ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ ವಂಚನೆ ಪ್ರಕರಣ: ನೀರವ್ ಮೋದಿಯ ಆಪ್ತನನ್ನು ಈಜಿಪ್ಟಿನಲ್ಲಿ ಬಂಧಿಸಿ ಮುಂಬೈಗೆ ಕರೆತಂದ ಸಿಬಿಐ

ನವದೆಹಲಿ: ಪರಾರಿಯಾಗಿರುವ ವಜ್ರದ ವ್ಯಾಪಾರಿ ನೀರವ್ ಮೋದಿಯ ಆಪ್ತ ಸಹಾಯಕ ಸುಭಾಷ್ ಶಂಕರ ಅವರನ್ನು ಕೈರೋದಲ್ಲಿ ಬಂಧಿಸಿದ ನಂತರ ಕೇಂದ್ರೀಯ ತನಿಖಾ ದಳ (ಸಿಬಿಐ) ಮುಂಬೈಗೆ ಕರೆತಂದಿದೆ. ಪ್ರಮುಖ ಕಾರ್ಯಾಚರಣೆಯಲ್ಲಿ ಸಿಬಿಐ ಶಂಕರ ಅವರನ್ನು ಬಂಧಿಸಿದೆ.
2018ರಲ್ಲಿ ಪ್ರಕರಣ ದಾಖಲಾದಾಗಿನಿಂದ ಶಂಕರ ಪರಾರಿಯಾಗಿ ಕೈರೋದಲ್ಲಿ ತಲೆಮರೆಸಿಕೊಂಡಿದ್ದ. ಪಿಎನ್‌ಬಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶೀಘ್ರದಲ್ಲೇ ಅವರನ್ನು ಮುಂಬೈ ಸಿಬಿಐ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ. ಕೇಂದ್ರೀಯ ಸಂಸ್ಥೆ ಅವರ ಕಸ್ಟಡಿಯನ್ನು ಸಹ ಕೇಳುತ್ತದೆ
ಎಂದು ಸಿಬಿಐ ಅಧಿಕಾರಿಯೊಬ್ಬರು ಸುದ್ದಿ ಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ,

ಆತ ತಲೆಮರೆಸಿಕೊಂಡಿರುವ ವಜ್ರ ವ್ಯಾಪಾರಿ ನೀರವ್ ಮೋದಿಯ ಆಪ್ತ ಸಹಾಯಕ. ನೀರವ್ ಮೋದಿಯವರ ಕಂಪನಿಯೊಂದರಲ್ಲಿ ಡೆಪ್ಯುಟಿ ಜನರಲ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ. ಆತನ ವಿಚಾರಣೆಯ ವೇಳೆ ಪ್ರಕರಣದ ಕುರಿತು ಹೆಚ್ಚಿನ ಮಾಹಿತಿ ಪಡೆಯಲಿದ್ದೇವೆ ಎಂದು ಸಿಬಿಐ ಹೇಳಿದೆ.

2018ರಲ್ಲಿ ಸಿಬಿಐ ಕೋರಿಕೆಯ ಮೇರೆಗೆ ನೀರವ್, ಆತನ ಸಹೋದರ ನಿಶಾಲ್ ಮೋದಿ ಮತ್ತು ಉದ್ಯೋಗಿ ಸುಭಾಷ್ ಶಂಕರ ವಿರುದ್ಧ ಇಂಟರ್‌ಪೋಲ್ ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡಿತ್ತು. ಸಿಬಿಐ ದಾಖಲಿಸಿರುವ ಬ್ಯಾಂಕ್ ವಂಚನೆ ಪ್ರಕರಣಗಳಲ್ಲಿ ಕಳೆದ ಐದು ವರ್ಷಗಳಲ್ಲಿ33 ಆರೋಪಿಗಳು ದೇಶ ಬಿಟ್ಟು ಪರಾರಿಯಾಗಿದ್ದಾರೆ ಎಂದು ಕಳೆದ ವರ್ಷ ಡಿಸೆಂಬರ್‌ನಲ್ಲಿ ಸಂಸತ್ತಿಗೆ ತಿಳಿಸಲಾಗಿತ್ತು.
ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB) ಹಗರಣ ಪ್ರಕರಣದಲ್ಲಿ ನೀರವ್ ಮೋದಿ ವಂಚನೆ ಮತ್ತು ಅಕ್ರಮ ಹಣ ವರ್ಗವಾಣೆ ಆರೋಪ ಹೊತ್ತಿದ್ದಾರೆ. ಮೋದಿ ಅವರು ಎರಡು ಕ್ರಿಮಿನಲ್ ಮೊಕದ್ದಮೆಗಳನ್ನು ಎದುರಿಸುತ್ತಿದ್ದಾರೆ – PNB ವಂಚನೆಗೆ ಸಂಬಂಧಿಸಿದ ಲೆಟರ್ ಆಫ್ ಅಂಡರ್‌ಟೇಕಿಂಗ್ (LOU ಗಳು) ಅಥವಾ ಸಾಲ ಒಪ್ಪಂದಗಳ ಮೂಲಕ ಸಿಬಿಐ ಪ್ರಕರಣ ಮತ್ತು ಈ ವಂಚನೆಯಿಂದ ಆದಾಯವನ್ನು ಲಾಂಡರಿಂಗ್ ಮಾಡಲು ಸಂಬಂಧಿಸಿದ ED ಪ್ರಕರಣ ಎದುರಿಸುತ್ತಿದ್ದಾರೆ.

ಪ್ರಮುಖ ಸುದ್ದಿ :-   ರೇವಣ್ಣ, ಪ್ರಜ್ವಲ್ ಎಸ್‌ಐಟಿ ವಿಚಾರಣೆಗೆ ಹಾಜರಾಗದಿದ್ದರೆ ಕಾನೂನು ಪ್ರಕಾರ ಬಂಧನ: ಗೃಹ ಸಚಿವ ಪರಮೇಶ್ವರ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement