ಮಲೆನಾಡು ಬಯಲಾಗುತ್ತದೆ, ಬಯಲು ಮಲೆನಾಡಾಗುತ್ತದೆ…ದೇಶದಲ್ಲಿ ದೊಡ್ಡ ಅವಘಡ ಸಂಭವಿಸಲಿದೆ: ಕೋಡಿಮಠ ಶ್ರೀಗಳು ಭವಿಷ್ಯ

posted in: ರಾಜ್ಯ | 0

ಹಾಸನ : ದೇಶದಲ್ಲಿ ರಾಜಕೀಯ ವಿಪ್ಲವವಾಗಿ, ಗುಂಪುಗಳಾಗುತ್ತವೆ. ಬೆಂಕಿ, ಗಾಳಿ, ಗುಡುಗು ಸಿಡಿಲಿನಿಂದ ವಿಪರೀತ ಅನಾಹುತಗಳಾಗುತ್ತವೆ.
ದೇಶದಲ್ಲಿ ಅಶಾಂತಿ, ಮತೀಯ ಗಲಭೆ, ದೊಂಬಿಗಳು, ಸಾವು-ನೋವುಗಳು ಕೊಲೆಗಳು ಹೆಚ್ಚಾಗಲಿವೆ. ವಿಶೇಷವಾಗಿ ವಿದ್ಯುತ್‌ನಿಂದ ಹೆಚ್ಚು ಅಪಾಯವಿದೆ ಎಂದು ಕೋಡಿಮಠ ಶ್ರೀಗಳು ಭವಿಷ್ಯ ನುಡಿದಿದ್ದಾರೆ.

ಈ ವರ್ಷದ ಫಲಾಫಲದ ಬಗ್ಗೆ ಮಾತನಾಡಿದ ಕೋಡಿಮಠ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಮತ್ತೊಂದು ಭಯಾನಕ ಭವಿಷ್ಯ ನುಡಿದಿದ್ದಾರೆ. ಈ ವರ್ಷದ ಮಳೆ ಕೆಂಡಮಂಡಲ. ಈ ಬಾರಿ ಮುಂಗಾರು ಚೆನ್ನಾಗಿ ಆಗುತ್ತದೆ, ಹಿಂಗಾರು ಕಡಿಮೆಯಾಗಲಿದೆ ಎಂದು ಹೇಳಿದ್ದಾರೆ. ಮಳೆ ಆದಲ್ಲಿ ಆಯಿತು ಹೋದಲ್ಲಿ ಹೋಯಿತು. ಮಲೆನಾಡು ಹೋಗಿ ಬಯಲು ಆಗುತ್ತದೆ, ಬಯಲು ಹೋಗಿ ಮಲೆನಾಡು ಆಗುತ್ತದೆ. ಆ ತರಹದ ಸಾಧ್ಯತೆ ಮಾಡುವ ಮಳೆಗೆ ಇದೆ. ನಿರೀಕ್ಷಿತ ಪ್ರದೇಶದಲ್ಲಿ ಮಳೆ ಸರಿಯಾಗಿ ಆಗುವುದಿಲ್ಲ ಎಂದೂ ಭವಿಷ್ಯ ನುಡಿದಿದ್ದಾರೆ.

ಅಲ್ಲದೆ ಭಾರತದಲ್ಲಿ ಈ ಸಂವತ್ಸರದಲ್ಲಿ ಬಹುದೊಡ್ಡ ಅವಘಡ ಸಂಭವಿಸುತ್ತದೆ. ಜಗತ್ತಿನ ಸಾಮ್ರಾಟರು ತಲ್ಲಣಗೊಳ್ಳುತ್ತಾರೆ ಎಂದು ತಿಳಿಸಿದ್ದಾರೆ ಇಲ್ಲಿಯತನಕ ಕಂಡು ಕೇಳರಿಯದ ಬಹುದೊಡ್ಡ ಅಘಾತ ಭಾರತದಲ್ಲಿ ಆಗುತ್ತದೆ. ಅಶಾಂತಿ ಹೆಚ್ಚಾಗಿ ಮತೀಯಗಲಭೆ, ದೊಂಬಿಗಳು, ಸಾವು-ನೋವುಗಳು ಕೊಲೆಗಳಾಗುತ್ತವೆ. ವಿಶೇಷವಾಗಿ ಎಲೆಕ್ಟ್ರಿಕ್‍ನಿಂದ ಅಪಾಯವಿದೆ. ಸುಂದರವಾದ ಹೆಣ್ಣುಮಕ್ಕಳ ಅಂಗಾಗಳನ್ನು ಕಿತ್ತು ತಿನ್ನುತಾರೆ. ರಾಜಕೀಯ ವಿಪಲ್ಲವಾಗುತ್ತೆ, ರಾಜಕೀಯ ಗುಂಪುಗಳಾಗುತ್ತವೆ. ಬೆಂಕಿಯ ಅನಾಹುತ ಜಾಸ್ತಿ, ಗಾಳಿ, ಸಿಡಿಲು, ಗುಡುಗು ವಿಪರೀತವಾಗುತ್ತದೆ ಎಂದು ಭವಿಷ್ಯ ನುಡಿದಿದ್ದಾರೆ.

ಓದಿರಿ :-   ದತ್ತಪೀಠದಲ್ಲಿ ಈಗ ಮತ್ತೊಂದು ವಿವಾದ: ಗುಹೆಯೊಳಗೆ ನಮಾಜ್, ಗೋರಿ ಪೂಜೆ ಆರೋಪ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 2

advertisement

ನಿಮ್ಮ ಕಾಮೆಂಟ್ ಬರೆಯಿರಿ