ಬಂಧನದ ನಂತರ ಒಡಿಶಾ ಪತ್ರಕರ್ತನನ್ನು ಆಸ್ಪತ್ರೆಯಲ್ಲಿ ಮಲಗಿಸಿ ಸರಪಳಿಯಿಂದ ಬಂಧಿಸಿದ ಪೊಲೀಸರು: ತನಿಖೆಗೆ ಆದೇಶ

ಬಾಲಸೋರ್: ಒಡಿಶಾದ ಟೆಲಿವಿಷನ್ ಪತ್ರಕರ್ತನ ಮೇಲೆ ಪೊಲೀಸರು ಹಲ್ಲೆ ನಡೆಸಿದ್ದಾರೆ ಮತ್ತು ನಂತರ ಒಡಿಶಾದ ಬಾಲಸೋರ್‌ನ ಆಸ್ಪತ್ರೆಯೊಂದರಲ್ಲಿ ಬೆಡ್‌ಗೆ ಸರಪಳಿಯಿಂದ ಬಂಧಿಸಿದ್ದಾರೆ.
ವರದಿಗಳ ಪ್ರಕಾರ, ಪತ್ರಕರ್ತನನ್ನು ಪೊಲೀಸ್ ಠಾಣೆಯೊಳಗೆ ಅಮಾನುಷವಾಗಿ ಥಳಿಸಲಾಯಿತು ಮತ್ತು ನಂತರ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದ ನಂತರ ಅವರ ಆಸ್ಪತ್ರೆಯ ಹಾಸಿಗೆಗೆ ಕಾಲಲನ್ನು ಸೇರಿಸಿ ಸರಪಳಿಯಲ್ಲಿ ಬಿಗಿಲಾಯಿತು.

ಆಸ್ಪತ್ರೆಯಿಂದ ಪತ್ರಕರ್ತನನ್ನು ಸರಪಳಿಯಲ್ಲಿ ಬಿಗಿದಿದ್ದ ದೃಶ್ಯಗಳನ್ನು ಕೆಲವು ಸ್ಥಳೀಯ ಸುದ್ದಿ ವಾಹಿನಿಗಳು ಪ್ರಸಾರ ಮಾಡಿದ ನಂತರ ಈ ಘಟನೆಯು ಭಾರೀ ವಿವಾದಕ್ಕೆ ಕಾರಣವಾಯಿತು. ಘಟನೆಯ ಬಗ್ಗೆ ಡಿಎಸ್ಪಿ ಶ್ರೇಣಿಯ ಅಧಿಕಾರಿಯಿಂದ ತನಿಖೆಗೆ ಆದೇಶಿಸಲಾಯಿತು.
ಬಾಲಸೋರ್ ಜಿಲ್ಲೆಯ ನೀಲಗಿರಿ ಪೊಲೀಸ್ ಠಾಣೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ವರದಿ ಮಾಡಿದ್ದಕ್ಕಾಗಿ ತನಗೆ ಥಳಿಸಲಾಗಿದೆ ಎಂದು ಲೋಕನಾಥ್ ದಲೇ ಎಂದು ಗುರುತಿಸಲಾದ ಪತ್ರಕರ್ತ ಹೇಳಿಕೊಂಡಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
ಒಡಿಶಾ ಮಾನವ ಹಕ್ಕುಗಳ ಆಯೋಗವು (OHRC) ಈ ವಿಷಯವನ್ನು ಸ್ವಯಂ ಪ್ರೇರಿತವಾಗಿ ತೆಗೆದುಕೊಂಡಿದೆ. ಈ ಬಗ್ಗೆ 15 ದಿನಗಳಲ್ಲಿ ವರದಿ ಸಲ್ಲಿಸುವಂತೆ ಬಾಲಸೋರ್‌ನ ಈಸ್ಟರ್ನ್ ರೇಂಜ್‌ಗೆ ನಿರ್ದೇಶನ ನೀಡಿದೆ.

ಪ್ರಮುಖ ಸುದ್ದಿ :-   ಏಪ್ರಿಲ್‌ ತಿಂಗಳಲ್ಲಿ ದಾಖಲೆಯ ಪ್ರಮಾಣದ ಜಿಎಸ್‌ಟಿ ಸಂಗ್ರಹ ; ಕರ್ನಾಟಕಕ್ಕೆ 2ನೇ ಸ್ಥಾನ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement