ ಟೌನ್ ಕ್ಯಾಂಪಸ್‌ನಲ್ಲಿ ಶುಕ್ರವಾರ ಈ ಘಟನೆ ನಡೆದಿದೆ ಎಂದು ವಿಶ್ವವಿದ್ಯಾಲಯದ ಅಧಿಕಾರಿಯೊಬ್ಬರು ಸುದ್ದಿಗಾರರಿಗೆ ತಿಳಿಸಿದ್ದಾರೆ. ವೈಸ್ ಚಾನ್ಸಲರ್ ಮಹಮ್ಮದ್ ಅಲಿ ಅವರ ಕಚೇರಿಗೆ ವಿದ್ಯಾರ್ಥಿಗಳ ಗುಂಪು ನುಗ್ಗಿದೆ. ಬಳಿಕ ಈ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ವೀಡಿಯೊದಲ್ಲಿ ವಿದ್ಯಾರ್ಥಿಗಳು ತಮ್ಮ ಶಿಫಾರಸ್ಸಿನಂತೆ ಪಿಎಚ್‌ಡಿ ಪ್ರವೇಶ ಪಟ್ಟಿಯನ್ನು ಬದಲಾಯಿಸದಿದ್ದಲ್ಲಿ ಭೀಕರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಸುವ ಮಾತುಗಳು ಕೇಳಿಬರುತ್ತವೆ. ಜೊತೆಗೆ ಅವರು ಮೆರಿಟ್ ಪಟ್ಟಿ ತಯಾರಿಸುವುದು ಆಡಳಿತದಿಂದ ದುರ್ಬಳಕೆಯಾಗಿದೆ ಎಂದು ಆರೋಪಿಸಿದ್ದಾರೆ.
ಉಪಕುಲಪತಿಗಳು ವಿಶ್ವವಿದ್ಯಾನಿಲಯವನ್ನು ಹಾಳು ಮಾಡಿದ್ದಾರೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಅಲಿ ಅವರ ಕುರ್ಚಿಯ ಹಿಂದೆ ಇಬ್ಬರು ಭದ್ರತಾ ಸಿಬ್ಬಂದಿ ನಿಂತಿದ್ದು, ವಿದ್ಯಾರ್ಥಿಗಳು ಅವರನ್ನು ನಿಂದಿಸುವ ಕೂಗು ಸೆರೆಯಾಗಿದೆ. ಉಪಕುಲಪತಿಗಳು ಅವರ ಮಾತನ್ನು ಮೌನವಾಗಿ ಕೇಳುತ್ತಾರೆ.
ಮೊಂಡಲ್ ಮತ್ತು ಇತರರು ಕಚೇರಿಯೊಳಗೆ ಒಂದೆರಡು ಗಂಟೆಗಳ ಕಾಲ ಅವರನ್ನು ಘೇರಾವ್ ಮಾಡಿದರು ಮತ್ತು ಅಸಭ್ಯ ಭಾಷೆ ಬಳಸಿದರು ಎಂದು ಅಲಿ ನಂತರ ಮಾಧ್ಯಮಗಳಿಗೆ ತಿಳಿಸಿದರು ಎಂದು ಪಿಟಿಐ ವರದಿ ಮಾಡಿದೆ. “ನಾನು ಸಹಾಯಕ್ಕಾಗಿ ಪೊಲೀಸರಿಗೆ ಕರೆ ಮಾಡಿದ್ದೇನೆ, ಆದರೆ ಅವರು ಸ್ಪಂದಿಸಿಲ್ಲ ಎಂದೂ ಅವರು ಹೇಳಿದ್ದಾರೆ.ಆದರೆ ಪಶ್ಚಿಮ ಬಂಗಾಳ ಪೊಲೀಸರು “ತಕ್ಷಣವೇ ಪ್ರತಿಕ್ರಿಯಿಸಿರುವುದಾಗಿ ಟ್ವೀಟ್ ಮಾಡಿದ್ದಾರೆ. ಆಲಿಯಾ ವಿಶ್ವವಿದ್ಯಾನಿಲಯದಲ್ಲಿ ಇತ್ತೀಚೆಗೆ ನಡೆದ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ತಕ್ಷಣವೇ ಪ್ರತಿಕ್ರಿಯಿಸಿದ್ದಾರೆ ಮತ್ತು ಗಿಯಾಸುದ್ದೀನ್ ಮೊಂಡಲ್ ಅವರನ್ನು ಬಂಧಿಸಲಾಗಿದೆ. ತನಿಖೆ ನಡೆಯುತ್ತಿದೆ” ಎಂದು ಅವರು ಟ್ವೀಟ್ ಮಾಡಿದ್ದಾರೆ.

ಓದಿರಿ :-   ದೆಹಲಿ ವಿಮಾನ ನಿಲ್ದಾಣದಲ್ಲಿ ತ್ರಿವರ್ಣ ಧ್ವಜದ ಮೇಲೆ ನಿಂತು ನಮಾಜ್ ಮಾಡಿದ ವ್ಯಕ್ತಿಯ ಬಂಧನ, ಜಾಮೀನಿನ ಮೇಲೆ ಬಿಡುಗಡೆ

