ಜಮ್ಮು: ಜಮ್ಮು ಮತ್ತು ಕಾಶ್ಮೀರದ ರಾಜೌರಿ ಜಿಲ್ಲೆಯ ಹಿಂದೂ ಕುಟುಂಬವೊಂದು ತಮ್ಮ ಮಗಳು ಹಣೆಯ ಮೇಲೆ ತಿಲಕವಿಟ್ಟು ಶಾಲೆಗೆ ಹೋದ ಕಾರಣಕ್ಕೆ ಶಾಲಾ ಶಿಕ್ಷಕರೊಬ್ಬರು ಥಳಿಸಿದ್ದಾರೆ ಎಂದು ಆರೋಪಿಸಿದ್ದಾರೆ. ನಿಸಾರ್ ಅಹ್ಮದ್ ಎಂದು ಗುರುತಿಸಲಾಗಿರುವ ಶಿಕ್ಷಕನನ್ನು ಇದೀಗ ರಜೌರಿ ಜಿಲ್ಲೆಯ ಜಿಲ್ಲಾಧಿಕಾರಿ ಆದೇಶದ ಮೇರೆಗೆ ಅಮಾನತುಗೊಳಿಸಲಾಗಿದೆ.
advertisement
9535127775 / 9901837775 / 6364528715 / 08362775155 / https://icsmpucollege.com/
ಮಿಡ್ಲ್ ಸ್ಕೂಲ್ ಖದುರಿಯನ್ ಪಂಚಾಯತದ ಡ್ರಾಮ್ಮನ್‌ನ ಇಬ್ಬರು ಹುಡುಗಿಯರನ್ನು ಶಿಕ್ಷಕರೊಬ್ಬರು ಥಳಿಸಿದ ಸಾಮಾಜಿಕ ಮಾಧ್ಯಮ ವರದಿಗಳನ್ನು ಗಮನಿಸಿರುವುದಾಗಿ ಆದೇಶದಲ್ಲಿ ತಿಳಿಸಲಾಗಿದೆ. ಮುಂದಿನ ಆದೇಶದವರೆಗೆ ನಿಸಾರ್ ಅಹಮದ್ ಅವರನ್ನು ಅಮಾನತುಗೊಳಿಸಲಾಗಿದೆ.
ಘಟನೆ ಹಾಗೂ ಆರೋಪಗಳು ನಿಜವೇ, ಮಗುವಿಗೆ ಥಳಿಸಿದ ಕಾರಣ ಇತ್ಯಾದಿಗಳ ಕುರಿತು ಬಗ್ಗೆ ತನಿಖೆ ನಡೆಸುವಂತೆ ಪೊಲೀಸರಿಗೆ ತಿಳಿಸಲಾಗಿದೆ,
ಘಟನೆಯ ಕುರಿತು ಮಾತನಾಡಿದ ರಾಜೌರಿ ಹಿರಿಯ ಪೊಲೀಸ್ ಅಧೀಕ್ಷಕ ಮೊಹಮ್ಮದ್ ಅಸ್ಲಾಂ ಚೌಧರಿ, “ನಾವು ಈ ಘಟನೆಯನ್ನು ಗಮನಿಸಿದ್ದೇವೆ. ಅಪ್ರಾಪ್ತ ಬಾಲಕಿಗೆ ಥಳಿಸಿರುವ ಹಾಗೂ ಆಕೆಯ ವಿರುದ್ಧ ಶಿಕ್ಷಕರೊಬ್ಬರು ಆಕ್ಷೇಪಾರ್ಹ ಪದಗಳನ್ನು ಬಳಸಿರುವ ಬಗ್ಗೆ ನಮಗೆ ದೂರು ಬಂದಿತ್ತು. ಆರೋಪಿ ಶಿಕ್ಷಕನ ವಿರುದ್ಧ ಪ್ರಕರಣ ದಾಖಲಿಸಿದ್ದೇವೆ. ನಾವು ಈ ವಿಷಯದಲ್ಲಿ ತನಿಖೆಯನ್ನು ಪ್ರಾರಂಭಿಸಿದ್ದೇವೆ ಎಂದು ತಿಳಿಸಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