ಗೋರಖನಾಥ ದೇವಾಲಯದ ದಾಳಿಕೋರ ಇಸ್ಲಾಮಿಕ್ ಸ್ಟೇಟ್‌ ಗುಂಪಿನಿಂದ ಹನಿ ಟ್ರ್ಯಾಪ್ : ಉತ್ತರ ಪ್ರದೇಶ ಪೊಲೀಸರು

ಲಕ್ನೋ: ಉತ್ತರ ಪ್ರದೇಶ ಗೋರಖನಾಥ ದೇವಾಲಯದ ದಾಳಿ ಪ್ರಕರಣ ಹೊಸ ಟ್ವಿಸ್ಟ್ ಪಡೆದಿದೆ. ಉತ್ತರ ಪ್ರದೇಶ ಪೊಲೀಸರ ಭಯೋತ್ಪಾದನಾ ನಿಗ್ರಹ ದಳವು ಗೋರಖನಾಥ ದೇವಾಲಯದ ದಾಳಿ ಪ್ರಕರಣದಲ್ಲಿ ಹನಿ ಟ್ರ್ಯಾಪ್ ಕೋನವನ್ನು ಬಹಿರಂಗಪಡಿಸಿದೆ ಎಂದು ಇಂಡಿಯಾ ಟುಡೆ.ಕಾಮ್‌ ವರದಿ ಮಾಡಿದೆ

ವರದಿ ಪ್ರಕಾರ, ಗೋರಖನಾಥ ದೇವಾಲಯದ ದಾಳಿಕೋರ ಅಹ್ಮದ್ ಮುರ್ತಾಜಾ ಅಬ್ಬಾಸಿ ಇಸ್ಲಾಮಿಕ್ ಸ್ಟೇಟ್‌ ಭಯೋತ್ಪಾದಕ ಗುಂಪಿನಿಂದ ಹನಿಟ್ರ್ಯಾಪ್ ಆಗಿದ್ದಾನೆ ಎಂದು ಆರೋಪಿಸಲಾಗಿದೆ. ಪೊಲೀಸ್ ಮೂಲಗಳ ಪ್ರಕಾರ, ಅಬ್ಬಾಸಿಗೆ ಬಹುಶಃ ಮಹಿಳೆಯಿಂದ ಮೊದಲು ಇ ಮೇಲ್ ಬಂದಿತ್ತು. ತಾನು ಐಎಸ್ ಶಿಬಿರದಲ್ಲಿ ಸಿಕ್ಕಿಬಿದ್ದಿದ್ದೇನೆ ಎಂದು ಹೇಳಿದ ಮಹಿಳೆ ತನ್ನ ಫೋಟೋವನ್ನು ಅಬ್ಬಾಸಿಗೆ ಕಳುಹಿಸಿ ನೆರವು ಕೋರಿದ್ದಾಳೆ. ಆಕೆಗೆ ಸಹಾಯ ಮಾಡಲು ಅಬ್ಬಾಸಿ 40,000 ರೂ. ಗಳನ್ನು ಮಹಿಳೆಗೆ ಕಳುಹಿಸಿದ್ದಾನೆ. ಮಹಿಳೆ ನಂತರ ಭಾರತದಲ್ಲಿ ಭೇಟಿಯಾಗುವುದಾಗಿ ಭರವಸೆ ನೀಡಿದ್ದಾಳೆ.ಇ-ಮೇಲ್ ವಿನಿಮಯವನ್ನು ಮುಂದುವರಿಸುತ್ತಿದ್ದಂತೆ ಅಬ್ಬಾಸಿ ಐಎಸ್ ಸೇರಲು ತಯಾರಿ ನಡೆಸಿದ್ದರ. ಅಬ್ಬಾಸಿ ಮಹಿಳೆಗೆ ಮೂರು ಬಾರಿ ಹಣ ಕಳುಹಿಸಿದ್ದ ಎಂದು ಪೊಲೀಸರು ಮಾಹಿತಿ ಬಹಿರಂಗಪಡಿಸಿದ್ದಾರೆ.

ಪ್ರಮುಖ ಸುದ್ದಿ :-   ಗೂಢಲಿಪಿ ಬಹಿರಂಗಗೊಳಿಸಲು ಒತ್ತಾಯಿಸಿದರೆ ಭಾರತದಿಂದ ನಿರ್ಗಮಿಸಬೇಕಾಗ್ತದೆ ಎಂದ ವಾಟ್ಸಾಪ್

ಐಐಟಿ ಪದವೀಧರನಾದ ಅಬ್ಬಾಸಿ ಏಪ್ರಿಲ್ 3 ರಂದು ಗೋರಖ್‌ಪುರದ ಗೋರಖ್‌ನಾಥ್ ದೇವಸ್ಥಾನದಲ್ಲಿ ನಿಯೋಜನೆಗೊಂಡಿದ್ದ ಉತ್ತರ ಪ್ರದೇಶ ಪ್ರಾಂತೀಯ ಸಶಸ್ತ್ರ ಕಾನ್‌ಸ್ಟಾಬ್ಯುಲರಿ ಸಿಬ್ಬಂದಿ ಮೇಲೆ ದಾಳಿ ನಡೆಸಿದ್ದ. ದಾಳಿಯಲ್ಲಿ ಇಬ್ಬರು ಕಾನ್‌ಸ್ಟೆಬಲ್‌ಗಳು ಗಾಯಗೊಂಡಿದ್ದಾರೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಗೋರಖನಾಥ ದೇವಸ್ಥಾನದ ಪ್ರಧಾನ ಅರ್ಚಕ ಅಥವಾ ಮಹಾಂತ್.
ಉತ್ತರ ಪ್ರದೇಶ ಪೋಲೀಸರ ಪ್ರಕಾರ, ಅಬ್ಬಾಸಿ ತನ್ನ ತಪ್ಪೊಪ್ಪಿಗೆಯಲ್ಲಿ ಮುಸ್ಲಿಮರ ವಿರುದ್ಧ ನಡೆದ ಆಪಾದಿತ ದೌರ್ಜನ್ಯದಿಂದ ತನ್ನ ದ್ವೇಷವು ಹುಟ್ಟಿಕೊಂಡಿದೆ ಎಂದು ಹೇಳಿದ್ದಾರೆ. ಪೌರತ್ವ (ತಿದ್ದುಪಡಿ) ಕಾಯ್ದೆಯೂ ತಪ್ಪು ಎಂದು ಆತ ಹೇಳಿದ್ದಾಮೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement