ಹೊಸ ವೀಡಿಯೊದಲ್ಲಿ ಅಲ್ಲಾಹು ಅಕ್ಬರ್ ಘೋಷಣೆ ಕೂಗಿದ ಮಂಡ್ಯದ ಮುಸ್ಕಾನ್ ಹೊಗಳಿದ ಅಲ್ ಖೈದಾ ಮುಖ್ಯಸ್ಥ ..!

ಅಲ್ ಖೈದಾ ನಾಯಕ ಅಯ್ಮಾನ್ ಅಲ್-ಜವಾಹಿರಿ ಹೊಸ ವೀಡಿಯೊದಲ್ಲಿ ಕಾಣಿಸಿಕೊಂಡಿದ್ದಾನೆ. ಇದರಲ್ಲಿ ಆತ ಹಿಜಾಬ್ ಧರಿಸುವುದನ್ನು ವಿರೋಧಿಸುವ ಪುರುಷರ ಗುಂಪನ್ನು ಎದುರಿಸಿದ ಭಾರತೀಯ ವಿದ್ಯಾರ್ಥಿ ಮುಸ್ಕಾನ್ ಖಾನ್ ಅವರನ್ನು ಹೊಗಳಲು ಕಾಣಿಸಿಕೊಂಡಿದ್ದಾನೆ
ಭಯೋತ್ಪಾದಕ ಸಂಘಟನೆಗಳ ಆನ್‌ಲೈನ್ ಚಟುವಟಿಕೆಯನ್ನು ಟ್ರ್ಯಾಕ್ ಮಾಡುವ ಭಯೋತ್ಪಾದನಾ ನಿಗ್ರಹ ಸಂಸ್ಥೆಯಾದ SITE ಗುಪ್ತಚರದಿಂದ ಈ ವೀಡಿಯೊವನ್ನು ಪರಿಶೀಲಿಸಲಾಗಿದೆ.

ವೀಡಿಯೊದಲ್ಲಿ, ಜವಾಹಿರಿ ಮಹಿಳೆಯನ್ನು ತನ್ನ “ಸಹೋದರಿ” ಎಂದು ಕರೆದಿದ್ದಾನೆ ಮತ್ತು ಹಾಗೂ ಮುಸ್ಕಾನ್ ಅವರನ್ನು ‘ಭಾರತದ ಉದಾತ್ತ ಮಹಿಳೆ’ ಎಂದು ಸಂಬೋಧಿಸುತ್ತಾನೆ ಮತ್ತು ಅವರ ಪ್ರಶಂಸೆಯಲ್ಲಿ ಕವನವನ್ನು ಸಹ ಓದುತ್ತಾನೆ ಎಂದು ಇಂಡಿಯಾ ಟುಡೆ.ಕಾಮ್‌ ವರದಿ ಮಾಡಿದೆ.
ವರದಿ ಪ್ರಕಾರ, “ದಿ ನೋಬಲ್ ವುಮನ್ ಆಫ್ ಇಂಡಿಯಾ” ಶೀರ್ಷಿಕೆಯ ವೀಡಿಯೊವನ್ನು ಅಲ್ ಖೈದಾ ಮಾಧ್ಯಮ ವಿಭಾಗವಾದ ಅಸ್-ಸಾಹಬ್ ಮೀಡಿಯಾ ಬಿಡುಗಡೆ ಮಾಡಿದೆ. ಒಂಬತ್ತು ನಿಮಿಷಗಳ ವೀಡಿಯೋದಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ಮುಸ್ಕಾನ್ ಬಗ್ಗೆ ತಿಳಿದುಕೊಂಡಿರುವುದಾಗಿ ಭಯೋತ್ಪಾದಕರ ನಾಯಕ ಹೇಳಿದ್ದಾನೆ.

ಈ ಸಹೋದರಿ ತಕ್ಬೀರ್ ಧ್ವನಿಯನ್ನು ಎತ್ತುವ ಮೂಲಕ ನನ್ನ ಹೃದಯವನ್ನು ಗೆದ್ದಿದ್ದಾಳೆ ಎಂದು ಉಗ್ರ ಹೇಳಿದ್ದಾನೆ. ಇದೇವೇಳೆ ಹಿಜಾಬ್ ಅನ್ನು ನಿಷೇಧಿಸಿರುವ ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಸೇರಿದಂತೆ ಹಲವು ದೇಶಗಳನ್ನೂ ಜವಾಹಿರಿ ಗುರಿಯಾಗಿಸಿದ್ದಾರೆ. ಅವರನ್ನು ಪಾಶ್ಚಿಮಾತ್ಯ ದೇಶಗಳ ಮಿತ್ರರೆಂದು ಕರೆದರು. ಅಲ್ ಖೈದಾ ಭಯೋತ್ಪಾದಕ ಪಶ್ಚಿಮ ಮಿತ್ರರಾಷ್ಟ್ರಗಳು ಎಂದು ಆರೋಪಿಸಿದ್ದಾನೆ.
ಜವಾಹಿರಿ ಎಲ್ಲಿದ್ದಾನೆ ಎಂಬುದು ಇನ್ನೂ ತಿಳಿದಿಲ್ಲ. ಕಳೆದ ವರ್ಷ 9/11 ವಾರ್ಷಿಕೋತ್ಸವದ ಸಂದರ್ಭದಲ್ಲಿ ಜವಾಹಿರಿ ವೀಡಿಯೊವನ್ನು ಪೋಸ್ಟ್ ಮಾಡಿದ್ದ. ಮೇ 2011 ರಲ್ಲಿ ಅಬೋಟಾಬಾದ್‌ನಲ್ಲಿ ಅಮೆರಿಕ ದಾಳಿಯಲ್ಲಿ ಒಸಾಮಾ ಬಿನ್ ಲಾಡೆನ್ ಕೊಲ್ಲಲ್ಪಟ್ಟ ನಂತರ ಜವಾಹಿರಿ ಅಲ್ ಖೈದಾ ಮುಖ್ಯಸ್ಥನಾಗಿ ಅಧಿಕಾರ ವಹಿಸಿಕೊಂಡಿದ್ದ.

ಪ್ರಮುಖ ಸುದ್ದಿ :-   ಲೋಕಸಭಾ ಚುನಾವಣೆ 2024: ಕರ್ನಾಟಕದ 14 ಕ್ಷೇತ್ರಗಳಿಗೆ ಇಂದಿನಿಂದ ನಾಮಪತ್ರ ಸಲ್ಲಿಕೆ ಆರಂಭ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement