ಹೊಸಪೇಟೆ: ಸಾಂಗವಾಗಿ ನೆರವೇರಿದ ಶ್ರೀ ಕಾಂಚೀ ಕಾಮಾಕ್ಷಿದೇವಿ ಪ್ರಾಣ ಪ್ರತಿಷ್ಠಾಪನೆ

ಹೊಸಪೇಟೆ: ನಗರದ ಗಾಂಧಿ ಕಾಲೋನಿ  ಶ್ರೀ ಕಾಂಚೀ ಕಾಮಾಕ್ಷಿ ದೇವಸ್ಥಾನದಲ್ಲಿ ಇಂದು ಬುಧವಾರ ಬೆಳಿಗ್ಗೆ ಕಾಂಚೀ ಕಾಮಕೋಟಿ ಪೀಠಾಧೀಶರಾದ ಶ್ರೀ ಶಂಕರ ವಿಜಯೇಂದ್ರ ಸರಸ್ವತಿ ಸ್ವಾಮೀಜಿಗಳ ಅಮೃತ ಹಸ್ತದಿಂದ ಶ್ರಿಕಾಂಚೀ ಕಾಮಾಕ್ಷಿದೇವಿ ದೇವರ ಪ್ರಾಣ ಪ್ರತಿಷ್ಠಾಪನೆ ನೆರವೇರಿತು.
ಬುಧವಾರ ಬೆಳಿಗ್ಗೆ ೯:೧೫ರಿಂದ ೧೦:೩೦ರ ವರೆಗೆ ಶುಭಲಗ್ನದಲ್ಲಿ ಶ್ರೀ ಕಾಂಚೀ ಕಾಮಾಕ್ಷಿದೇವಿ ದೇವರ ಪ್ರಾಣ ಪ್ರತಿಷ್ಠಾಪನೆಯನ್ನು ಶ್ರೀ ಶಂಕರ ವಿಜಯೇಂದ್ರ ಸರಸ್ವತಿ ಸ್ವಾಮೀಜಿ ಅವರು ನೆರವೇರಿಸಿದರು. ನಂತರ ವಿವಿಧ ಹೋಮಗಳ ಪೂರ್ಣಾಹುತಿ ನಡೆಯಿತು. ನಂತರ ಶ್ರೀಗಳು ಅನುಗ್ರಹ ಸಂದೇಶ ನೀಡಿದರು. ಪ್ರತಿಷ್ಠಾಪನಾ ಮಹೋತ್ಸವ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಎಚ್.ಆರ್. ಗವಿಯಪ್ಪ, ಸಮಾಜ ಸೇವಕ ಎಚ್.ಜಿ. ರಂಗನಗೌಡ್ರು, ಮಾಜಿ ಸಂಸದ ಎಚ್.ಜಿ. ರಾಮುಲು ಕುಟುಂಬದ ಸದಸ್ಯರು, ಗಣ್ಯರು, ಇತರರು ಪಾಲ್ಗೊಂಡಿದ್ದರು.
ಸಂಜೆ ೫ರಿಂದ ೭ರ ವರೆಗೆ ಅರಿಶಿಣ, ಕುಂಕುಮ, ಜೇನು, ಹಣ್ಣು ಹಂಪಲುಗಳ ಸೇರಿದಂತೆ ವಿವಿಧ ಮಂಗಲ ದ್ರವ್ಯಗಳಿಂದ ಪಂಚಾಮೃತಾಭಿಷೇಕ ನಡೆಯಿತು.
ಧಾರ್ಮಿಕ ವಿಧಿವಿಧಾನಗಳು ಕಾಂಚೀ ಪೀಠದ ಪ್ರಧಾನ ಪುರೋಹಿತರಾದ ಪಂಡಿತ ಭರಣಿ ಶಾಸ್ತ್ರೀಗಳ ನೇತೃತ್ವದಲ್ಲಿ ಹಾಗೂ ಜಗದೀಶ್ ಭಟ್ ಅವರ ವ್ಯವಸ್ಥಾಪನದಲ್ಲಿ ಸುಮಾರು ೩೦ ಪುರೋಹಿತರ ತಂಡದಿಂದ ನಡೆಯಿತು.

ಪ್ರಮುಖ ಸುದ್ದಿ :-   ಲೋಕಸಭಾ ಚುನಾವಣೆ : ಕರ್ನಾಟಕದ ಮೊದಲ ಹಂತದಲ್ಲಿ ಶೇ. 69.23 ಮತದಾನ ; 14 ಕ್ಷೇತ್ರಗಳ ಮತದಾನದ ಪ್ರಮಾಣದ ವಿವರ...

ನಂತರ ಶೀರ್ವಚನ ನೀಡಿದ ಶ್ರೀಗಳು ಧರ್ಮದ ಮನೆಯಲ್ಲಿ ಆಚರಣೆ ಮಾಡಿ. ಆದರೆ, ದೇಶದ ಪ್ರಶ್ನೆ ಬಂದಾಗ ಎಲ್ಲರೂ ಒಂದಾಗಬೇಕು ಎಂದು ಶ್ರೀ ಕಂಚಿ ಕಾಮಕೋಟಿ‌ ಪೀಠಾಧೀಶರಾದ ಶಂಕರ ವಿಜಯೇಂದ್ರ ಸರಸ್ವತಿ ಮಹಾಸ್ವಾಮಿಗಳು ಹೇಳಿದ್ದಾರೆ.

ದಕ್ಷಿಣ ಭಾರತದಲ್ಲಿ ಧರ್ಮಕ್ಕೆ ಶ್ರೇಷ್ಠ ಸ್ಥಾನವಿದೆ, ದೊಡ್ಡ ದೊಡ್ಡ ಮಹಾತ್ಮರು ತಪಸ್ಸು ಮಾಡಿರುವ ಜಾಗ ಕರ್ನಾಟಕ ಸಾಮರಸ್ಯಕ್ಕೆ ಮತ್ತೊಂದು ಕ್ಷೇತ್ರವಾಗಿದೆ. ಜಗಳ, ದ್ವೇಷ, ಅಹಂಕಾರ ಯಾರಲ್ಲೂ ಇರಬಾರದು. ಎಲ್ಲರಲ್ಲೂ ವಿನಮ್ರತೆ ಇರಬೇಕು ಎಂದು ಹೇಳಿದರು.
ಸಾಮರಸ್ಯಕ್ಕೆ ಹೆಸರು ವಾಸಿಯಾಗಿರುವ ಕರ್ನಾಟಕದಲ್ಲಿ ಎಲ್ಲ ಜಾತಿ ಜನಾಂಗದವರು ಒಂದಾಗಿ ಬಾಳಬೇಕು. ಸನಾತನ ಧರ್ಮವನ್ನು ಸಂರಕ್ಷಣೆಯಾಗಲಿ ಎಂದರು.

ದೇಗುಲಕ್ಕೆ ಭಕ್ತರ ದಂಡು
ದಕ್ಷಿಣ ಕಾಶಿ ಹಂಪಿ, ಹೊಸಪೇಟೆಯಲ್ಲಿ ನೂರಾರು ದೇಗುಲಗಳು ಇದ್ರೂ ವರ್ಷಕ್ಕೊಂದಾದ್ರು ಹೊಸ ದೇಗುಲ ನಿರ್ಮಾಣ ಮಾಡಲಾಗುತ್ತಿದೆ. ಮಾಜಿ ಶಾಸಕ ಗವಿಯಪ್ಪ ಮತ್ತು ಹೆಚ್.ಆರ್.ಜಿ ಕುಟುಂಬ ಇಲ್ಲಿ ಎಲ್ಲ ಧಾರ್ಮಿಕ ಕಾರ್ಯಕ್ರಮಗಳಿಗೆ ಮುಂದೆ ನಿಂತು ಮಾಡಿದ್ದಾರೆ. ಈಗಾಗಲೇ ಹೊಸಪೇಟೆಯಲ್ಲಿ ಬೃಹತ್ ರಾಘವೇಂದ್ರ ಸ್ವಾಮಿ ದೇಗುಲ ನಿರ್ಮಾಣ ಮಾಡಲಾಗಿದ್ದು, ಇದರ ಎದುರಲ್ಲಿಯೇ ಕಂಚಿ ಕಾಮಾಕ್ಷಿ ದೇಗುಲ ನಿರ್ಮಾಣ ಮಾಡಲಾಗಿದೆ.‌ ಉದ್ಘಾಟನೆ ಹಿನ್ನೆಲೆ ಇಂದು ಸಾವಿರಾರು ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆದರು.. ಕಂಚಿಯಲ್ಲಿ ಕಾಮಕೋಟಿ ದೇವಸ್ಥಾನದ ಮಾದರಿಯಲ್ಲಿ ಇಲ್ಲಿಯೂ ದೇವಸ್ಥಾನದ ನಿರ್ಮಾಣ ಮಾಡಿರುವುದು ವಿಶೇಷವಾಗಿದೆ.

ಪ್ರಮುಖ ಸುದ್ದಿ :-   ಮತಗಟ್ಟೆ ಬಳಿ ಮಹಿಳೆಗೆ ಹೃದಯಾಘಾತ ; ತಕ್ಷಣವೇ ಸಿಪಿಆರ್‌ ಮಾಡಿ ಜೀವ ಉಳಿಸಿದ ಮತದಾನ ಮಾಡಲು ಬಂದಿದ್ದ ವೈದ್ಯ

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement