ಮುಂಡಗೋಡ: ಕಾತೂರು ಬಳಿ ಉರುಳಿಗೆ ಸಿಲುಕಿ ಒದ್ದಾಡುತ್ತಿದ್ದ ದೈತ್ಯ ಕರಡಿ-ಭಾರೀ ಪ್ರಯತ್ನ ನಡೆಸಿ ರಕ್ಷಿಸಿದ ಅರಣ್ಯ ಸಿಬ್ಬಂದಿ..! ವೀಡಿಯೊ ವೀಕ್ಷಿಸಿ

ಮುಂಡಗೋಡ: ಉತ್ತರ ಕನ್ನಡ ಜಿಲ್ಲೆಯ ಮುಂಗೋಡ ತಾಲೂಕಿನ ತಾಲೂಕಿನ ಕಾತೂರ ವಲಯದ, ಪಾಳಾ ಶಾಖೆಯ ಒರಲಗಿ ಕಾಡಿನಲ್ಲಿ ಉರುಳಿಗೆ ಸಿಕ್ಕು ಒದ್ದಾಡುತ್ತಿದ್ದ ಕರಡಿಯನ್ನು ಅರಣ್ಯ ಸಿಬ್ಬಂದಿ ಜೀವದ ಹಂಗು ತೊರೆದು ರಕ್ಷಿಸಿದ್ದಾರೆ.

ಬೆಟ್ಟದಲ್ಲಿ ಯಾರೋ ಹಾಕಿದ್ದ ಉರುಳಿಗೆ ಸಿಲುಕಿದ್ದ ದೈತ್ಯ ಕರಡಿ ಪ್ರಾಣ ರಕ್ಷಿಸಿಕೊಳ್ಳಲು ಒದ್ದಾಡುತ್ತಿದ್ದು, ಹಾಗೂ ಕೂಗಿಕೊಳ್ಳುತ್ತಿತ್ತು. ಕರಡಿ ಉರುಳಿಗೆ ಸಿಕ್ಕಿಬಿದ್ದಿದ್ದನ್ನು ಒರಲಗಿ ಅರಣ್ಯದಲ್ಲಿ ಗಸ್ತಿನಲ್ಲಿದ್ದ ಅರಣ್ಯ ಸಿಬ್ಬಂದಿ ನೋಡಿದ್ದಾರೆ. ತಕ್ಷಣವೇ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ‌. ಹೀಗಾಗಿ ಪಶುವೈದ್ಯ ಜಯಚಂದ್ರ ಹಾಗೂ ಅರಣ್ಯ ರಕ್ಷಕ ಶ್ರೀಧರ ಭಜಂತ್ರಿ ಅವರನ್ನು ಆಗಮಿಸಿದರು. ನಂತರ ಕರಡಿಗೆ ಅರವಳಿಕೆ ಮದ್ದು ನೀಡಿ ಕರಡಿಯನ್ನು ಬಚಾವ್ ಮಾಡಲಾಯಿತು.

ಅಂದಹಾಗೆ, ಕರಡಿಗೆ ಎಚ್ಚರವಾಗುವ ಮುನ್ನವೇ ರಕ್ಷಿಸುವ ಕೆಲಸ ಮಾಡಿ ಸುರಕ್ಷಿತವಾಗಿ ಅರಣ್ಯಕ್ಕೆ ತೆರಳುವಂತೆ ವ್ಯವಸ್ಥೆ ಮಾಡಿದ್ದಾರೆ. ಈ ವೇಳೆ ಮುಂಡಗೋಡ ಎಸಿಎಫ್ ವಾಲಿ ಮಾರ್ಗದರ್ಶನದಂತೆ, ಅರಣ್ಯ ಅಧಿಕಾರಿಗಳಾದ ಶಿವಪ್ಪ ಹಾಗೂ ಪಾಳ ಶಾಖೆಯ ಉಪವಲಯ ಅರಣ್ಯಾಧಿಕಾರಿ ಚಂದ್ರಕಾಂತ M, ಅರಣ್ಯ ರಕ್ಷಕ ಮಂಜುನಾಥ್ ಡಿ, ವಾಹನ ಚಾಲಕ ಕೃಷ್ಣ ಹಾಗೂ ಪಾಳ ಶಾಖೆಯ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ತೊಡಗಿದ್ರು.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement