ಗುತ್ತಿಗೆದಾರ ಸಂತೋಷ​ ಪಾಟೀಲ​ ಆತ್ಮಹತ್ಯೆ ಪ್ರಕರಣ: ಸಚಿವ ಈಶ್ವರಪ್ಪ, ಸಹಾಯಕರ ವಿರುದ್ಧ ಎಫ್​ಐಆರ್​ ದಾಖಲು

ಉಡುಪಿ: ಗುತ್ತಿಗೆದಾರ ಸಂತೋಷ ಪಾಟೀಲ ಆತ್ಮಹತ್ಯೆ ಪ್ರಕರಣದಲ್ಲಿ ಪಂಚಾಯತ್‌ ರಾಜ್‌ ಹಾಗೂ ಗ್ರಾಮೀಣಾಭಿವೃದ್ಧಿ ಖಾತೆ ಸಚಿವ ಕೆ.ಎಸ್. ಈಶ್ವರಪ್ಪ ಮತ್ತು ಅವರ ಸಹಾಯಕರಾದ ಬಸವರಾಜ್ ಮತ್ತು ರಮೇಶ್ ವಿರುದ್ಧ ಸಚಿವರ ವಿರುದ್ಧ ಎಫ್‌ಐಆರ್ ಕೂಡ ದಾಖಲಾಗಿದೆ. ದಾಖಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕಲಂ 306ರ ಅಡಿಯಲ್ಲಿ ಈಶ್ವರಪ್ಪ ಮತ್ತು ಅವರ ಆಪ್ತ ಸಹಾಯಕರಾದ ಬಸವರಾಜ, ರಮೇಶ ಮತ್ತಿತರರ ಮೇಲೆ ಪ್ರಕರಣ ದಾಖಲಾಗಿದೆ.

ಈಶ್ವರಪ್ಪ ಮತ್ತು ಅವರ ಸಹಚರರ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ. ತಡರಾತ್ರಿ 2.20ರ ಸುಮಾರಿಗೆ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪಾಟೀಲ ಸಹೋದರ ಪ್ರಶಾಂತ ನೀಡಿದ ದೂರಿನ ಮೇರೆಗೆ ಉಡುಪಿಯಲ್ಲಿ ಪ್ರಕರಣ ದಾಖಲಾಗಿದೆ.ಸಂತೋಷ ಪಾಟೀಲ ಸಹೋದರ ಪ್ರಶಾಂತ ಅವರು ಹೋಟೆಲ್ ಕೊಠಡಿಗೆ ಭೇಟಿ ನೀಡಿದ ಬಳಿಕ ದೂರು ನೀಡಿದ್ದಾರೆ.
ಸಹೋದರ ಸಂತೋಷ್​ ಪಾಟೀಲ್​ ಹಿಂಡಲಗಾ ಪಂಚಾಯತ್ ವ್ಯಾಪ್ತಿಯ ಲಕ್ಷ್ಮೀದೇವಿ ಜಾತ್ರೆ ಹಿನ್ನೆಲೆಯಲ್ಲಿ ಗ್ರಾಮದ ಅಭಿವೃದ್ಧಿ ಕೆಲಸ ಮಾಡಿದ್ದ. 4 ಕೋಟಿ ರೂಪಾಯಿ ವೆಚ್ಚದಲ್ಲಿ ರಸ್ತೆ ಚರಂಡಿ ಫೇವರ್ಸ್ ಜೋಡಣೆ ಕಾಮಗಾರಿ ಮಾಡಿಸಿದ್ದ. ಈ ಹಣವನ್ನು ಬಿಡುಗಡೆ ಮಾಡಲು ಸಚಿವ ಈಶ್ವರಪ್ಪ ಶೇ. 40 ಕಮಿಷನ್​ಗೆ ಬೇಡಿಕೆ ಇಟ್ಟಿದ್ದರು ಎಂದು ದೂರಿಲ್ಲಿ ಉಲ್ಲೇಖಿಸಿದ್ದಾರೆ.

ಪ್ರಮುಖ ಸುದ್ದಿ :-   ಸವದತ್ತಿ | ಸಿಡಿಲು ಬಡಿದು ಇಬ್ಬರು ಸಾವು

ಸಚಿವ ಕೆಎಸ್ ಈಶ್ವರಪ್ಪ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿದ್ದ ಗುತ್ತಿಗೆದಾರ ಸಂತೋಷ ಪಾಟೀಲ ಮಂಗಳವಾರ ಉಡುಪಿಯ ಲಾಡ್ಜ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಸಂತೋಷ್ ಪಾಟೀಲ ಸಹೋದರ ಪ್ರಶಾಂತ್ ಪಾಟೀಲ್, ಸಹೋದರನ ಸಾವಿಗೆ ಈಶ್ವರಪ್ಪ ಕಾರಣ ಎಂದು ಆರೋಪಿಸಿದ್ದಾರೆ.
ನನ್ನ ಸಹೋದರನ ಸಾವಿಗೆ ಈಶ್ವರಪ್ಪ ಅವರೇ ಕಾರಣ, ಅವರು ಲಂಚ ಅಥವಾ ಕಮಿಷನ್ ಕೇಳಿದರು, ನಂತರ ಅವರು ಮಾನನಷ್ಟ ಮೊಕದ್ದಮೆ ದಾಖಲಿಸಿದರು, ಪಾಟೀಲ ಅವರಿಗೆ ಬೆದರಿಕೆ ಕೂಡ ಬಂದಿತ್ತು ಎಂದು ಪ್ರಶಾಂತ್ ಪಾಟೀಲ ಹೇಳಿದ್ದಾರೆ.

ಸಾಯುವ ಮೊದಲು, ಸಂತೋಷ ಪಾಟೀಲ ಅವರು ತಮ್ಮ ಸ್ನೇಹಿತರಿಗೆ ವಾಟ್ಸಾಪ್ ಸಂದೇಶವನ್ನು ಕಳುಹಿಸಿದ್ದು, ತಾಔು ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶವನ್ನು ತಿಳಿಸಿದ್ದರು ಮತ್ತು ಈಶ್ವರಪ್ಪ ಅವರ ಇದಕ್ಕೆ ಕಾರಣ ಎಂದು ಹೇಳಿದ್ದರು. ಫೋರೆನ್ಸಿಕ್ ಮೂಲಕ ಆತ್ಮಹತ್ಯೆ ಪತ್ರದ ಸತ್ಯಾಸತ್ಯತೆಯನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.
ಪೊಲೀಸರ ಪ್ರಕಾರ, ಸಂತೋಷ ತನ್ನ ಸ್ನೇಹಿತರೊಂದಿಗೆ ವಿಹಾರಕ್ಕೆ ಹೋಗುವುದಾಗಿ ಪತ್ನಿಗೆ ತಿಳಿಸಿ ಏಪ್ರಿಲ್ 11 ರಂದು ಬೆಳಗಾವಿಯಿಂದ ಹೊರಟಿದ್ದರು.
ಮಂಗಳವಾರ ಅವರ ಮೃತದೇಹ ಉಡುಪಿಯಲ್ಲಿ ಪತ್ತೆಯಾಗಿತ್ತು. ಆತನ ಇಬ್ಬರು ಗೆಳೆಯರು ಒಂದೇ ಕಟ್ಟಡದಲ್ಲಿದ್ದರೂ ಇನ್ನೊಂದು ಕೋಣೆಯಲ್ಲಿದ್ದರು. ಅವರ ಹೇಳಿಕೆಗಳನ್ನು ಪೊಲೀಸರು ದಾಖಲಿಸಿಕೊಳ್ಳಲಿದ್ದಾರೆ.

ಪ್ರಮುಖ ಸುದ್ದಿ :-   ಸವದತ್ತಿ | ಸಿಡಿಲು ಬಡಿದು ಇಬ್ಬರು ಸಾವು

ಹಿಂಡಲಗಾ ಗ್ರಾಮದಲ್ಲಿ ಸಂತೋಷ್ ಪಾಟೀಲ್ ಅವರು 4 ಕೋಟಿ ರೂ.ಗಳ ಕಾಮಗಾರಿ ನಡೆಸಿದ್ದರು. ಸಂತೋಷ್ ಅವರು ಯೋಜನೆಗೆ ಹಣ ಹೂಡಿದ್ದರು.ಆದರೆ ಕಾಮಗಾರಿಯ ಬಿಲ್ ಬಾಕಿ ಉಳಿದಿದ್ದು, ಸಚಿವ ಕೆ.ಎಸ್.ಈಶ್ವರಪ್ಪ ಅವರನ್ನು ಹಲವು ಬಾರಿ ಭೇಟಿ ಮಾಡಿ ಹಣ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದರು. ಆದರೆ ಅವರ ಆಪ್ತರಾದ ಬಸವರಾಜ್ ಮತ್ತು ರಮೇಶ್ ಅವರು ಶೇ. 40 ರಷ್ಟು ಕಮಿಷನ್ ಬೇಡಿಕೆ ಇಟ್ಟಿದ್ದಾರೆ ಆರೋಪ ಮಾಡಿದ್ದರು

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement