ಮುಂಬೈ: ಥಾಣೆ ಆಸ್ಪತ್ರೆಯಲ್ಲಿ 24 ತಾಸಿನಲ್ಲಿ 18 ಸಾವು ; ತನಿಖೆಗೆ ಆದೇಶ

ಮುಂಬೈ : ಮಹಾರಾಷ್ಟ್ರದ ಥಾಣೆಯಲ್ಲಿರುವ ಛತ್ರಪತಿ ಶಿವಾಜಿ ಮಹಾರಾಜ್ ಆಸ್ಪತ್ರೆಯಲ್ಲಿ ಕಳೆದ 24 ಗಂಟೆಗಳಲ್ಲಿ ಹದಿನೆಂಟು ರೋಗಿಗಳು ಸಾವಿಗೀಡಾಗಿದ್ದಾರೆ. ಮೃತರಲ್ಲಿ ಹತ್ತು ಮಹಿಳೆಯರು ಮತ್ತು ಎಂಟು ಪುರುಷರು ಸೇರಿದ್ದಾರೆ.ಆರು ಮಂದಿ ಥಾಣೆ ನಗರದವರು, ನಾಲ್ವರು ಕಲ್ಯಾಣ, ಮೂವರು ಸಹಾಪುರ, ಭಿವಂಡಿ, ಉಲ್ಲಾಸನಗರ, ಗೋವಂಡಿ (ಮುಂಬೈನಲ್ಲಿ) ತಲಾ ಒಬ್ಬರು, ಹಾಗೂ ಇಬ್ಬರನ್ನು ಇನ್ನೂ ಗುರುತಿಸಬೇಕಾಗಿದೆ ಎಂದು ಪೌರಾಯುಕ್ತ … Continued

ಇದೆಂಥ ಘೋರ ಶಿಕ್ಷೆ…: ಇಂಗ್ಲಿಷ್‌ನಲ್ಲಿ ಮಾತನಾಡಲು ಬಂದಿಲ್ಲವೆಂದು 6ನೇ ತರಗತಿ ವಿದ್ಯಾರ್ಥಿಗೆ ಚಪ್ಪಲಿ ಹಾರ…!

ಶಿಲ್ಲಾಂಗ್ : ಪೂರ್ವ ಖಾಸಿ ಹಿಲ್ಸ್‌ನ ದಂಗರ್ ಪ್ರದೇಶದಲ್ಲಿ ದೈಹಿಕ ಶಿಕ್ಷೆಯ ಭಯಾನಕ ಪ್ರಕರಣವೊಂದರಲ್ಲಿ, ತರಗತಿಯ ಸಮಯದಲ್ಲಿ ಇಂಗ್ಲಿಷ್‌ನಲ್ಲಿ ಮಾತನಾಡಲು ಬಂದಿಲ್ಲ ಎಂಬ ಕಾರಣಕ್ಕೆ ವಿದ್ಯಾರ್ಥಿಯೊಬ್ಬನಿಗೆ ಶೂ ಮತ್ತು ಚಪ್ಪಲ್‌ಗಳ ಹಾರವನ್ನು ಹಾಕಿಕೊಳ್ಳುವಂತೆ ಮಾಡಿದ ಘಟನೆ ವರದಿಯಾಗಿದೆ. ಮುಖ್ಯೋಪಾಧ್ಯಾಯರು, ಶಾಲಾ ಶಿಕ್ಷಕರು ಮತ್ತು ಸಹ ವಿದ್ಯಾರ್ಥಿಗಳ ಮುಂದೆ ಮಣ್ಣಾದ ಪಾದರಕ್ಷೆಯನ್ನು ಬಾಲಕನಿಗೆ ಹಾರದಂತೆ ಹಾಕಿಸಿ ಮೆರವಣಿಗೆ … Continued

ಹಿಂದೂ-ಜೈನ್‌ ವಿದ್ಯಾರ್ಥಿನಿಯರಿಗೆ ಹಿಜಾಬ್ ಹಾಕಿಸಿದ ಆರೋಪ: ಮಧ್ಯಪ್ರದೇಶ ಖಾಸಗಿ ಶಾಲೆ ವಿರುದ್ಧ ತನಿಖೆಗೆ ಆದೇಶ

