ಟೆನಿಸ್​ ಪಂದ್ಯದಲ್ಲಿ ಸೋತ ನಂತರ ಎದುರಾಳಿ ಆಟಗಾರನಿಗೆ ಕಪಾಳಮೋಕ್ಷ ಮಾಡಿದ ಆಟಗಾರ; ವೀಕ್ಷಿಸಿ

ಘಾನಾದಲ್ಲಿ ನಡೆದ ಟೆನಿಸ್ ಟೂರ್ನಿಯಲ್ಲಿ ಪಂದ್ಯದಲ್ಲಿ ಸೋತ ನಂತರ ಆಟಗಾರ ತನ್ನ ಎದುರಾಳಿ ಆಟಗಾರನಿಗೆ ಕಪಾಳಮೋಕ್ಷ ಮಾಡಿದ ಘಟನೆ ನಡೆದಿದೆ. ಸೋಮವಾರ ನಡೆದ ಐಟಿಎಫ್ ಜೂನಿಯರ್ಸ್ ಪಂದ್ಯಾವಳಿಯಲ್ಲಿ ಈ ಘಟನೆ ನಡೆದಿದ್ದು, ಮೈಕೆಲ್ ಕೌಮೆ ಮತ್ತು ರಾಫೆಲ್ ನಿ ಆಂಕ್ರಾಹ್ ಪಂದ್ಯದಲ್ಲಿ ಭಾಗಿಯಾಗಿದ್ದರು. 15 ವರ್ಷದ ಕೌಮೆ, ಪಂದ್ಯವನ್ನು ಸೋತ ನಂತರ ಸೆಂಟರ್ ಕೋರ್ಟ್‌ನಲ್ಲಿ ಆಂಕ್ರಾಹ್ ಅವರಿಗೆ ಕಪಾಳಮೋಕ್ಷ ಮಾಡಿದ್ದಾರೆ. ಅವರು ಮೊದಲಿಗೆ ಬಲಗೈಯಿಂದ ಹಸ್ತಲಾಘವ ಮಾಡಿ ಎಡಗೈಯಿಂದ ಆಂಕ್ರಹ್‌ ಅವರಿಗೆ ಕಪಾಳಮೋಕ್ಷ ಮಾಡಿದ್ದಾರೆ. ಅಲ್ಲಿದ್ದ ವೀಕ್ಷಕರು ಈ ಘಟನೆಯನ್ನು ಸೆರೆಹಿಡಿದಿದ್ದು, ಅದರ ವಿಡಿಯೋ ಸಾಕಷ್ಟು ವೈರಲ್ ಆಗಿದೆ. ಕಪಾಳಮೋಕ್ಷದ ಘಟನೆ ನಂತರ ಸಂಪೂರ್ಣ ಗದ್ದಲಕ್ಕೆ ಕಾರಣವಾವಾಗಿದೆ. ಈ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಲಾಗಿದೆ.

ಫಂಕ್ಷನಲ್ ಟೆನಿಸ್ ಪಾಡ್‌ಕ್ಯಾಸ್ಟ್ ಈ ತುಣುಕನ್ನು ಆರಂಭದಲ್ಲಿ ಹಂಚಿಕೊಂಡಿದ್ದು, ಮಂಗಳವಾರ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ವಿಡಿಯೋ ತೆಗೆದುಹಾಕಲಾಗುವುದು ಎಂದು ಹೇಳಿದೆ. ಆದರೆ, ಟೆನಿಸ್ ತರಬೇತುದಾರರೊಬ್ಬರು ಈ ವೀಡಿಯೊ ಪಡೆದು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ, ನಂತರ ಅದು ವೈರಲ್ ಆಗಿದೆ ಎಂದು ನ್ಯೂಯಾರ್ಕ್ ಪೋಸ್ಟ್ ತಿಳಿಸಿದೆ.

ಪ್ರಮುಖ ಸುದ್ದಿ :-   ವೀಡಿಯೊ..| ಆಫ್ರಿಕಾದ ಕಾರ್ಮಿಕರನ್ನು ಚಾವಟಿಯಿಂದ ಮನಬಂದಂತೆ ಥಳಿಸಿದ ಚೀನಾ ಮ್ಯಾನೇಜರ್ ; ವ್ಯಾಪಕ ಟೀಕೆ

ಫ್ರಾನ್ಸ್‌ನ ಟೆನಿಸ್ ಆಟಗಾರ ಕೊವಾಮೆ ಅವರು ಸ್ಪರ್ಧೆಯಲ್ಲಿ ಅಗ್ರಸ್ಥಾನದಲ್ಲಿದ್ದರು ಆದರೆ ಆರಂಭಿಕ ಸೆಟ್​ ಅನ್ನು ತಮ್ಮ ಎದುರಾಳಿಗೆ ಕಳೆದುಕೊಂಡರು. ಅವರು ಎರಡನೇ ಸೆಟ್​ನ್ನು ಗೆದ್ದರು. ಇದು ಪಂದ್ಯವನ್ನು ಟೈ ಬ್ರೇಕ್‌ಗೆ ಕಾರಣವಾಯಿತು. ಟೈ-ಬ್ರೇಕ್ ಕೂಡ ತೀವ್ರ ಪೈಪೋಟಿಯಿಂದ ಕೂಡಿತ್ತು. ಆದರೆ ಆಂಕ್ರಾಹ್‌ ಅಂತಿಮವಾಗಿ ವಿಜಯಶಾಲಿಯಾದರು. ಅಂತಿಮ ಸ್ಕೋರ್ 6-2, 6-7, 7-6 ಆಗಿತ್ತು. ಘಾನಾದ ಆಟಗಾರ ಕೌಮೆ ಕೋಪಗೊಂಡಿದ್ದು, ಹಸ್ತಲಾಘವದ ಸಮಯದಲ್ಲಿ ಕಪಾಳಮೋಕ್ಷ ಮಾಡಿದ್ದಾನೆ. ಜಗಳದ ಸಮಯದಲ್ಲಿ ಫ್ರೆಂಚ್ ಆಟಗಾರನೊಂದಿಗೆ ವಾದಿಸಿದ್ದಾನೆ. ಆಂಕ್ರಾಹ್‌ ಮೇಲೆ ಕೊವಾಮೆ ಉದ್ಧಟತನಕ್ಕೆ ಕಾರಣವೇನು ಎಂಬುದು ಸ್ಪಷ್ಟವಾಗಿಲ್ಲ. ಆಂಕ್ರಾಹ್ ಈಗ ಎರಡನೇ ಸುತ್ತಿಗೆ ಆಯ್ಕೆ ಆಗಿದ್ದಾರೆ.‌

ಪ್ರಮುಖ ಸುದ್ದಿ :-   ವೀಡಿಯೊ..| ಆಫ್ರಿಕಾದ ಕಾರ್ಮಿಕರನ್ನು ಚಾವಟಿಯಿಂದ ಮನಬಂದಂತೆ ಥಳಿಸಿದ ಚೀನಾ ಮ್ಯಾನೇಜರ್ ; ವ್ಯಾಪಕ ಟೀಕೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement