ಪುಸ್ತಕದ ಮುನ್ನುಡಿಯಲ್ಲಿ ಡಾ.ಅಂಬೇಡ್ಕರ್ -ಪ್ರಧಾನಿ ಮೋದಿ ನಡುವಿನ ಸಮಾನಾಂತರದ ಬಗ್ಗೆ ಬರೆದ ಖ್ಯಾತ ಸಂಗೀತ ನಿರ್ದೇಶಕ ಇಳಯರಾಜ

ನವದೆಹಲಿ: ಖ್ಯಾತ ಸಂಗೀತ ನಿರ್ದೇಶಕ ಇಳಯರಾಜ ಅವರು ‘ಅಂಬೇಡ್ಕರ್ ಮತ್ತು ಮೋದಿ: ರಿಫಾರ್ಮರ್ಸ್ ಐಡಿಯಾಸ್, ಪರ್ಫಾಮರ್ಸ್ ಇಂಪ್ಲಿಮೆಂಟೇಶನ್’ ಎಂಬ ಪುಸ್ತಕಕ್ಕೆ ಬರೆದ ಮುನ್ನುಡಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಡಾ ಬಿಆರ್ ಅಂಬೇಡ್ಕರ್ ನಡುವಿನ ಸಮಾನಾಂತರಗಳ ಬಗ್ಗೆ ಬರೆದಿದ್ದಾರೆ. ಪುಸ್ತಕವನ್ನು ಬ್ಲೂಕ್ರಾಫ್ಟ್ ಡಿಜಿಟಲ್ ಫೌಂಡೇಶನ್ ಪ್ರಕಟಿಸಿದೆ.

ಮುನ್ನುಡಿಯಲ್ಲಿ ಇಳಯರಾಜ ಹೀಗೆ ಬರೆದಿದ್ದಾರೆ, “ಈ ಪುಸ್ತಕವು ಡಾ. ಬಿ.ಆರ್. ಅಂಬೇಡ್ಕರ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ವ್ಯಕ್ತಿತ್ವಗಳ ನಡುವಿನ ಕೆಲವು ಗಮನಾರ್ಹವಾದ ಸಮಾನಾಂತರಗಳನ್ನು ಸಹ ತೆರೆದಿಡುತ್ತದೆ. ಈ ಎರಡೂ ಗಮನಾರ್ಹ ವ್ಯಕ್ತಿಗಳು ಸಮಾಜದ ಸಾಮಾಜಿಕವಾಗಿ ಅಶಕ್ತ ವರ್ಗಗಳ ಜನರು ಎದುರಿಸುತ್ತಿರುವ ಆಪತ್ತುಗಳ ವಿರುದ್ಧ ಯಶಸ್ವಿಯಾದವರು. ಇಬ್ಬರೂ ಬಡತನ ಮತ್ತು ಕಷ್ಟಗಳನ್ನು ಕಂಡಿದ್ದಾರೆ. ಇಬ್ಬರೂ ಭಾರತಕ್ಕಾಗಿ ದೊಡ್ಡ ಕನಸು ಕಂಡರು, ಆದರೆ ಇಬ್ಬರೂ ಕೇವಲ ಚಿಂತನೆಗಷ್ಟೇ ಸೀಮಿತವಾಗದೆ ಕ್ರಿಯೆಯನ್ನು ನಂಬುವ ಪ್ರಾಯೋಗಿಕ ಪುರುಷರು ಎಂದು ತಮ್ಮ ಮುನ್ನುಡಿಯಲ್ಲಿ ಬರೆದಿದ್ದಾರೆ ಎಂದು ಇಂಡಿಯಾ ಟುಡೆ.ಇನ್‌ ವರದಿ ಮಾಡಿದೆ.

ವರದಿ ಪ್ರಕಾರ, ಇಳಯರಾಜ ಅವರು ತಮ್ಮ ಮುನ್ನುಡಿಯಲ್ಲಿ ಡಾ. ಅಂಬೇಡ್ಕರ್ ಅವರು ಸಾಮಾಜಿಕ ಪರಿವರ್ತನೆಯ ಗುರಿಯನ್ನು ಹೊಂದಿರುವ ‘ಬೇಟಿ ಬಚಾವೋ ಬೇಟಿ ಪಢಾವೋ’ ದಂತಹ ಯೋಜನೆಗಳ ಜೊತೆಗೆ ಸರ್ಕಾರ ಜಾರಿಗೆ ತಂದಿರುವ ತ್ರಿವಳಿ ತಲಾಖ್ ಕಾನೂನಿನಂತಹ ಮಹಿಳಾ ಪರ ಶಾಸನಕ್ಕಾಗಿ ಪ್ರಧಾನಿ ಮೋದಿಯ ಬಗ್ಗೆ ಹೆಮ್ಮೆಪಡುತ್ತಾರೆ ಎಂದು ಹೇಳಿದ್ದಾರೆ.

ಬ್ಲೂಕ್ರಾಫ್ಟ್ ಡಿಜಿಟಲ್ ಫೌಂಡೇಶನ್ ಏಪ್ರಿಲ್ 14 ರಂದು ಪುಸ್ತಕವನ್ನು ಬಿಡುಗಡೆ ಮಾಡಿದೆ. ಪುಸ್ತಕವು ಅಂಬೇಡ್ಕರ್ ಅವರ ದೃಷ್ಟಿಕೋನವನ್ನು ಮುಂಚೂಣಿಗೆ ತರಲು ಮತ್ತು ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಶೈಕ್ಷಣಿಕ ಪ್ರಯತ್ನವಾಗಿದೆ ಮತ್ತು ಪ್ರಧಾನಿ ಮೋದಿಯವರು ನಿರ್ಮಿಸುತ್ತಿರುವ ನವ ಭಾರತವು ಅಂಬೇಡ್ಕರ್ ಅವರ ಆದರ್ಶಗಳನ್ನು ಹೇಗೆ ಮುಂದುವರಿಸುತ್ತಿದೆ ಎಂದು ಹೇಳುತ್ತದೆ ಎಂದು ಪ್ರಕಾಶಕರು ಟ್ವಿಟರ್‌ನಲ್ಲಿ ಹೇಳಿದ್ದಾರೆ
ಏತನ್ಮಧ್ಯೆ, ಇಬ್ಬರು ನಾಯಕರ ಹೋಲಿಕೆಗಾಗಿ ಇಳಯರಾಜ ಅವರನ್ನು ನೆಟ್ಟಿಗರು ಟೀಕಿಸಿದ್ದಾರೆ

ಪ್ರಮುಖ ಸುದ್ದಿ :-   ಜೆಡಿಯು ಯುವ ಮುಖಂಡನ ಗುಂಡಿಕ್ಕಿ ಹತ್ಯೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement