ಬೇಸಿಗೆ ಶಾಖದಿಂದ ಪಾರಾಗಲು ರಿಕ್ಷಾವನ್ನೇ ಮಿನಿ ಗಾರ್ಡನ್ ಆಗಿ ಪರಿವರ್ತಿಸಿದ ರಿಕ್ಷಾ ಚಾಲಕ…! ಇದು ಪ್ರೆಟ್ಟಿ ಕೂಲ್‌ ಎಂದ ಇಂಟರ್ನೆಟ್

ದಿನದಿಂದ ದಿನಕ್ಕೆ ಬಿಸಿಲಿನ ತಾಪ ವಿಪರೀತವಾಗುತ್ತಿದೆ. ಅಸಹನೀಯ ಶಾಖದ ಅಲೆಗಳಿಂದ ತಪ್ಪಿಸಿಕೊಳ್ಳಲು ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ರಿಕ್ಷಾ ಚಾಲಕನೊಬ್ಬರು ತನ್ನ ರಿಕ್ಷಾದಲ್ಲಿ ಮಿನಿ ಹಸಿರು ಗಾರ್ಡನ್ ನಿರ್ಮಿಸಿಕೊಂಡಿರುವ ಆಲೋಚನೆಗೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ.
ಈ ನವೀನ ಪರಿಹಾರವು ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮದ ಮಾಜಿ ಕಾರ್ಯನಿರ್ವಾಹಕ ನಿರ್ದೇಶಕ ಎರಿಕ್ ಸೋಲ್ಹೀಮ್ ಅವರ ಗಮನ ಸೆಳೆಯಿತು, ಅವರು ಚಿತ್ರವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.
ಚಿತ್ರವು ರಿಕ್ಷಾದ ಮೇಲ್ಛಾವಣೆಯಲ್ಲಿ ಹುಲ್ಲಿನ ಸೊಂಪಾದ ಹಸಿರು ಪದರ ನಿರ್ಮಾಣ ಮಾಡಿದ್ದನ್ನು ತೋರಿಸುತ್ತದೆ. ತಮ್ಮ ರಿಕ್ಷಾದ ಮೂಲೆಗಳಲ್ಲಿ ಸಣ್ಣ ಕುಂಡದಲ್ಲಿ ಸಸ್ಯಗಳನ್ನು ಇರಿಸಿದ್ದಾರೆ. ಅದಕ್ಕೆ ಸುಂದರವಾದ ಟಚ್‌ ನೀಡಿದ್ದಾರೆ.

“ಈ ಭಾರತೀಯ ವ್ಯಕ್ತಿ ತನ್ನ ರಿಕ್ಷಾದಲ್ಲಿ ಬಿಸಿಲಲ್ಲಿಯೂ ತಂಪಾಗಿರಲು ಹುಲ್ಲು ಬೆಳೆಸಿದ. ನಿಜವಾಗಿಯೂ ತಂಪಾಗಿದೆ! ”ಎಂದು ಎರಿಕ್ ಸೋಲ್ಹೈಮ್ ಚಿತ್ರದ ಜೊತೆಗೆ ಬರೆದಿದ್ದಾರೆ.ರಿಕ್ಷಾ ಚಾಲಕನ ಸೃಜನಶೀಲತೆಗೆ ನೆಟಿಜನ್‌ಗಳು ಪ್ರಭಾವಿತರಾಗಿದ್ದಾರೆ.
ಭಾರತದಲ್ಲಿ ಹಲವೆಡೆ ತಾಪಮಾನವು ಈಗಾಗಲೇ 42 ಡಿಗ್ರಿಗಿಂತ ಹೆಚ್ಚಿದೆ.

ಪ್ರಮುಖ ಸುದ್ದಿ :-   ನಾಳೆ ಫಿಲಿಪ್ಪೀನ್ಸ್‌ಗೆ ʼಬ್ರಹ್ಮೋಸ್ ಕ್ಷಿಪಣಿʼಗಳ ಮೊದಲ ಸೆಟ್ ನೀಡಲಿದೆ ಭಾರತ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement