ನವದೆಹಲಿ: ಪಾಕಿಸ್ತಾನದಲ್ಲಿ ಅಂತಾರಾಷ್ಟ್ರೀಯ ಭಯೋತ್ಪಾದಕ ಹಫೀಜ್ ಸಯೀದ್ಗೆ 31 ವರ್ಷ ಜೈಲು ಶಿಕ್ಷೆ ಘೋಷಣೆಯಾದ ಬೆನ್ನಲ್ಲೇ ಭಾರತದಿಂದ ಮತ್ತೊಂದು ಮಹತ್ವದ ಘೋಷಣೆ ಹೊರಬಿದ್ದಿದೆ. ಈಗ ಭಾರತದ ಗೃಹ ಸಚಿವಾಲಯವು ಹಫೀಜ್ ಸಯೀದ್ ಮಗ ಭಯೋತ್ಪಾದಕ ಎಂದು ಮಹತ್ವದ ಆದೇಶ ಪ್ರಕಟಿಸಿದೆ.
advertisement
9535127775 / 9901837775 / 6364528715 / 08362775155 / https://icsmpucollege.com/
ಮುಂಬೈನಲ್ಲಿ 2008ರ ನವೆಂಬರ್ 26ರಂದು ನಡೆದು ಉಗ್ರದಾಳಿಯ ಮಾಸ್ಟರ್ ಮೈಂಡ್, ಲಷ್ಕರ್ ಈ ತೈಬಾ ಉಗ್ರ ಸಂಘಟನೆಯ ಸಂಸ್ಥಾಪಕ ಹಫೀಜ್ ಸಯೀದ್ಗೆ ಪಾಕಿಸ್ತಾನದ ಭಯೋತ್ಪಾದನಾ ವಿರೋಧಿ ನ್ಯಾಯಾಲಯ ಶುಕ್ರವಾರ ವಿವಿಧ ಅಪರಾಧಗಳಿಗಾಗಿ 31 ವರ್ಷಗಳ ಜೈಲುಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು.
ಮಾರನೇ ದಿನ ಅಂದರೆ ಇಂದು, ಶನಿವಾರ ಭಾರತದ ಕೇಂದ್ರ ಗೃಹ ಸಚಿವಾಲಯವು ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ 1967ರ ಅನ್ವಯ ಹಫೀಜ್ ಸಯೀದ್ ಪುತ್ರ ಹಫೀಜ್ ತಲ್ಹಾನನ್ನು ಘೋಷಿತ ಉಗ್ರ ಎಂದು ಪ್ರಕಟಿಸಿದೆ.
ಹಫೀಜ್ ತಲ್ಹಾ ಉಗ್ರ ಸಂಘಟನೆ ಲಷ್ಕರ್ ಈ ತೈಬಾದ ಉನ್ನತ ನಾಯಕನಾಗಿದ್ದು, ಈತ ಭಾರತದಲ್ಲಿ ಉಗ್ರ ದಾಳಿಯನ್ನು ನಿರ್ವಹಿಸುವ, ಯೋಜನೆ ರೂಪಿಸುವ, ಅದಕ್ಕಾಗಿ ನೇಮಕಾತಿ ಹಾಗೂ ಹಣ ಸಂಗ್ರಹದಂತಹ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾನೆ ಎಂದು ಕಾರಣಕ್ಕೆ ಆತನನ್ನು ಭಯೋತ್ಪಾದಕ ಎಂದು ಅಧಿಕೃತವಾಗಿ ಘೋಷಣೆ ಮಾಡಿದೆ.
ನಿಮ್ಮ ಕಾಮೆಂಟ್ ಬರೆಯಿರಿ