ಭೋಪಾಲ್/ಸಾಗರ್: ಮಧ್ಯಪ್ರದೇಶದ ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕರು ಮುಸ್ಲಿಮೇತರ ವಿದ್ಯಾರ್ಥಿನಿಯರಿಗೆ ಹಿಜಾಬ್(Hijab) ಧರಿಸುವಂತೆ ಒತ್ತಾಯಿಸಿದ್ದಾರೆ ಎನ್ನುವ ವಿಚಾ ಬೆಳಕಿಗೆ ಬಂದ ನಂತರ ವಿವಾದ ಭುಗಿಲೆದ್ದಿದೆ. ಬೋರ್ಡ್ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ 18 ವಿದ್ಯಾರ್ಥಿಗಳನ್ನು ಅಭಿನಂದಿಸುವ ಖಾಸಗಿ ಶಾಲೆಯ ಪೋಸ್ಟರ್‌ನ ಕುರಿತು ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ಅವರು ಬುಧವಾರ ವಿಸ್ತೃತ ಪೊಲೀಸ್ ತನಿಖೆಗೆ ಆದೇಶಿಸಿದ್ದಾರೆ, … Continued

ಜೆಎನ್‌ಯು ಕ್ಯಾಂಪಸ್ ಗೋಡೆಗಳಲ್ಲಿ ಬ್ರಾಹ್ಮಣ-ಬನಿಯಾ ವಿರೋಧಿ ಬರಹ : ತನಿಖೆಗೆ ಆದೇಶ

ನವದೆಹಲಿ: ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯದಲ್ಲಿ ಮತ್ತೊಮ್ಮೆ ವಿವಾದ ಭುಗಿಲೆದ್ದಿದ್ದು, ಕ್ಯಾಂಪಸ್‍ನ ಗೋಡೆಗಳ ಮೇಲೆ ಬ್ರಾಹ್ಮಣ ಮತ್ತು ಬನಿಯಾ ಸಮುದಾಯಗಳ ವಿರುದ್ಧ ಘೋಷಣೆಗಳನ್ನು (Anti-Brahmin Slogans) ಬರೆಯಲಾಗಿದೆ. ಭಾಷಾ ಮತ್ತು ಸಾಹಿತ್ಯ ಶಾಲೆಯ ಎರಡನೇ ಮತ್ತು ಮೂರನೇ ಮಹಡಿಗಳ ಗೋಡೆಗಳು ಮತ್ತು ಹಲವಾರು ಅಧ್ಯಾಪಕರ ಬಾಗಿಲುಗಳ ಮೇಲೆ ಆಕ್ಷೇಪಾರ್ಹ ಬರಹಗಳನ್ನು ಬರೆಯಲಾಗಿದೆ. ಬ್ರಾಹ್ಮಣ ಮತ್ತು ಬನಿಯಾ ಸಮುದಾಯಗಳ … Continued

ವಿದ್ಯಾರ್ಥಿಯನ್ನು ‘ಭಯೋತ್ಪಾದಕ’ ಎಂದು ಕರೆದಿದ್ದಕ್ಕಾಗಿ ಪ್ರಾಧ್ಯಾಪಕ ಅಮಾನತು, ತನಿಖೆಗೆ ಆದೇಶ

 ಉಡುಪಿ:ಮಣಿಪಾಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ವರದಿಯಾಗಿರುವ ವಿಡಿಯೋವೊಂದು ವೈರಲ್ ಆಗಿದ್ದು, ಮುಸ್ಲಿಂ ವಿದ್ಯಾರ್ಥಿಯೊಬ್ಬ ತನ್ನನ್ನು ‘ಭಯೋತ್ಪಾದಕ’ ಎಂದು ಕರೆದಿದ್ದಕ್ಕಾಗಿ ಪ್ರಾಧ್ಯಾಪಕರ ಜೊತೆ ಜಗಳವಾಡುತ್ತಿರುವುದನ್ನು ತೋರಿಸಲಾಗಿದೆ. ಇದರ ಬೆನ್ನಲ್ಲೇ ಸೋಮವಾರ ಪ್ರಾಧ್ಯಾಪಕರನ್ನು ಸಂಸ್ಥೆಯಿಂದ ಅಮಾನತುಗೊಳಿಸಲಾಗಿದೆ. 45 ಸೆಕೆಂಡುಗಳ ವೀಡಿಯೊದಲ್ಲಿ, ವಿದ್ಯಾರ್ಥಿಯು ತರಗತಿಯಲ್ಲಿ ಪ್ರಾಧ್ಯಾಪಕರನ್ನು ಎದುರಿಸುತ್ತಿರುವುದನ್ನು ಗುರುತಿಸಬಹುದು. ವೈರಲ್ ವೀಡಿಯೊದಲ್ಲಿ ಪ್ರಾಧ್ಯಾಪಕರು ನಂತರ ವಿದ್ಯಾರ್ಥಿ ಬಳಿ ಕ್ಷಮೆಯಾಚಿಸಿದ್ದಾರೆ ಮತ್ತು … Continued

ಬಂಧನದ ನಂತರ ಒಡಿಶಾ ಪತ್ರಕರ್ತನನ್ನು ಆಸ್ಪತ್ರೆಯಲ್ಲಿ ಮಲಗಿಸಿ ಸರಪಳಿಯಿಂದ ಬಂಧಿಸಿದ ಪೊಲೀಸರು: ತನಿಖೆಗೆ ಆದೇಶ

ಬಾಲಸೋರ್: ಒಡಿಶಾದ ಟೆಲಿವಿಷನ್ ಪತ್ರಕರ್ತನ ಮೇಲೆ ಪೊಲೀಸರು ಹಲ್ಲೆ ನಡೆಸಿದ್ದಾರೆ ಮತ್ತು ನಂತರ ಒಡಿಶಾದ ಬಾಲಸೋರ್‌ನ ಆಸ್ಪತ್ರೆಯೊಂದರಲ್ಲಿ ಬೆಡ್‌ಗೆ ಸರಪಳಿಯಿಂದ ಬಂಧಿಸಿದ್ದಾರೆ. ವರದಿಗಳ ಪ್ರಕಾರ, ಪತ್ರಕರ್ತನನ್ನು ಪೊಲೀಸ್ ಠಾಣೆಯೊಳಗೆ ಅಮಾನುಷವಾಗಿ ಥಳಿಸಲಾಯಿತು ಮತ್ತು ನಂತರ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದ ನಂತರ ಅವರ ಆಸ್ಪತ್ರೆಯ ಹಾಸಿಗೆಗೆ ಕಾಲಲನ್ನು ಸೇರಿಸಿ ಸರಪಳಿಯಲ್ಲಿ ಬಿಗಿಲಾಯಿತು. ಆಸ್ಪತ್ರೆಯಿಂದ ಪತ್ರಕರ್ತನನ್ನು ಸರಪಳಿಯಲ್ಲಿ ಬಿಗಿದಿದ್ದ … Continued

10 ಕಿಮೀ ದೂರ ಮಗಳ ಶವ ಹೊತ್ತೊಯ್ದ ವ್ಯಕ್ತಿ…ತನಿಖೆಗೆ ಆದೇಶ

ಅಂಬಿಕಾಪುರ (ಛತ್ತೀಸ್‌ಗಢ) : ಛತ್ತೀಸ್‌ಗಢದ ಸುರ್ಗುಜಾ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬ ತನ್ನ ಏಳು ವರ್ಷದ ಮಗಳ ಶವವನ್ನು ಭುಜದ ಮೇಲೆ ಹೊತ್ತುಕೊಂಡು ಹೋಗುತ್ತಿರುವ ವೀಡಿಯೊವನ್ನು ಶುಕ್ರವಾರ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದ್ದು, ಆರೋಗ್ಯ ಸಚಿವ ಟಿ.ಎಸ್. ಸಿಂಗ್ ದೇವ್ ತನಿಖೆಗೆ ಆದೇಶಿಸಿದ್ದಾರೆ. ಅಧಿಕಾರಿಗಳ ಪ್ರಕಾರ, ಜಿಲ್ಲೆಯ ಲಖನ್‌ಪುರ ಗ್ರಾಮದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಶುಕ್ರವಾರ ಬೆಳಗ್ಗೆ ಬಾಲಕಿ … Continued

ಒಡಿಶಾದ ಆಸ್ಪತ್ರೆಯ ನೆಲದಲ್ಲಿ ನಗ್ನವಾಗಿ ಮಲಗಿದ್ದ ಕೋವಿಡ್‌ ಸೋಂಕಿತರು: ತನಿಖೆಗೆ ಆದೇಶ

ಭುವನೇಶ್ವರ: ಬುಡಕಟ್ಟು ಪ್ರಾಬಲ್ಯದ ಒಡಿಶಾದ ಮಯೂರ್ಭಂಜ್ ಜಿಲ್ಲೆಯ ಕೋವಿಡ್‌ ಆಸ್ಪತ್ರೆಯ ಶೌಚಾಲಯ ಹಾಗೂ ಬೆಡ್‌ಗಳ ಮೇಲೆ, ನೆಲದ ಮೇಲೆ ಬೆತ್ತಲೆಯಾಗಿ ಮಹಿಳೆಯರು ಸೇರಿದಂತೆ ಹಲವು ರೋಗಿಗಳು ಮಲಗಿದ್ದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದ್ದಂತೆ, ಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಗಿದೆ. ಜಿಲ್ಲೆಯ ನಗರದಲ್ಲಿನ ಆಸ್ಪತ್ರೆಯಲ್ಲಿ ಸೋಂಕಿತರ ಭೇಟಿಗಾಗಿ ಬಂದಿದ್ದ ವ್ಯಕ್ತಿಯೊಬ್ಬರು ರೋಗಿಗಳು ಬೆತ್ತಲಾಗಿ ಮಲಗಿರುವುದನ್ನು ನೋಡಿ, … Continued