ಒಂದೇ ಕುಟುಂಬದ ಐವರ ಶವ ಪತ್ತೆ

ಲಕ್ನೋ: ಉತ್ತರಪ್ರದೇಶದ ಪ್ರಯಾಗ್‌ರಾಜ್‌ ಜಿಲ್ಲೆಯ ಗ್ರಾಮವೊಂದರಲ್ಲಿ ಮೂವರು ಮಕ್ಕಳೂ ಸೇರಿ ಒಂದೇ ಕುಟುಂಬದ ಐವರು ಸದಸ್ಯರ ಶವ ಪತ್ತೆಯಾಗಿದೆ.

ನವಾಬ್‌ಗಂಜ್‌ ಪೊಲೀಸ್‌ ಠಾಣೆ ವ್ಯಾಪ್ತಿಯ ಖಾಗಲ್ಪುರ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ಮನೆಯ ಯಜಮಾನನ ಬಗ್ಗೆ ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ. ಪತ್ನಿ ಮತ್ತು ಮೂವರು ಮಕ್ಕಳನ್ನು ಕೊಂದ ಬಳಿಕ ಮನೆಯ ಯಜಮಾನ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ. ಮೃತರನ್ನು ರಾಹುಲ್‌ (42), ಪ್ರೀತಿ (38) ಮತ್ತು ಪುತ್ರಿಯರಾದ ಮಾಹಿ (15), ಪೀಹು (13), ಕುಹು (11) ಎಂದು ಗುರುತಿಸಲಾಗಿದೆ.

ಪತ್ನಿ ಮತ್ತು ಮೂವರು ಮಕ್ಕಳ ದೇಹದ ಮೇಲೆ ಚಾಕುವಿನಿಂದ ತಿವಿದ ಗಾಯಗಳಿವೆ. ರಾಹುಲ್‌ ಮೃತದೇಹ ಫ್ಯಾನಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ನಾಲ್ವರನ್ನು ಕೊಲೆ ಮಾಡಿ ನಂತರ ರಾಹುಲ್‌ ನೇಣಿಗೆ ಶರಣಾಗಿರಬಹುದು ಎಂಬ ‘ಶಂಕೆ ವ್ಯಕ್ತವಾಗಿದೆ. ‘ಪ್ರಕರಣದ ತನಿಖೆಗೆ ಐವರು ಅಧಿಕಾರಿಗಳ ತಂಡ ರಚಿಸಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠರು ತಿಳಿಸಿದ್ದಾರೆ.

ಓದಿರಿ :-   ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಪಂದ್ಯಾವಳಿ, ಇಂಗ್ಲೆಂಡ್ ವಿರುದ್ಧ ಟೆಸ್ಟ್‌ಗೆ ಭಾರತದ ತಂಡ ಪ್ರಕಟ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

/ 5. ಒಟ್ಟು ವೋಟುಗಳು

advertisement

ನಿಮ್ಮ ಕಾಮೆಂಟ್ ಬರೆಯಿರಿ