ಸಾಮೂಹಿಕ ಅತ್ಯಾಚಾರ ನಡೆದಿದೆ ಎಂದು ಸಾಬೀತುಪಡಿಸಿ ಇಲ್ಲದಿದ್ರೆ ನಾವು ನಿಮ್ಮನ್ನು ಥಳಿಸ್ತೇವೆ: ಟಿಎಂಸಿ ನಾಯಕನಿಂದ ಮತ್ತೊಂದು ವಿವಾದಾತ್ಮಕ ಹೇಳಿಕೆ

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯ ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಾಯಕರೊಬ್ಬರು ನಾಡಿಯಾದಲ್ಲಿ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲದೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಮಾನಹಾನಿ ಮಾಡಲು ಪ್ರಯತ್ನಿಸಿದರೆ ನಿಮ್ಮನ್ನು ಥಳಿಸುತ್ತೇನೆ ಎಂದು ಟಿಎಂಸಿ ನಾಯಕರೊಬ್ಬರು ವಿರೋಧ ಪಕ್ಷದ ನಾಯಕರಿಗೆ ಬೆದರಿಕೆ ಹಾಕಿದ್ದು, ಈಗ ವಿವಾದಕ್ಕೆ ಕಾರಣವಾಗಿದೆ.
ನಾಡಿಯಾ ಪ್ರಕರಣದಲ್ಲಿ ಸಾಮೂಹಿಕ ಅತ್ಯಾಚಾರ ನಡೆದಿರುವುದನ್ನು ಪ್ರತಿಪಕ್ಷಗಳು ಸಾಬೀತುಪಡಿಸಲು ಸಾಧ್ಯವಾಗದಿದ್ದರೆ ಮಮತಾ ಬ್ಯಾನರ್ಜಿಯವರ ಮಾನಹಾನಿ ಮಾಡುವುದನ್ನು ನಿಲ್ಲಿಸಬೇಕು ಎಂದು ಅವರು ಹೇಳಿದರು.

ಟಿಎಂಸಿಯ ಭಾಗಬಂಗೋಲಾ ಬ್ಲಾಕ್ ಒನ್ ಕಮಿಟಿ ಅಧ್ಯಕ್ಷ ಅಫ್ರೋಜ್ ಸರ್ಕಾರ್, “ಸಾಮೂಹಿಕ ಅತ್ಯಾಚಾರ ನಡೆದಿದೆ ಎಂದು ಸಾಬೀತುಪಡಿಸಿ. ಮಮತಾ ಬ್ಯಾನರ್ಜಿ ಮಾನಹಾನಿ ಮಾಡುವುದನ್ನು ನಿಲ್ಲಿಸಿ ಅಥವಾ ನಾವು ಲಾಠಿಗಳಿಂದ ನಿಮ್ಮನ್ನು ಮೌನಗೊಳಿಸುತ್ತೇವೆ” ಎಂದು ಹೇಳಿದ್ದಾರೆ.
ನಾನು ಯಾರಿಗೂ ಹೆದರುವುದಿಲ್ಲ, ನಮ್ಮ ನಾಯಕಿ ಮಮತಾ ಬ್ಯಾನರ್ಜಿ ಅವರಿಗೆ ಸ್ವಂತ ಮಗನಿಲ್ಲದಿರಬಹುದು, ಆದರೆ ನಾನು ಅವರ ಮಗ” ಎಂದು ಅವರು ಹೇಳಿದ್ದಾರೆ.

ಸಾಮೂಹಿಕ ಅತ್ಯಾಚಾರ ನಡೆದಿದ್ದರೆ, ನಾವು ಆರೋಪಿಗಳನ್ನು ಬಂಧಿಸಲು ಪೊಲೀಸರನ್ನು ಮಾತ್ರ ಕೇಳುತ್ತೇವೆ. ಆದರೆ ಮಮತಾ ಬ್ಯಾನರ್ಜಿ ಅವರನ್ನು ಈ ರೀತಿ ಮಾನಹಾನಿ ಮಾಡಬಾರದು ಎಂದು ಅವರು ಹೇಳಿದರು.
ಅತ್ಯಾಚಾರದಿಂದ ಅಪ್ರಾಪ್ತ ವಯಸ್ಕಳು ಮೃತಪಟ್ಟಿದ್ದಾಳೆ ಎಂದು ಅವರು ತೋರಿಸುತ್ತಿರುವ ಈ ಕಥೆಯನ್ನು ನೀವು ಅತ್ಯಾಚಾರ ಎಂದು ಕರೆಯುತ್ತೀರಾ? ಅವಳು ಗರ್ಭಿಣಿಯಾಗಿದ್ದಳೇ ಅಥವಾ ಪ್ರೇಮ ಸಂಬಂಧ ಹೊಂದಿದ್ದಳಾ? ಅವರು ವಿಚಾರಿಸಿದ್ದಾರೆಯೇ? ನಾನು ಪೊಲೀಸರನ್ನು ಕೇಳಿದ್ದೇನೆ, ಅವರು ಬಂಧಿಸಿದ್ದಾರೆ. ಹುಡುಗಿಗೆ ಹುಡುಗನೊಂದಿಗೆ ಸಂಬಂಧವಿತ್ತು ಎಂದು ಹೇಳಿದ್ದಾರೆ ಎಂದು ಮಮತಾ ಬ್ಯಾನರ್ಜಿ ಹೇಳಿದ್ದರು.

ಪ್ರಮುಖ ಸುದ್ದಿ :-   50 ದಿನಗಳ ನಂತರ ಜೈಲಿನಿಂದ ಹೊರಬಂದ ಅರವಿಂದ ಕೇಜ್ರಿವಾಲ್ ; ಸರ್ವಾಧಿಕಾರದ ವಿರುದ್ಧ ಹೋರಾಡಬೇಕಿದೆ ಎಂದ ದೆಹಲಿ ಸಿಎಂ

ಮಮತಾ ಬ್ಯಾನರ್ಜಿ, “ಇದೊಂದು ಪ್ರೇಮ ಸಂಬಂಧ ಮತ್ತು ಕುಟುಂಬಕ್ಕೆ ತಿಳಿದಿದ್ದರಿಂದ ಅದು ದೃಢಪಟ್ಟಿದೆ. ಅವರು ಸಂಬಂಧದಲ್ಲಿದ್ದರೆ, ನಾನು ಅದನ್ನು ನಿಲ್ಲಿಸಬಹುದೇ? ಇದು ಉತರ ಪ್ರದೇಶ ಅಲ್ಲ, ನಾವು ಇಲ್ಲಿ ಲವ್ ಜಿಹಾದ್ ಮಾಡುವುದಿಲ್ಲ. ಇದು ಅವರ ವೈಯಕ್ತಿಕ ಸ್ವಾತಂತ್ರ್ಯ. ಆದರೆ ಯಾವುದೇ ಅವ್ಯವಹಾರಗಳು ಕಂಡುಬಂದರೆ, ಪೊಲೀಸರು ಆರೋಪಿಗಳನ್ನು ಬಂಧಿಸುತ್ತಾರೆ. ಒಬ್ಬ ಶಂಕಿತನನ್ನು ಈಗಾಗಲೇ ಬಂಧಿಸಲಾಗಿದೆ ಎಂದು ಹೇಳದ್ದು ಬಾರೀ ಟೀಕೆಗೆ ಒಳಗಾಗಿತ್ತು.
14 ವರ್ಷದ ಬಾಲಕಿಯ ಪೋಷಕರ ಪ್ರಕಾರ, ಸ್ಥಳೀಯ ಟಿಎಂಸಿ ನಾಯಕನ ಮಗನ ಜನ್ಮದಿನದ ಪಾರ್ಟಿಯಲ್ಲಿ ಭಾಗವಹಿಸಲು ಅವಳು ಹೋಗಿದ್ದಳು. ಅಲ್ಲಿ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಲಾಗಿದೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement