ಮಂಗಳೂರು:ಯಕ್ಷಗಾನದ ಖ್ಯಾತ ಭಾಗವತ ಬಲಿಪ ಪ್ರಸಾದ ನಿಧನ

posted in: ರಾಜ್ಯ | 0

ಮಂಗಳೂರು: ಕಟೀಲು ಮೇಳದ ಪ್ರಧಾನ ಭಾಗವತರಾಗಿದ್ದ ಬಲಿಪ ಪ್ರಸಾದ (46)ಅವರು ಅಲ್ಪ ಕಾಲದ ಅನಾರೋಗ್ಯದಿಂದಾಗಿ ಸೋಮವಾರ (ಏಪ್ರಿಲ್ 11) ಸೋಮವಾರ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಅನಾರೋಗ್ಯದ ಕಾರಣದಿಂದಾಗಿ ಈ ಬಾರಿಯ ಮೇಳದ ತಿರುಗಾಟದಿಂದ ಬಲಿಪ ಪ್ರಸಾದ ಅವರು ದೂರ ಉಳಿದಿದ್ದರು. ಅವರು ತೆಂಕುತಿಟ್ಟು ಯಕ್ಷಗಾನದ ಬಲಿಪ ಪರಂಪರೆಯ ಬಲಿಪ ನಾರಾಯಣ ಭಾಗವತರ ಪುತ್ರ. ಬಲಿಪ ನಾರಾಯಣ ಭಾಗವತರು ಖ್ಯಾತ ಭಾಗವತರಾಗಿದ್ದರು.

ಮೂಡುಬಿದಿರೆ ಮಾರೂರಿನ ನೂಯಿ ಎಂಬಲ್ಲಿ ಜನಿಸಿದ್ದ ಪ್ರಸಾದ ಬಲಿಪ ಅವರಿಗೆ ಯಕ್ಷಗಾನ ಭಾಗವತಿಕೆಯ ಗುರು ತಂದೆ ಬಲಿಪ ನಾರಾಯಣ ಭಾಗವತರೇ ಆಗಿದ್ದರು.. ತಂದೆಯಂತೆಯೇ ಇವರು ಕೂಡ ಯಕ್ಷಗಾನ ರಂಗದಲ್ಲಿ ಸಾಕಷ್ಟು ಹೆಸರು ಮಾಡಿದ್ದರು. 17ರ ಹರೆಯದಲ್ಲೇ ಕಟೀಲು ಮೇಳದಲ್ಲಿ ಭಾಗವತಿಕೆ ಆರಂಭಿಸಿ ಪ್ರಧಾನ ಭಾಗವತರಾಗಿ ಬೆಳೆದಿದ್ದರು. ತನ್ನದೇ ಶೈಲಿಯಿಂದಾಗಿ ಯಕ್ಷ ಪ್ರೇಮಿಗಳಾ ಮನ ಗೆದ್ದಿದ್ದರು. ಕಲೆಯನ್ನು ಮೈಗೂಡಿಸಿಕೊಂಡು ಕಟೀಲು ಎರಡನೆಯ ಮೇಳದ ಪ್ರಧಾನ ಭಾಗವತರಾಗಿದ್ದರು. ತಂದೆಯ ಬಳಿಕ ಬಲಿಪ ಶೈಲಿಯ ಭಾಗವತಿಕೆ ಮೂಲಕ ಪ್ರಸಾದ ಅವರು ಜೀವ ತುಂಬಿದ್ದರು. ವಿಶೇಷವಾಗಿ ಏರು ಪದ್ಯಗಳನ್ನು ಹೇಳುವುದರಲ್ಲಿ ಸಿದ್ಧಹಸ್ತರಾಗಿದ್ದರು. ಬಲಿಪ ಪ್ರಸಾದ ಅವರ ನಿಧನಕ್ಕೆ ಅನೇಕ ಗಣ್ಯರು ಯಾಗೂ ಯಕ್ಷಗಾನ ಪ್ರೇಮಿಗಳು ಸಂತಾಪ ಸೂಚಿಸಿದ್ದಾರೆ.

ಓದಿರಿ :-   ಮುಂದಿನ 15 ದಿನಗಳ ಕಾಲ ಅಧಿಕಾರಿಗಳು ರಜೆ ತೆಗೆದುಕೊಳ್ಳುವಂತಿಲ್ಲ:ಸಿಎಂ ಬೊಮ್ಮಾಯಿ ಸೂಚನೆ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 2

advertisement

ನಿಮ್ಮ ಕಾಮೆಂಟ್ ಬರೆಯಿರಿ