ಒಮಿಕ್ರಾನ್ ನಂತರ ಈಗ XE, ME ರೂಪಾಂತರಿ ಭೀತಿ: ಮಾಸ್ಕ್‌ ಕಡ್ಡಾಯ, ಶೀಘ್ರ ಹೊಸ ಮಾರ್ಗಸೂಚಿ ಪ್ರಕಟ ಎಂದ ಡಾ.ಸುಧಾಕರ

ಬೆಂಗಳೂರು: ರಾಜ್ಯತೆ ಜನತೆ ಮಾಸ್ಕ್‌ ಕಡ್ಡಾಯವಾಗಿ ಧರಿಸಬೇಕು. ಈ ಮೂಲಕ ನಾಲ್ಕನೇ ಅಲೆಯನ್ನ ತಡೆಯಲು ಸರ್ಕಾರದ ಜೊತೆ ಕೈ ಜೋಡಿಸಬೇಕು. ಶೀಘ್ರವೇ ರಾಜ್ಯ ಸರ್ಕಾರ ಹೊಸ ಮಾರ್ಗಸೂಚಿ ಹೊರಡಿಸಲಿದೆ ಎಂದು ಹೇಳಿದ್ದಾರೆ.

ಸೋಮವಾರ ಆರೋಗ್ಯಸೌಧದಲ್ಲಿ ತಾಂತ್ರಿಕ ಸಲಹಾ ಸಮಿತಿ ನೇತೃತ್ವದಲ್ಲಿ ಆರೋಗ್ಯ ಸಚಿವ ಸುಧಾಕರ್ ತುರ್ತು ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನ ಎಂದಿನಂತೆ ಮಾಸ್ಕ್‌ ಧರಿಸಬೇಕು. ನಾಲ್ಕನೇ ಅಲೆಯನ್ನ ತಡೆಯಲು ಜನರು ಕೈ ಜೋಡಿಸಬೇಕು. ಬೂಸ್ಟರ್‌ ಹಾಕಿಸಿಕೊಳ್ಳಲು ನಿರ್ಲಕ್ಷ್ಯ ಮಾಡಬೇಡಿ. ಬಾಕಿ ಇರುವವರು 1, 2 ಮತ್ತು 3ನೇ ಡೋಸ್‌ ಹಾಕಿಸಿಕೊಳ್ಳಿ ಎಂದು ಮನವಿ ಮಾಡಿದ್ದಾರೆ.
8 ದೇಶಗಳಲ್ಲಿ ನಾಲ್ಕನೇ ಅಲೆ ಹೆಚ್ಚಾಗಿದೆ. XE ಹಾಗೂ ME ಎಂಬ ಹೊಸ ಪ್ರಬೇಧ ಹೆಚ್ಚಾಗಿದೆ. ನಮ್ಮ ದೇಶದಲ್ಲಿ ಹರಿಯಾಣ, ದೆಹಲಿಯಲ್ಲಿ ಕಳೆದ ಮೂರು ದಿನಗಳಲ್ಲಿ ಸೋಂಕು ಹೆಚ್ಚಾಗಿದೆ. ಹೀಗಾಗಿ, ತುರ್ತು ಸಭೆ ಮಾಡಿ ಸಮಾಲೋಚನೆ ಮಾಡಲಾಗಿದೆ. ತಾಂತ್ರಿಕ ಸಲಹಾ ಸಮಿತಿ ನೀಡಿರುವ ಸಲಹೆಯಂತೆ ಸೋಂಕು ಹೆಚ್ಚಿರುವ ದೇಶಗಳಿಂದ ಬರುವವರ ಮೇಲೆ ನಿಗಾ ವಹಿಸಲು ಅಭಿಪ್ರಾಯ ವ್ಯಕ್ತವಾಗಿದೆ ಎಂದರು.

ಪ್ರಮುಖ ಸುದ್ದಿ :-   ಎಸ್ ಎಸ್ ಎಲ್ ಸಿ ಪರೀಕ್ಷೆ ವಿದ್ಯಾರ್ಥಿಗಳ ಮಾರಾಮಾರಿ : ಚಾಕು ಇರಿತ

ದೇಶದಲ್ಲಿ XE ರೂಪಾಂತರ ಪತ್ತೆಯಾಗಿದ್ದು, ಹೀಗಾಗಿ ಮುನ್ನೆಚ್ಚರಿಕೆ ಆಗತ್ಯ. ಶೀಘ್ರವೇ ರಾಜ್ಯ ಸರ್ಕಾರ ಹೊಸ ಮಾರ್ಗಸೂಚಿ ಹೊರಡಿಸಲಿದೆ ಎಂದು ಹೇಳಿದರು.
ಏರ್ಪೋರ್ಟ್​ಗೆ ಬಂದ ಬಳಿಕ ಅವರಿಗೆ ಟೆಸ್ಟ್ ಮಾಡಿ, ಮನೆಗೆ ಹೋದ ಬಳಿಕ ಟೆಲಿ ಮಾನಿಟರಿಂಗ್ ಮಾಡಲು ತೀರ್ಮಾನ ಮಾಡಲಾಗಿದೆ. ಐಐಟಿ (IIT) ಕಾನ್ಪುರ್ ವರದಿ ‌ಪ್ರಕಾರ ಜೂನ್-ಜುಲೈನಲ್ಲಿ ನಾಲ್ಕನೇ ಅಲೆ ಬರುವ ಸಂಭವವಿದೆ. ಈಗ ಜನ ಮಾಸ್ಕ್ ಹಾಕುವುದನ್ನೇ ಮರೆತಿದ್ದಾರೆ. ಮಾಸ್ಕ್ ಬಳಕೆ ಮುಂದುವರಿಸಬೇಕು. ಬೂಸ್ಟರ್ ಡೋಸ್ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement