ಇದೆಂಥ ಘೋರ ಶಿಕ್ಷೆ…: ಇಂಗ್ಲಿಷ್‌ನಲ್ಲಿ ಮಾತನಾಡಲು ಬಂದಿಲ್ಲವೆಂದು 6ನೇ ತರಗತಿ ವಿದ್ಯಾರ್ಥಿಗೆ ಚಪ್ಪಲಿ ಹಾರ…!

ಶಿಲ್ಲಾಂಗ್ : ಪೂರ್ವ ಖಾಸಿ ಹಿಲ್ಸ್‌ನ ದಂಗರ್ ಪ್ರದೇಶದಲ್ಲಿ ದೈಹಿಕ ಶಿಕ್ಷೆಯ ಭಯಾನಕ ಪ್ರಕರಣವೊಂದರಲ್ಲಿ, ತರಗತಿಯ ಸಮಯದಲ್ಲಿ ಇಂಗ್ಲಿಷ್‌ನಲ್ಲಿ ಮಾತನಾಡಲು ಬಂದಿಲ್ಲ ಎಂಬ ಕಾರಣಕ್ಕೆ ವಿದ್ಯಾರ್ಥಿಯೊಬ್ಬನಿಗೆ ಶೂ ಮತ್ತು ಚಪ್ಪಲ್‌ಗಳ ಹಾರವನ್ನು ಹಾಕಿಕೊಳ್ಳುವಂತೆ ಮಾಡಿದ ಘಟನೆ ವರದಿಯಾಗಿದೆ.
ಮುಖ್ಯೋಪಾಧ್ಯಾಯರು, ಶಾಲಾ ಶಿಕ್ಷಕರು ಮತ್ತು ಸಹ ವಿದ್ಯಾರ್ಥಿಗಳ ಮುಂದೆ ಮಣ್ಣಾದ ಪಾದರಕ್ಷೆಯನ್ನು ಬಾಲಕನಿಗೆ ಹಾರದಂತೆ ಹಾಕಿಸಿ ಮೆರವಣಿಗೆ ಮಾಡಲಾಗಿದೆ. ಶಾಲೆಯಲ್ಲಿ ನಡೆದ “ಕಾನೂನುಬಾಹಿರ ಈ ತರಹ ಅಮಾನವೀಯ ” ಕ್ರಮದ ವಿರುದ್ಧ ಮಗುವಿನ ತಂದೆ-ತಾಯಿ ಪೊಲೀಸರಿಗೆ ದೂರು ನೀಡಿದ್ದಾರೆ.
ಘಟನೆಯ ನಂತರ ಪೋಷಕರು ಪೊಲೀಸರಿಗೆ ದೂರು ನೀಡಿದ್ದು, ಜುಲೈ 21ರಂದು ಮೇರಿ ಇಮ್ಯಾಕ್ಯುಲೇಟ್ ಎಲ್‌ಪಿ ಮತ್ತು ಯುಪಿ ಶಾಲೆಯಲ್ಲಿ ಮುಖ್ಯ ಶಿಕ್ಷಕರು ಶಾಲೆಯ ಇಬ್ಬರು ಸಿಬ್ಬಂದಿಯೊಂದಿಗೆ 6ನೇ ತರಗತಿಯ ತಮ್ಮ ಮಗನಿಗೆ ಬಲವಂತದಿಂದ ಹಾರ ಹಾಕಿಕೊಳ್ಳುವಂತೆ ಮಾಡಿದ್ದಾರೆ. ಹಾರವು ಬೂಟುಗಳು ಹಾಗೂ ಚಪ್ಪಲಿಗಳಿಂದ ಮಾಡಲ್ಪಟ್ಟಿದೆ. ವಿದ್ಯಾರ್ಥಿಗೆ ಇಂಗ್ಲಿಷ್‌ನಲ್ಲಿ ಮಾತನಾಡಲು ಸಾಧ್ಯವಾಗದ ಕಾರಣ ಈ ಶಿಕ್ಷೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಇದಲ್ಲದೆ, ಶಿಕ್ಷಕನು ವೀಳ್ಯದೆಲೆ ಅಗಿದ ನಂತರ ಉಗುಳಿದ್ದು ಎಂದು ಹೇಳಲಾದ ಡಸ್ಟ್‌ಬಿನ್‌ಗಳನ್ನು ಸ್ವಚ್ಛಗೊಳಿಸಲು ವಿದ್ಯಾರ್ಥಿಯನ್ನು ಬಲವಂತ ಮಾಡಲಾಯಿತು ಎಂದು ವರದಿಯಾಗಿದೆ.

