ಹುಬ್ಬಳ್ಳಿ: ಬಸ್ – ಕಾರು ಢಿಕ್ಕಿ; ಇಬ್ಬರು ಸಾವು, ಐವರಿಗೆ ಗಾಯ

posted in: ರಾಜ್ಯ | 0

ಹುಬ್ಬಳ್ಳಿ: ಐರಾವತ ಬಸ್ ಹಾಗೂ ಕಾರಿನ ನಡುವೆ ಸಂಭವಿಸಿದ ಮುಖಾಮುಖಿ ಢಿಕ್ಕಿಯಲ್ಲಿ, ಕಾರು ಚಲಾನೆ ಮಾಡುತ್ತಿದ್ದ ವ್ಯಕ್ತಿ ಹಾಗೂ ಅವರ ತಾಯಿ ಸ್ಥಳದಲ್ಲೇ ಮೃತಪಟ್ಟಿದ್ದು, ಇತರ ಐವರು ಗಾಯಗೊಂಡಿರುವ ಘಟನೆ ತಾಲೂಕಿನ ಶಿರಗುಪ್ಪಿ ಬಳಿ ನಡೆದ ಬಗ್ಗೆ ವರದಿಯಾಗಿದೆ.
ಅಪಘಾತದಲ್ಲಿ ಮೃತಪಟ್ಟವರು ಗುಜರಾತ್ ಮೂಲದವವರು ಹಾಗೀ ಹಾಲಿ ಹುಬ್ಬಳ್ಳಿಯ ಗೋಕುಲ ರಸ್ತೆ ಡಾಲರ್ಸ್ ಕಾಲೋನಿ ನಿವಾಸಿಗಳು ಎನ್ನಲಾಗಿದೆ.
ಘಟನೆಯಲ್ಲಿ ಇತರ ಐವರು ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಹುಬ್ಬಳ್ಳಿಯಿಂದ ಹಂಪಿಗೆ ಮಹೀಂದ್ರಾ ವಾಹನದಲ್ಲಿ ಕುಟುಂಬ ಸಮೇತರಾಗಿ ಹೊರಟಿದ್ದಾಗ ಹೈದರಾಬಾದಿನಿಂದ ಹುಬ್ಬಳ್ಳಿ ಕಡೆಗೆ ಬರುತ್ತಿದ್ದ ಐರಾವತ ಬಸ್ ಢಿಕ್ಕಿ ಹೊಡೆದಿದೆ. ಸ್ಥಳಕ್ಕೆ ಗ್ರಾಮೀಣ ಠಾಣೆ ಇನ್ಸ್ ಪೆಕ್ಟರ್ ರಮೇಶ ಗೋಕಾಕ ಮತ್ತು ಸಿಬ್ಬಂದಿ ತೆರಳಿದ್ದಾರೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 1

ಓದಿರಿ :-   ಭಟ್ಕಳ: ಆಟ ಆಡುತ್ತಿದ್ದಾಗ ಮಳೆ ನೀರಿನ ಕಾಲುವೆಗೆ ಬಿದ್ದು 4 ವರ್ಷದ ಮಗು ಸಾವು
advertisement

ನಿಮ್ಮ ಕಾಮೆಂಟ್ ಬರೆಯಿರಿ