ತೃಣಮೂಲ ಕಾಂಗ್ರೆಸ್ ಮೊಂಡಲ್ ಅವರನ್ನು 2018ರಲ್ಲಿ ವಿಶ್ವವಿದ್ಯಾಲಯದಿಂದ ಹೊರಹಾಕಲಾಗಿದೆ, ವರ್ಷಗಳ ಹಿಂದೆ ವಿದ್ಯಾರ್ಥಿ ಸಂಘದಿಂದಲೂ ಹೊರಹಾಕಲಾಗಿದೆ ಎಂದು ಹೇಳಿಕೊಂಡಿದೆ.
ಘಟನೆಯ ಕುರಿತು ಆಡಳಿತ ಪಕ್ಷವನ್ನು ಗುರಿಯಾಗಿಸಿ ಬಂಗಾಳ ಬಿಜೆಪಿ ಅಧ್ಯಕ್ಷ ಸುಕಾಂತ ಮಜುಂದಾರ್, ತೃಣಮೂಲದ ವಿದ್ಯಾರ್ಥಿ ನಾಯಕರು “ಎಲ್ಲಾ ಮಿತಿಗಳನ್ನು ದಾಟಿದ್ದಾರೆ” ಎಂಬುದನ್ನು ಇದು ತೋರಿಸುತ್ತದೆ ಎಂದು ಹೇಳಿದ್ದಾರೆ. ಉಪಕುಲಪತಿ ಸಂಭಾವಿತ ವ್ಯಕ್ತಿ. ಆದ್ದರಿಂದ ಪ್ರತಿಕ್ರಿಯಿಸದೆ ಮೌನವಾಗಿದ್ದರು. ನಾನೇ ಆಗಿದ್ದರೆ, ನಿಂದಿಸಿದವರಿಗೆ ಕಪಾಳಮೋಕ್ಷ ಮಾಡುತ್ತಿದ್ದೆ” ಎಂದು ಅವರು ಹೇಳಿದ್ದಾರೆ.
ವಿಧಾನಸಭೆ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಬಂಗಾಳಿ ಭಾಷೆಯಲ್ಲಿ ಟ್ವೀಟ್ ಮಾಡಿದ್ದಾರೆ, “ಇದು ಬಂಗಾಳದ ಪುತ್ರಿಯ ಆಡಳಿತದಲ್ಲಿ ಇಂಥ ಘಟನೆಗಳು ರಾಜ್ಯದ ಸಂಸ್ಕೃತಿಯಾಗಿ ಬಿಟ್ಟಿದೆ. ಪೊಲೀಸರು ತಮ್ಮ ರಕ್ಷಣೆಗೆ ಬಂದಿಲ್ಲ ಎಂದು ಉಪಕುಲಪತಿ ಹೇಳಿದ್ದಾರೆ. ಇಂಥವರ ವಿರುದ್ಧ ಪೊಲೀಸರು ಕ್ರಮಕ್ಕೆ ಮುಂದಾಗುವುದಿಲ್ಲ ಎನ್ನುವುದೂ ನಿರೀಕ್ಷಿತವೇ. ಪ್ರಭಾವಿ ಟಿಎಂಸಿ ನಾಯಕರ ಬೆಂಬಲವಿರುವ ಇಂಥವರನ್ನು ಬಂಧಿಸಿ ಎಂದು ಬರೆದಿದ್ದಾರೆ.

ಓದಿರಿ :-   ಈ ಯೋಜನೆಯ ಎಲ್​ಪಿಜಿ ಸಿಲಿಂಡರ್​ಗೆ 200 ರೂ. ಸಬ್ಸಿಡಿ ಘೋಷಿಸಿದ ಕೇಂದ್ರ ಸರ್ಕಾರ..!

ಸಿಪಿಐ(ಎಂ) ಕೂಡ ಘಟನೆಯನ್ನು ಖಂಡಿಸಿದೆ. ಪಕ್ಷದ ಕೇಂದ್ರ ಸಮಿತಿ ಸದಸ್ಯ ಸುಜನ್ ಚಕ್ರವರ್ತಿ ಅವರು, ತೃಣಮೂಲ ಆಡಳಿತದಲ್ಲಿ ಶಿಕ್ಷಣ ಸಂಸ್ಥೆಗಳ ವಾತಾವರಣವು ಹೇಗೆ ಹದಗೆಟ್ಟಿದೆ ಎಂಬುದಕ್ಕೆ ಈ ಘಟನೆ ಮತ್ತೊಂದು ಸೂಚಕ ಎಂದು ಅವರು ಬರೆದಿದ್ದಾರೆ.
ತೃಣಮೂಲ ವಿದ್ಯಾರ್ಥಿ ವಿಭಾಗದ ರಾಜ್ಯಾಧ್ಯಕ್ಷ ತೃಣಂಕೂರ್ ಭಟ್ಟಾಚಾರ್ಯ ಅವರು, ಮೊಂಡಲ್ ಅವರನ್ನು ಕೆಲವು ವರ್ಷಗಳ ಹಿಂದೆ ಹಲ್ಲೆಯ ಘಟನೆಯೊಂದರ ಕಾರಣ ಉಚ್ಚಾಟಿಸಲಾಗಿತ್ತು. “ನಾವು ಘಟನೆಯನ್ನು ಖಂಡಿಸುತ್ತೇವೆ. ಉಪಕುಲಪತಿಯವರನ್ನು ನಿಂದಿಸಿದವರಿಗೆ ಶಿಕ್ಷೆಯಾಗಬೇಕು. ಇದು ನಮ್ಮ ಸಂಸ್ಕೃತಿಯಲ್ಲ” ಎಂದು ಟ್ವೀಟ್ ಮಾಡಿದ್ದಾರೆ.

 

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 2

advertisement

ನಿಮ್ಮ ಕಾಮೆಂಟ್ ಬರೆಯಿರಿ