ಪ್ರಮುಖ ಸುದ್ದಿ :-   127 ವರ್ಷಗಳಷ್ಟು ಹಳೆಯ ಗೋದ್ರೇಜ್ ಗ್ರುಪ್‌ ಇಬ್ಭಾಗ

ವಿದ್ಯಾರ್ಥಿಗಳ ಪ್ರಕಾರ, ಮುಖ್ಯ ಶಿಕ್ಷಕರ ಶಾಲಾ ಅಸೆಂಬ್ಲಿಗಳಲ್ಲಿ ಶಿಕ್ಷಿಸಲ್ಪಡುವ ವಿದ್ಯಾರ್ಥಿಗಳ ಹೆಸರನ್ನು ಘೋಷಿಸುತ್ತಾರೆ, ನಂತರ ಆಪಾದಿತ “ಶೂ ಮೆರವಣಿಗೆ” ನಡೆಯುತ್ತದೆ. ಇದು ದಿನ ಬಿಟ್ಟು ದಿನ ಸಂಭವಿಸುತ್ತಿದೆ ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ ಹಾಗೂ ಕಸದ ತೊಟ್ಟಿಗಳಿಂದ ಶೂಗಳನ್ನು ಎತ್ತಿಕೊಂಡು ಹೋಗಿ ಹಾರ ತಯಾರಿಸಲಾಗುತ್ತದೆ ಎಂದು ಆರೋಪಿಸಲಾಗಿದೆ.
ಮತ್ತೊಂದು ದೂರಿನಲ್ಲಿ, ಗ್ರಾಮದ ಮುಖ್ಯಸ್ಥರು “ಶಾಲೆಯಲ್ಲಿ ಕಸದ ತೊಟ್ಟಿಗಳನ್ನು ನೆಕ್ಕುವುದು, ಕೂದಲು ಕತ್ತರಿಸುವುದು ಮುಂತಾದ ಅಮಾನವೀಯ ಶಿಕ್ಷೆಗಳನ್ನು ವಿಧಿಸಲಾಗುತ್ತದೆ” ಎಂದು ಆರೋಪಿಸಿದ್ದಾರೆ.
ಶಿಕ್ಷಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು, ಈ ರೀತಿಯ ಕಿರುಕುಳ ನೀಡುವುದನ್ನು ನಿಲ್ಲಿಸಬೇಕು, ಅಮಾಯಕರಿಗೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಹಿಂಸಿಸುವುದನ್ನು ನಿಲ್ಲಿಸಬೇಕು. ಈ ನಿಟ್ಟಿನಲ್ಲಿ ನ್ಯಾಯ ಒದಗಿಸುವಂತೆ ನಾವು ಬೇಡಿಕೊಳ್ಳುತ್ತೇವೆ ಎಂದು ಅವರು ಮನವಿ ಮಾಡಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ರಾಜ್ಯ ಶಿಕ್ಷಣ ಸಚಿವ ರಕ್ಕಂ ಎ ಸಂಗ್ಮಾ ಅವರು ಜಿಲ್ಲಾಧಿಕಾರಿ ಮತ್ತು ಶಿಕ್ಷಣ ಇಲಾಖೆಯಿಂದ ವರದಿ ಕೇಳಿದ್ದಾರೆ.
ಘಟನೆಯನ್ನು “ದುರದೃಷ್ಟಕರ” ಎಂದು ಕರೆದ ಶಿಕ್ಷಣ ಸಚಿವರು, ಜಿಲ್ಲಾಧಿಕಾರಿಗಳಿಂದ ವರದಿ ಪಡೆದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ.
ಆವಿಷ್ಕಾರ ಮತ್ತು ಸಂಶೋಧನೆಯನ್ನು ಉತ್ತೇಜಿಸುವ ದೃಷ್ಟಿಯಿಂದ ರಾಷ್ಟ್ರೀಯ ಶಿಕ್ಷಣ ನೀತಿಯು ಎಲ್ಲಾ ಭಾರತೀಯ ಭಾಷೆಗಳನ್ನು ರಾಷ್ಟ್ರೀಯ ಭಾಷೆಗಳಲ್ಲಿ ಗುರುತಿಸಲಾಗಿದೆ ಎಂದು ಉಲ್ಲೇಖಿಸಲಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿ(NEP) 2020ರಲ್ಲಿ ವಿಮರ್ಶಾತ್ಮಕ ಚಿಂತನೆ ಮತ್ತು ನಾವೀನ್ಯತೆಯನ್ನು ಬೆಳೆಸುವಲ್ಲಿ ಮಾತೃಭಾಷೆಯ ಸಕಾರಾತ್ಮಕ ಪರಿಣಾಮವನ್ನು ಗುರುತಿಸಲಾಗಿದೆ. ಖಾಸಿ, ಗಾರೋ ಮತ್ತು ಜೈನ್ತಿಯಾ ಮೇಘಾಲಯದಲ್ಲಿ ಮಾತನಾಡುವ ಮತ್ತು ಸಂವಹನ ಮಾಡುವ ಪ್ರಮುಖ ಭಾಷೆಗಳು.

ಪ್ರಮುಖ ಸುದ್ದಿ :-   ವೀಡಿಯೊ...| 'ತೃಣಮೂಲ ಕಾಂಗ್ರೆಸ್ಸಿಗಿಂತ ಬಿಜೆಪಿಗೆ ಮತ ಹಾಕುವುದು ಉತ್ತಮ' ಎಂದ ಕಾಂಗ್ರೆಸ್‌ ಹಿರಿಯ ನಾಯಕ...! ಟಿಎಂಸಿ ಕೆಂಡ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement