ಮಲ್ಪೆ ಬೀಚಿನಲ್ಲಿ ಮೂವರು ಇಂಜಿನಿಯರಿಂಗ್​ ವಿದ್ಯಾರ್ಥಿಗಳು ನೀರು ಪಾಲು

posted in: ರಾಜ್ಯ | 0

ಉಡುಪಿ: ಮಲ್ಪೆ ಸೇಂಟ್‌ ಮೇರಿಸ್ ದ್ವೀಪಕ್ಕೆ ಪ್ರವಾಸಕ್ಕೆಂದು ಬಂದಿದ್ದ ವಿದ್ಯಾರ್ಥಿಗಳ ಪೈಕಿ ಮೂವರು ನೀರುಪಾಲಾದ ಘಟನೆ ಇಂದು (ಏಪ್ರಿಲ್‌ 7) ನಡೆದಿದೆ.
ಕೇರಳದ ಕೊಟ್ಟಾಯಂನಿಂದ ಮಂಗಳಂ ಇಂಜಿನಿಯರಿಂಗ್ ಕಾಲೇಜಿನ 80ಕ್ಕೂ ಹೆಚ್ಚು ವಿದ್ಯಾರ್ಥಿಗಳು ಉಡುಪಿ ಪ್ರವಾಸಕ್ಕೆ ಬಂದಿದ್ದರು.

ಎಲ್ಲರೂ ಮಲ್ಪೆ ತೋನ್ಸೆಪಾರ್ ದ್ವೀಪದ ಬಳಿ ನೀರಿಗೆ ಇಳಿದಿದ್ದರು. ಈ ಪೈಕಿ ಅಲೆನ್ ರೆಜಿ, ಅಮಲ್, ಅನಿಲ್ ಎಂಬ ವಿದ್ಯಾರ್ಥಿಗಳು ನೀರಲ್ಲಿ ಮುಳುಗಿದ್ದಾರೆ. ಕೂಡಲೇ ಅವರನ್ನು ಹೊರಗೆ ಎಳೆತಂದು ಆಸ್ಪತ್ರೆಗೆ ಕರೆದೊಯ್ಯಲು ಪ್ರಯತ್ನಿಸಲಾಯಿತು. ಆದರೆ ಅವರು ಬದುಕಲಿಲ್ಲ.
ಜತೆಗೆ ಮತ್ತೊಬ್ಬ ವಿದ್ಯಾರ್ಥಿ ನೀರಲ್ಲಿ ಮುಳುಗಿದ್ದಾನೆ ಎಂದು ಹೇಳಲಾಗಿದ್ದು ಶೋಧ ಕಾರ್ಯ ಮುಂದುವರಿದಿದೆ. ದ್ವೀಪ ಪ್ರದೇಶದ ಅಪಾಯಕಾರಿ ಸಮುದ್ರ ಭಾಗದಲ್ಲಿ ವಿದ್ಯಾರ್ಥಿಗಳು ನೀರಿಗಿಳಿದಿದ್ದು, ಈ ವೇಳೆ ಈ ದುರ್ಘಟನೆ ಸಂಭವಿಸಿದೆ ಎಂದು ಹೇಳಲಾಗಿದೆ. ಸ್ಥಳಕ್ಕೆ ಮಲ್ಪೆ ಠಾಣೆ ಪೊಲೀಸರು ಭೇಟಿ ನೀಡಿದ್ದಾರೆ.
.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 1

ಓದಿರಿ :-   ಹುಚ್ಚು ಸಾಹಸ...ಶ್ರೀನಿವಾಸ ಸಾಗರ ಅಣೆಕಟ್ಟಿನ ಗೋಡೆ ಹತ್ತುವಾಗ 30 ಅಡಿ ಎತ್ತರದಿಂದ ಬಿದ್ದ ಯುವಕ | ದೃಶ್ಯ ವೀಡಿಯೊದಲ್ಲಿ ಸೆರೆ
advertisement

ನಿಮ್ಮ ಕಾಮೆಂಟ್ ಬರೆಯಿರಿ