ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮೇಲೆ ಹಿಜಾಬ್ ವಿವಾದ ಪರಿಣಾಮ ಬೀರಿಲ್ಲ, ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಗೈರು ಇತರೆ ಸಮುದಾಯಕ್ಕಿಂತ ಕಡಿಮೆ: ಬಿ.ಸಿ.ನಾಗೇಶ

ಬೆಂಗಳೂರು: ಎಸ್‌ಎಸ್‌ಎಲ್‌ಸಿ ಪರೀಕ್ಷೆ ವೇಳೆ ಅಲ್ಪಸಂಖ್ಯಾತ ಸಮುದಾಯದ ಬಾಲಕಿಯರ ಹಾಜರಾತಿ ಮೇಲೆ ಹಿಜಾಬ್ ಸಮಸ್ಯೆ ಪರಿಣಾಮ ಬೀರಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಬುಧವಾರ ಹೇಳಿದ್ದಾರೆ ಎಂದು ನ್ಯೂ ಇಂಡಿಯನ್‌ ಎಕ್ಸ್‌ಪ್ರೆಸ್‌.ಕಾಮ್‌ ವರದಿ ಮಾಡಿದೆ.
ವರದಿ ಪ್ರಕಾರ, ಅಲ್ಪ ಸಂಖ್ಯಾತ ಸಮುದಾಯದ ಬಾಲಕಿಯರ ಗೈರು ಹಾಜರಿ ಕೇವಲ ಶೇ.1.8ರಷ್ಟಿದ್ದರೆ, ಇತರೆ ಸಮುದಾಯದ ಬಾಲಕಿಯರಲ್ಲಿ ಗೈರು ಹಾಜರಿ ಶೇ.2.2ರಷ್ಟಿದೆ ಎಂದು ಶಿಕ್ಷಣ ಇಲಾಖೆಯು ಇತ್ತೀಚೆಗೆ ನಡೆದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ವೇಳೆ 14 ಜಿಲ್ಲೆಗಳಲ್ಲಿ ಒಂದು ದಿನದ ಸಮೀಕ್ಷೆ ವೇಳೆ ಕಂಡುಬಂದಿದೆ ಎಂದು ಅವರು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಶಿಕ್ಷಣ ಸಚಿವ ನಾಗೇಶ ಅವರು, ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಶೇ.98.8ರಷ್ಟು ಹುಡುಗಿಯರು ಮತ್ತು ಶೇ.98.2ರಷ್ಟು ಹುಡುಗರು ಹಾಜರಾಗಿದ್ದಾರೆ. ಸಾಂಕ್ರಾಮಿಕ ಪರಿಸ್ಥಿತಿಯಿಂದಾಗಿ, ಕಳೆದ ವರ್ಷ ಕಡಿಮೆ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಮುಂದಿನ ತರಗತಿಗೆ ಬಡ್ತಿ ನೀಡಿದ್ದರಿಂದ, ಈ ವರ್ಷವೂ ಅವರು ನಿರೀಕ್ಷಿಸಿದಂತೆ ಖಾಸಗಿ ಅಭ್ಯರ್ಥಿಗಳ (ಶಾಲೆಗಳಿಗೆ ಬರುವ ಸಾಮಾನ್ಯ ವಿದ್ಯಾರ್ಥಿಗಳಲ್ಲ) ದಾಖಲಾತಿ ಹೆಚ್ಚಾಗಿದೆ. ಹಾಗಾಗಿ ಗೈರು ಹಾಜರಾದವರಲ್ಲಿ ಹೆಚ್ಚಿನವರು ಖಾಸಗಿ ಅಭ್ಯರ್ಥಿಗಳು. ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳ ಹಾಜರಾತಿಯಲ್ಲಿನ ಈ ಸಣ್ಣ ವ್ಯತ್ಯಾಸವು ಹೊಸದಲ್ಲ ಮತ್ತು ಹಿಂದಿನ ವರ್ಷಗಳಲ್ಲೂ ಇತ್ತು. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ವರ್ಷ ಹಾಜರಾತಿ ಹೆಚ್ಚಿತ್ತು ಎಂದು ಅವರು ಹೇಳಿದ್ದಾರೆ.
ಶೇ.25 ರಿಂದ 33 ರಷ್ಟು ಶಿಕ್ಷಕರಿಗೆ ಪರೀಕ್ಷೆಯಿಲ್ಲದೆ ಬಡ್ತಿ
ಸೇವೆಯಲ್ಲಿರುವ ಶಿಕ್ಷಕರಲ್ಲಿ ಕನಿಷ್ಠ ಶೇ.25 ರಿಂದ 33 ರಷ್ಟು ಶಿಕ್ಷಕರಿಗೆ ಪರೀಕ್ಷೆಯಿಲ್ಲದೆ ಬಡ್ತಿ ನೀಡಲಾಗುವುದು. ಈ ಬಗ್ಗೆ ಈ ವಾರ ನಿರ್ಧಾರ ಕೈಗೊಳ್ಳಲಾಗುವುದು ಎಂದರು. ರಾಜ್ಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಇಲಾಖೆ ವತಿಯಿಂದ ರಾಜ್ಯಾದ್ಯಂತ ಶಿಕ್ಷಕರ ಸಂಘಗಳ ಪ್ರತಿನಿಧಿಗಳಿಗಾಗಿ ಬೆಂಗಳೂರಿನಲ್ಲಿ ಬುಧವಾರ ಹಮ್ಮಿಕೊಂಡಿದ್ದ ‘ಕಲಿಕಾ ಚೇತರಿಕೆ’ ರಾಜ್ಯಮಟ್ಟದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಶಿಕ್ಷಣ ಇಲಾಖೆ ಮತ್ತು ಕೇಂದ್ರ ಸರ್ಕಾರದ ಸಮೀಕ್ಷೆಯು ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಶಾಲಾ ಮಕ್ಕಳ ಕಲಿಕೆಯ ಗುಣಮಟ್ಟ ಕುಸಿದಿದೆ ಎಂದು ಸೂಚಿಸುತ್ತದೆ ಎಂದು ನಾಗೇಶ್ ಹೇಳಿದರು. ಮಕ್ಕಳಲ್ಲಿ ಕಲಿಕಾ ಗುಣಮಟ್ಟವನ್ನು ಸುಧಾರಿಸುವ ನಿಟ್ಟಿನಲ್ಲಿ ರಾಜ್ಯವು ‘ಕಲಿಕಾ ಚೆತ್ತರಿಕೆ’ ಎಂಬ ಪ್ರಮುಖ ಕಾರ್ಯಕ್ರಮವನ್ನು ಕೈಗೆತ್ತಿಕೊಂಡಿದೆ ಎಂದರು.
ರಾಜ್ಯಾದ್ಯಂತ 140 ಶಿಕ್ಷಕರ ಸಂಘಗಳ ಪ್ರತಿನಿಧಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.

ಪ್ರಮುಖ ಸುದ್ದಿ :-   ೯೦ ವರ್ಷಗಳಿಂದ ಕನ್ನಡ ಪುಸ್ತಕಗಳನ್ನು ಪ್ರಕಟಿಸುತ್ತಿರುವ ಸಾಹಿತ್ಯ ಭಂಡಾರ ಪುಸ್ತಕ ಮಳಿಗೆಗೆ ಈಗ ನವೀಕರಣದ ಸಂಭ್ರಮ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement