ಒಮಿಕ್ರಾನ್‌ಗಿಂತ ಹೆಚ್ಚು ಹರಡುವ ಹೊಸ ಕೊರೊನಾ ವೈರಸ್ ಹೈಬ್ರಿಡ್‌ ರೂಪಾಂತರ XEಯ ದೇಶದ ಮೊದಲ ಪ್ರಕರಣ ಮುಂಬೈನಲ್ಲಿ ದಾಖಲು

ಭಾರತವು ಇಂದು, ಬುಧವಾರ ಮುಂಬೈನಿಂದ ಕೊರೊನಾ ವೈರಸ್ಸಿನ ಹೊಸ XE ರೂಪಾಂತರದ ಮೊದಲ ಸೋಂಕಿನ ಪ್ರಕರಣವನ್ನು ವರದಿ ಮಾಡಿದೆ. ಒಮಿಕ್ರಾನ್ ರೂಪಾಂತರಕ್ಕಿಂತ ಹೆಚ್ಚು ಹರಡುತ್ತದೆ ಎಂದು ನಂಬಲಾದ ಈ ಹೈಬ್ರಿಡ್‌ ರೂಪಾಂತರವನ್ನು ಮೊದಲು ಯುನೈಟೆಡ್ ಕಿಂಗ್‌ಡಂನಲ್ಲಿ ಕಂಡುಹಿಡಿಯಲಾಯಿತು.
ಅದರ ಇತ್ತೀಚಿನ ಸೆರೋ ಸಮೀಕ್ಷೆ ವರದಿಯಲ್ಲಿ, ಮುಂಬೈನ ನಾಗರಿಕ ಸಂಸ್ಥೆಯು ಎಕ್ಸ್‌ಇ ರೂಪಾಂತರದ ಒಂದು ಪ್ರಕರಣ ಮತ್ತು ಕಪ್ಪಾ ರೂಪಾಂತರದ ಒಂದು ಪ್ರಕರಣ ಕಂಡುಕೊಂಡಿದೆ ಎಂದು ಹೇಳಿದೆ. ಮುಂಬೈನಿಂದ ರೋಗಿಗಳಿಂದ ಸೆರೋ ಸಮೀಕ್ಷೆಗೆ ಕಳುಹಿಸಲಾದ 230 ಮಾದರಿಗಳಲ್ಲಿ 21 ಜನರನ್ನು ನಂತರ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದಾಗ್ಯೂ, ಯಾರಿಗೂ ಆಮ್ಲಜನಕದ ಬೆಂಬಲ ಅಥವಾ ತೀವ್ರ ನಿಗಾ ಅಗತ್ಯವಿಲ್ಲ ಎಂದು ವರದಿ ಹೇಳಿದೆ.

ಆಸ್ಪತ್ರೆಗೆ ದಾಖಲಾದ 21 ಮಂದಿಯಲ್ಲಿ, ಒಂಬತ್ತು ಮಂದಿ ಲಸಿಕೆಯ ಎರಡೂ ಡೋಸ್‌ಗಳನ್ನು ತೆಗೆದುಕೊಂಡಿದ್ದಾರೆ. ಉಳಿದವರೆಲ್ಲರೂ ಲಸಿಕೆ ಹಾಕಲಿಲ್ಲ. ತಮ್ಮ ಮೊದಲ ಲಸಿಕೆ ತೆಗೆದುಕೊಂಡ ಯಾವುದೇ ರೋಗಿಗಳನ್ನು ಆಸ್ಪತ್ರೆಗೆ ಸೇರಿಸಬೇಕಾಗಿಲ್ಲ ಎಂದು ವರದಿ ಹೇಳಿದೆ.
228 ಮಾದರಿಗಳು ಒಮಿಕ್ರಾನ್ ರೂಪಾಂತರದಿಂದ ಸೋಂಕಿಗೆ ಒಳಗಾಗಿವೆ. ಒಂದು XE ವೇರಿಯಂಟ್‌ಗೆ ಧನಾತ್ಮಕವಾಗಿ ಪರೀಕ್ಷಿಸಿದರೆ ಇನ್ನೊಂದು ಕಪ್ಪಾ ರೂಪಾಂತರಕ್ಕೆ ಧನಾತ್ಮಕತೆ ತೋರಿಸಿದೆ.
ಹೊಸ ರೂಪಾಂತರ XE ಎಂಬುದು ಒಮಿಕ್ರಾನ್‌ನ BA.1 ಮತ್ತು BA.2 ಎರಡು ಆವೃತ್ತಿಗಳ ರೂಪಾಂತರಿತ ಹೈಬ್ರಿಡ್ ಆಗಿದೆ – ಇದು ಈ ಸಮಯದಲ್ಲಿ ಜಗತ್ತಿನಾದ್ಯಂತ ಸಣ್ಣ ಪ್ರಮಾಣದ ಪ್ರಕರಣಗಳಿಗೆ ಮಾತ್ರ ಕಾರಣವಾಗಿದೆ. ಹಾಗೂ ಇದು ಒಮಿಕ್ರಾನ್‌ಗಿಂತ ಹೆಚ್ಚು ಹರಡುತ್ತದೆ ಎಂದು ಹೇಳಲಾಗಿದೆ.

ಪ್ರಮುಖ ಸುದ್ದಿ :-   ರಾಹುಲ್ ಗಾಂಧಿ ಸ್ಪರ್ಧೆಯ ಸಸ್ಪೆನ್ಸ್ ನಡುವೆ ಅಮೇಥಿಯಲ್ಲಿ ರಾರಾಜಿಸುತ್ತಿರುವ "ರಾಬರ್ಟ್ ವಾದ್ರಾ ಅಬ್ ಕಿ ಬಾರ್" ಪೋಸ್ಟರ್...!

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಹೊಸ ರೂಪಾಂತರವು ಒಮಿಕ್ರಾನ್‌ನ BA.2 ರೂಪಾಮತರಕ್ಕಿಂತ ಸುಮಾರು 10 ಪ್ರತಿಶತ ಹೆಚ್ಚು ಹರಡುತ್ತದೆ. ಇಲ್ಲಿಯವರೆಗೆ, ಓಮಿಕ್ರಾನ್‌ನ BA.2 ಉಪ-ರೂಪಾಂತರವನ್ನು ಕೋವಿಡ್-19 ರ ಅತ್ಯಂತ ಸಾಂಕ್ರಾಮಿಕ ತಳಿ ಎಂದು ಪರಿಗಣಿಸಲಾಗಿದೆ. ಈ ಹೊಸ ಸಂಶೋಧನೆಯು ದೃಢೀಕರಿಸಲ್ಪಟ್ಟರೆ, ಇದು XE ಅನ್ನು ಇನ್ನೂ ಹೆಚ್ಚು ಹರಡುವ ಕೋವಿಡ್‌-19 ರೂಪಾಂತರಿತವಾಗಿಸುತ್ತದೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement