ಬಾಲಿವುಡ್‌ ನಟಿ ಸೋನಂ ಕಪೂರ್ ದೆಹಲಿ ನಿವಾಸದಲ್ಲಿ 2.4 ಕೋಟಿ ರೂ.ಗಳ ಮೌಲ್ಯದ ವಸ್ತುಗಳು ಕಳ್ಳತನ

ಬಾಲಿವುಡ್‌ ನಟಿ ಸೋನಂ ಕಪೂರ್ ಮತ್ತು ಅವರ ಪತಿ ಆನಂದ್ ಅಹುಜಾ ಅವರ ದೆಹಲಿ ಮನೆಯಲ್ಲಿ ಫೆಬ್ರವರಿಯಲ್ಲಿ ಕಳ್ಳತನ ನಡೆದಿದ್ದು, 2.4 ಕೋಟಿ ರೂಪಾಯಿ ಮೌಲ್ಯದ ನಗದು, ಆಭರಣ ಮತ್ತು ಇತರ ಬೆಲೆಬಾಳುವ ವಸ್ತುಗಳನ್ನು ಕಳವು ಮಾಡಲಾಗಿದೆ ಎಂದು ಶನಿವಾರ ಅಧಿಕೃತವಾಗಿ ತಿಳಿದುಬಂದಿದೆ.

ಘಟನೆಯನ್ನು ದೃಢಪಡಿಸಿದ ಪೊಲೀಸ್ ಉಪ ಆಯುಕ್ತ (ನವದೆಹಲಿ ಜಿಲ್ಲೆ) ಅಮೃತಾ ಗುಗುಲೋತ್, ಎರಡು ತಿಂಗಳ ಹಿಂದೆ ಫೆಬ್ರವರಿ 23 ರಂದು ಸೋನಂ ಕಪೂರ್ ಅವರ ಮಾವ ಹರೀಶ್ ಅಹುಜಾ ಅವರ ದೆಹಲಿಯ ಮಾರ್ಗ ಅಮೃತಾ ಶೆರ್ಗಿಲ್‌ನಲ್ಲಿರುವ ಮನೆಯಲ್ಲಿ ಕಳ್ಳತನದ ಬಗ್ಗೆ ದೂರು ದಾಖಲಾಗಿತ್ತು. .

ಫೆಬ್ರವರಿ 11 ರಂದು ದರೋಡೆ ನಡೆದಿರುವುದನ್ನು ದೂರುದಾರರು ಗಮನಿಸಿದ್ದರು, ಆದರೆ 12 ದಿನಗಳ ನಂತರ ಫೆಬ್ರವರಿ 23 ರಂದು ಘಟನೆಯನ್ನು ವರದಿ ಮಾಡಿದ ನಂತರ ದೆಹಲಿ ಪೊಲೀಸರು ಸೆಕ್ಷನ್ 381ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ ಎಂದು ಡಿಸಿಪಿ ಗುಗುಲೋತ್ ಹೇಳಿದರು.
ಘಟನೆಯ ತನಿಖೆಗಾಗಿ ಪೊಲೀಸ್ ತಂಡಗಳನ್ನು ರಚಿಸಲಾಗಿದೆ ಮತ್ತು ಅವರು ಪ್ರಸ್ತುತ ಸಾಕ್ಷ್ಯಗಳನ್ನು ಪರಿಶೀಲಿಸುತ್ತಿದ್ದಾರೆ ಎಂದು ಹಿರಿಯ ಅಧಿಕಾರಿ ತಿಳಿಸಿದ್ದಾರೆ. “ತನಿಖೆ ಇನ್ನೂ ನಡೆಯುತ್ತಿದೆ” ಎಂದು ಹೇಳಿದ್ದಾರೆ.
ಬಾಲಿವುಡ್ ದಿವಾ ಸೋನಂ ಮತ್ತು ಉದ್ಯಮಿ ಆನಂದ್ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

ಓದಿರಿ :-   ಎನ್‌ಐಎ ಅಧಿಕಾರಿ-ಪತ್ನಿ ಹತ್ಯೆ ಪ್ರಕರಣ: ಇಬ್ಬರು ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸಿದ ಕೋರ್ಟ್‌

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

/ 5. ಒಟ್ಟು ವೋಟುಗಳು

advertisement

ನಿಮ್ಮ ಕಾಮೆಂಟ್ ಬರೆಯಿರಿ