ಕುಮಟಾ: ನಾಳೆ ಲಯನ್ಸ್ ರೇವಣಕರ್ ಕಣ್ಣಿನ ಆಸ್ಪತ್ರೆ ವಿಸ್ತೃತ ಕಟ್ಟಡ -ಆಧುನಿಕ ಸೌಲಭ್ಯಗಳ ಉದ್ಘಾಟನೆ, ಆರೋಗ್ಯ ಸಚಿವ ಡಾ.ಸುಧಾಕರ ಭಾಗಿ

ಕುಮಟಾ: ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಬಗ್ಗೋಣ ರಸ್ತೆ ವಿದ್ಯಾಗಿರಿಯಲ್ಲಿರುವ ಲಯನ್ಸ್ ರೇವಣಕರ ಚಾರಿಟೇಬಲ್ ಕಣ್ಣಿನ ಆಸ್ಪತ್ರೆ ವಿಸ್ತ್ರತ ಕಟ್ಟಡದ ಉದ್ಘಾಟನಾ ಸಮಾರಂಭ ಏಪ್ರಿಲ್‌ ೧೦ರಂದು ಸಂಜೆ ೪:೩೦ ಘಂಟೆಗೆ ನಡೆಯಲಿದ್ದು, ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ.ಸುಧಾಕರ ಹಾಗೂ ಲಯನ್ಸ್ ಅಂತರಾಷ್ಟ್ರೀಯದ ಮಾಜಿ ನಿರ್ದೇಶಕರಾದ ಕೆ. ವಂಶೀಧರ ಬಾಬು ಉದ್ಘಾಟಿಸಲಿದ್ದಾರೆ.

ದಾನಿಗಳಾದ ಡಾ.ಗೋಪಾಲ ರೇವಣಕರ ಹಾಗೂ ಪ್ರಮೀಳಾ ರೇವಣಕರ ದಂಪತಿ, ಅಮೆರಿಕ

ಕುಮಟಾದ ಲಯನ್ಸ್ ಹ್ಯುಮೆನಿಟೇರಿಯನ್ ಸರ್ವೀಸ್ ಟ್ರಸ್ಟ್ ಚೇರಮನ್ ದೇವಿದಾಸ ದತ್ತಾ ಶೇಟ್ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾದ ಸಮಾಜ ಕಲ್ಯಾಣ ಇಲಾಖೆ ಹಾಗೂ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಅವರು ಅಡ್ಮಿನಿಸ್ಟ್ರೇಟಿವ್ ಬ್ಲಾಕ್ ಉದ್ಘಾಟಿಸಲಿದ್ದಾರೆ. ಕಾರ್ಮಿಕ ಸಚಿವರಾದ ಶಿವರಾಮ ಹೆಬ್ಬಾರ ಅವರು ನೇತ್ರ ವೈದ್ಯರ ಕೊಠಡಿಗಳನ್ನು ಉದ್ಘಾಟಿಸಲಿದ್ದಾರೆ. ಮಾಜಿ ಸಚಿವರಾದ ಆರ್‌.ವಿ.ದೇಶಪಾಂಡೆಯವರು ಹೊರರೋಗಿಗಳ ವಿಭಾಗವನ್ನು ಉದ್ಘಾಟಿಸಲಿದ್ದಾರೆ. ಕುಮಟಾ-ಹೊನ್ನಾವರ ಕ್ಷೇತ್ರದ ಶಾಸಕರಾದ ದಿನಕರ ಕೆ. ಶೆಟ್ಟಿ ಸ್ಪೆಶಲ್ ರೂಮ್/ ವಾರ್ಡಗಳನ್ನು ಉದ್ಘಾಟಿಸಲಿದ್ದಾರೆ. ಮಾಜಿ ಶಾಸಕಿ ಶಾರದಾ ಮೋಹನ ಶೆಟ್ಟಿ ಲಿಫ್ಟ್’ ಯಂತ್ರದ ಉದ್ಘಾಟಿಸಲಿದ್ದಾರೆ. ಸೈಟ್‌ ಫರ್ಸ್ಟ್‌ ತಾಂತ್ರಿಕ ಸಲಹಾಗಾರರಾದ (Technical Advisor Sight First – LCIF)) ಡಾ. ದಿವ್ಯೇಶ ಶಾ ಅತಿಥಿಗಳಾಗಿ ಆಗಮಿಸಲಿದ್ದಾರೆ.

ದಾನಿಗಳಾದ ಡಾ.ನಾಗೇಶ ರೇವಣಕರ ಹಾಗೂ ನೀನಾ ರೇವಣಕರ ದಂಪತಿ ,ಅಮೆರಿಕ

ಇದೇವೇಳೆ ದಾನಿಗಳಿಗೆ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿದ್ದು, ಮುಂಬೈನ ಉದ್ಯಮಿ ದುರ್ಗೇಶ ಎಸ್. ಚಂದಾವರಕರ, ಮುಂಬೈನ ಮೋಹನ ಕವರಿ, ತೊರ್ಕೆ  ಕರ್ಣಾಟಕ ಬ್ಯಾಂಕ ಪ್ರಧಾನ ಕಚೇರಿ ಮಂಗಳೂರು, ದಿ. ಪ್ರಮಿಳಾ ಗೋಪಾಲ ರೇವಣಕರ ಇವರ ಸ್ಮರಣಾರ್ಥ ಡಾ. ಗೋಪಾಲ ಎಸ್. ರೇವಣಕರ ಅಮೆರಿಕ, ಲೀನಾ ನಾಗೇಶ ರೇವಣಕರ, ಅಮೆರಿಕ, ರಾಮಕೃಷ್ಣ ಸುಬ್ರಾಯ ರೇವಣಕರ, ಕಾಗಾಲ, ಕುಮಟಾದ ಚೈತ್ರದೀಪ ಎಂಟರ್‌ಪ್ರೆಸಸ್‌ನ ಮದನ ದೇವರಾಯ ನಾಯಕ, ಹೊನ್ನಾವರ ಕವಲಕ್ಕಿ ಗಾಣಗೇರಿಯ ಜನಾರ್ಧನ ಗಣಪತಿ ಶೆಟ್ಟಿ, ಚಿತ್ರಿಗಿಯ ಮಂಜುನಾಥ ಸುಬ್ರಾಯ ಭಟ್ಟ, ಅಗ್ರಗೋಣದ ಮೋಹನ ಮಾಣಿ ನಾಯಕ,ಅಳ್ವೆಕೋಡಿಯ ವಾಮನ ನೀಲಕಂಠ ಕಾಮತ ಅವರನ್ನು ಸನ್ಮಾನಿಸಲಾಗುತ್ತದೆ. ಅಲ್ಲದೆ ಆಶಾ ಕಾರ್ಯಕರ್ತೆಯರಿಗೆ ಗೌರವ ಸಮರ್ಪಣೆ ಮಾಡಲಾಗುತ್ತದೆ.

ಪ್ರಮುಖ ಸುದ್ದಿ :-   ಸುಳ್ಳು ಚುನಾವಣಾ ಅಫಿಡವಿಟ್‌ ಪ್ರಕರಣ : ಬಿಜೆಪಿ ಶಾಸಕ ಗರುಡಾಚಾರಗೆ ವಿಧಿಸಿದ್ದ ಜೈಲು ಶಿಕ್ಷೆ ರದ್ದುಮಾಡಿದ ಹೈಕೋರ್ಟ್

ಲಯನ್ಸ್ ರೇವಣಕರ ಚಾರಿಟೇಬಲ್ ಕಣ್ಣಿನ ಆಸ್ಪತ್ರೆ ನಡೆದುಬಂದ ದಾರಿ…

ಕುಮಟಾದಲ್ಲಿ ಲಯನ್ಸ್ ಕ್ಲಬ್ ೧೯೭೬ರಲ್ಲಿ ಸ್ಥಾಪನೆಯಾದಂದಿನಿಂದ ಇಂದಿನವರೆಗೂ ಬಡವ-ಬಲ್ಲಿದನೆಂಬ ಬೇಧ-ಭಾವವಿಲ್ಲದೆ ಕುಮಟಾ ಹಾಗೂ ಸುತ್ತಮುತ್ತಲಿನ ಅದು
ಸಲ್ಲಿಸುತ್ತಿರುವ ಸೇವೆ ಅನನ್ಯವಾದದ್ದು. ಲಯನ್ಸ್ ಅಂತಾರಾಷ್ಟ್ರೀಯ ಸಂಸ್ಥೆಯ ಪ್ರಮುಖ ಧ್ಯೇಯವಾದ ‘ದೃಷ್ಟಿ ಮೊದಲು’ (SIGHT FIRST Programme) ಈ ಚಟುವಟಿಕೆಯ ಅಡಿಯಲ್ಲಿ ಕಳೆದ ೪೫ ವರ್ಷಗಳಿಂದಲೂ ಉಚಿತ ನೇತ್ರ ತಪಾಸಣೆ ಮತ್ತು ಉಚಿತ ಶಸ್ತ್ರ ಚಿಕಿತ್ಸಾ ಶಿಬಿರಗಳನ್ನು ಯಶಸ್ವಿಯಾಗಿ ನಡೆಸುತ್ತ ಬರಲಾಗಿದೆ. ಕಳೆದ ಹಲವಾರು ವರ್ಷಗಳಿಂದ ಉತ್ತರ ಕನ್ನಡ ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆಯ ಸಹಾಯದಿಂದ ಉಚಿತ ನೇತ್ರ ಶಸ್ತ್ರ ಚಿಕಿತ್ಸಾ ಶಿಬಿರಗಳನ್ನು ನಡೆಸುತ್ತಿದೆ. ಲಯನ್ಸ್ ಕ್ಲಬ್‌ನದೇ ಆದ ಸುಸಜ್ಜಿತ ಕಣ್ಣಿನ ಆಸ್ಪತ್ರೆಯನ್ನು ಸ್ಥಾಪಿಸಲು ವಿಚಾರಿಸುತ್ತಿರುವಾಗ ಮೂಲತಃ ಕುಮಟಾ-ಕಾಗಾಲನವರಾದ ಹಾಲಿ ಅಮೆರಿಕ ನಿವಾಸಿಗಳಾದ ಡಾ. ಗೋಪಾಲ ಸುಬ್ರಾಯ ರೇವಣಕರ ಮತ್ತು ಡಾ. ನಾಗೇಶ ಸುಬ್ರಾಯ ರೇವಣಕರ ಮತ್ತು ಭಾರತೀಯ ನಿವಾಸಿಗಳಾದ ಶ್ರೀನಿವಾಸ ಸುಬ್ರಾಯ ರೇವಣಕರ ಮತ್ತು ರಾಮಕೃಷ್ಣ ಸುಬ್ರಾಯ ರೇವಣಕರ ಅವರು ೩೦,೦೦,೦೦೦ ರೂ. ಗಳನ್ನು ದೇಣಿಗೆ ನೀಡಿದರು.

ಲಯನ್ಸ್ ಹ್ಯುಮೆನಿಟೇರಿಯನ್ ಸರ್ವೀಸ್ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷರಾದ ಡಾ.ಸಿ.ಎಸ್‌.ವೆರ್ಣೇಕರ, ಕುಮಟಾ

ಲಯನ್ಸ್ ಹ್ಯುಮೆನಿಟೇರಿಯನ್ ಸರ್ವೀಸ್ ಟ್ರಸ್ಟ್ ಹೆಸರಿನಲ್ಲಿ ಟ್ರಸ್ಟ್ ರಚಿಸಿಕೊಂಡು ೨೦೦೪ರಲ್ಲಿ ಕರ್ನಾಟಕ ಸರ್ಕಾರದಿಂದ ಭೂಮಿ ಪಡೆದು ಕಣ್ಣಿನ ಸರ್ವವಿಧ ಶುಶ್ರೂಷೆಗಾಗಿ ಲಯನ್ಸ್ ರೇವಣಕರ ಚಾರಿಟೇಬಲ್ ಕಣ್ಣಿನ ಆಸ್ಪತ್ರೆ ಹೆಸರಿನಲ್ಲಿ ೨೦೦೬ ರಲ್ಲಿ ಕಟ್ಟಡ ನಿರ್ಮಿಸಲಾಯಿತು. ಖಾಸಗಿಯಾಗಿ ನೇತ್ರ ತಪಾಸಣೆಗೆ- ಶಸ್ತ್ರಚಿಕಿತ್ಸೆಗಳಿಗೆ ಬರುವ ರೋಗಿಗಳಿಗೆ ಗುಣಮಟ್ಟದ ಸೇವೆ ಸಲ್ಲಿಸುತ್ತಾ ಬರುವ ಜೊತೆಗೆ ಪ್ರತಿ ತಿಂಗಳು ಕನಿಷ್ಠ ೩ ಉಚಿತ ಕ್ಯಾಂಪ್‌ಗಳನ್ನು ಕುಮಟಾ, ಗೋಕರ್ಣ, ಅಂಕೋಲಾ, ಹೊನ್ನಾವರ ಮತ್ತು ಭಟ್ಕಳಗಳಲ್ಲಿ ನಡೆಸುತ್ತ ಉಚಿತ ಮೋತಿಬಿಂದು ಶಸ್ತ್ರ ಚಿಕಿತ್ಸೆಗಳನ್ನು ನಡೆಸಿಕೊಂಡು ಬರುತ್ತಿದೆ.

ಪ್ರಮುಖ ಸುದ್ದಿ :-   ನೇಹಾ ಹಿರೇಮಠ ಕೊಲೆ ಪ್ರಕರಣ: ಆರೋಪಿ ಫಯಾಜ್‌ ಆರು ದಿನ ಸಿಐಡಿ ಕಸ್ಟಡಿಗೆ

ಈವರೆಗೆ ಸುಮಾರು ೨.೫ ಲಕ್ಷ ರೋಗಿಗಳಿಗೆ ಕಣ್ಣಿನ ತಪಾಸಣೆ ಮಾಡಲಾಗಿದ್ದು, ಸುಮಾರು ೧೮ ಸಾವಿರ ಶಸ್ತ್ರ ಚಿಕಿತ್ಸೆಗಳನ್ನು ಯಶಸ್ವಿಯಾಗಿ ನಡೆಸಲಾಗಿದೆ ಎಂದು ತಿಳಿಸಲಾಗಿದೆ. ಅಲ್ಲದೆ, ಸುಮಾರು ೫೦೦ ಕ್ಯಾಂಪ್‌ಗಳನ್ನು ನಡೆಸಿ ೮ ಸಾವಿರ ಬಡ ರೋಗಿಗಳಿಗೆ ಉಚಿತ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ.

ಕುಮಟಾದ ಲಯನ್ಸ್ ಹ್ಯುಮೆನಿಟೇರಿಯನ್ ಸರ್ವೀಸ್ ಟ್ರಸ್ಟ್ ಈಗಿನ ಅಧ್ಯಕ್ಷರಾದ ದೇವಿದಾಸ ದತ್ತಾ ಶೇಟ್

ಈ ಸಮಾಜೋಪಕಾರಿ ಕಾರ್ಯವನ್ನು ಗಮನಿಸಿದ ಲಯನ್ಸ್ ಅಂತಾರಾಷ್ಟ್ರೀಯ ಸಂಸ್ಥೆಯು ೨೦೧೨-೧೩ರಲ್ಲಿ ಹಾಗೂ ೨೦೨೦-೨೧ರಲ್ಲಿ ಯಂತ್ರೋಪಕರಣಗಳ ಖರೀದಿಗೆ ಅನುದಾನ ನೀಡಿ ಪ್ರೋತ್ಸಾಹಿಸಿದೆ.
ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸೆಗಳಿಗೆ ಬರುವ ರೋಗಿಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಹಳೆಯ ಕಟ್ಟವರನ್ನು ಈಗ ಇನ್ನಷ್ಟು ವಿಸ್ತಾರ ಮಾಡಲಾಗಿದ್ದು, 815 ಚದರ ಮೀಟರುಗಳ ಕಟ್ಟಡ ನಿರ್ಮಿಸಿ ವಿಸ್ತ್ರತಗೊಳಿಸಿ ಸಾಕಷ್ಟು ಸ್ಥಳಾವಕಾಶ ಕಲ್ಪಿಸಲಾಗಿದೆ. ಅಲ್ಲದೆ, ಆಧುನಿಕ ಯಂತ್ರೋಪಕರಣಗಳನ್ನು ಅಳವಡಿಸಿ ರೋಗಿಗಳಿಗೆ ಹೆಚ್ಚಿನ ಸೌಲಭ್ಯ ಒದಗಿಸಲಾಗಿದೆ.
ಲಯನ್ಸ್ ಕ್ಲಬ್ ಹಾಗೂ ಅನುಭವಿ ಲಯನ್ ಟ್ರಸ್ಟಿಗಳ ಮಾರ್ಗದರ್ಶನ, ನುರಿತ ತಜ್ಞ ವೈದ್ಯರುಗಳು ಮತ್ತು ಅರ್ಹ ವಿದ್ಯಾರ್ಹತೆ ಹೊಂದಿರುವ ಸೇವಾ ಮನೋಭಾವವುಳ್ಳ ಶುಶ್ರೂಷಕಿಯರು ಹಾಗೂ ಸಿಬ್ಬಂದಿ ನಿಸ್ಪ್ರಹ ಸೇವೆಯಿಂದ ಸಂಸ್ಥೆಯು ದಿನದಿಂದ ದಿನಕ್ಕೆ ಅಭಿವೃದ್ಧಿ ಹೊಂದುತ್ತ ಬಂದಿದೆ. ಸಮಾಜಕ್ಕೆ ಇನ್ನೂ ಹೆಚ್ಚಿನ ಸೇವೆ ಸಲ್ಲಿಸುವ ದಿಶೆಯಲ್ಲಿ ಆಸ್ಪತ್ರೆಯು ಕಾರ್ಯತತ್ಪರವಾಗಿದೆ. ಈ ಸಂಸ್ಥಾಪಕ ಅಧ್ಯಕ್ಷರಾದ ಲಯನ್ ಡಾ. ಸಿ. ಎಸ್. ವೆರ್ಣೇಕರ ತಿಳಿಸಿದ್ದಾರೆ.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement