ಆಸ್ಕರ್ ಪ್ರಶಸ್ತಿ ಸಮಾರಂಭಕ್ಕೆ ಹಾಜರಾಗದಂತೆ ಹಾಲಿವುಡ್‌ ನಟ ವಿಲ್ ಸ್ಮಿತ್‌ಗೆ 10 ವರ್ಷ ನಿಷೇಧ

ಲಾಸ್ ಏಂಜಲೀಸ್ : ಅಕಾಡೆಮಿ ಅವಾರ್ಡ್ಸ್‌ನಲ್ಲಿ ಕ್ರಿಸ್ ರಾಕ್‌ಗೆ ಕಪಾಳಮೋಕ್ಷ ಮಾಡಿದ ನಂತರ 10 ವರ್ಷಗಳ ಕಾಲ ಆಸ್ಕರ್ ಅಥವಾ ಇತರ ಯಾವುದೇ ಅಕಾಡೆಮಿ ಕಾರ್ಯಕ್ರಮಕ್ಕೆ ಹಾಜರಾಗದಂತೆ ವಿಲ್ ಸ್ಮಿತ್ ಅವರ ಮೇಲೆ ಮೋಷನ್ ಪಿಕ್ಚರ್ ಅಕಾಡೆಮಿ ಶುಕ್ರವಾರ ನಿಷೇಧಿಸಿದೆ.
ಸ್ಮಿತ್ ಅವರ ಕ್ರಮಗಳಿಗೆ ಪ್ರತಿಕ್ರಿಯೆಯನ್ನು ಚರ್ಚಿಸಲು ಅಕಾಡೆಮಿಯ ಆಡಳಿತ ಮಂಡಳಿಯ ಸಭೆಯ ನಂತರ ಈ ಕ್ರಮವು ಬಂದಿದೆ.

ಅಲ್ಲದೆ ಅಕಾಡೆಮಿ ಆಫ್ ಮೋಷನ್ ಪಿಕ್ಚರ್ಸ್ ಆರ್ಟ್ಸ್ ಮತ್ತು ಸೈನ್ಸಸ್​ ಆಡಳಿತ ಮಂಡಳಿ ಆಯೋಜಿಸುವ ಯಾವುದೇ ಸಭೆ- ಸಮಾರಂಭಗಳಲ್ಲಿ ಕೂಡಾ ಸ್ಮಿತ್ ಭಾಗವಹಿಸುವಂತಿಲ್ಲ ಎಂದು ನಿಷೇಧ ಹೇರಲಾಗಿದೆ.
94ನೇ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ತಮ್ಮ ಪತ್ನಿಯ ಬೋಳುತಲೆ ಕುರಿತು ಹಾಸ್ಯ ಮಾಡಿದ್ದ, ಕಾರ್ಯಕ್ರಮದ ನಿರೂಪಕ ಹಾಗೂ ಹಾಸ್ಯನಟ ಕ್ರಿಸ್ ರಾಕ್​ಗೆ ನಟ ವಿಲ್​ಸ್ಮಿತ್ ಕಪಾಳಮೋಕ್ಷ ಮಾಡಿದ್ದರು.
2022ರಿಂದ ಏಪ್ರಿಲ್ 8 ರಿಂದ ಅನ್ವಯವಾಗುವಂತೆ 10 ವರ್ಷಗಳ ಅವಧಿಗೆ ವಿಲ್​ಸ್ಮಿತ್ ಅವರನ್ನು ಅಕಾಡೆಮಿ ನಿಷೇಧ ಮಾಡಿದೆ. ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭಗಳನ್ನು ಒಳಗೊಂಡಂತೆ ಯಾವುದೇ ಅಕಾಡೆಮಿ ಕಾರ್ಯಕ್ರಮಗಳಿಗೆ ಹಾಜರಾಗಲು ಸ್ಮಿತ್‌ಗೆ ಅನುಮತಿ ನೀಡಲಾಗುವುದಿಲ್ಲ” ಎಂದು ಅಕಾಡೆಮಿ ಅಧ್ಯಕ್ಷ ಡೇವಿಡ್ ರೂಬಿನ್ ಮತ್ತು ಸಿಇಒ ಡಾನ್ ಹಡ್ಸನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ವಿಲ್ ಸ್ಮಿತ್ ಅವರ ರಾಜೀನಾಮೆಯನ್ನು ಅಂಗೀಕರಿಸುವುದರ ಜೊತೆಗೆ, ಆಸ್ಕರ್‌ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ವಿಲ್ ಸ್ಮಿತ್ ನಡೆದುಕೊಂಡ ರೀತಿಗೆ ಯಾವ ರೀತಿ ಪ್ರತಿಕ್ರಿಯೆ ನೀಡಬೇಕು ಎಂದು ಚರ್ಚಿಸಲು ಆಡಳಿತ ಮಂಡಳಿಯು ಸಭೆ ಸೇರಿತ್ತು. ಲಾಸ್ ಏಂಜಲೀಸ್‌ನಲ್ಲಿ ಶುಕ್ರವಾರ ನಡೆದ ಆಡಳಿತ ಮಂಡಳಿಯ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement