ಕಾರವಾರದಲ್ಲಿ ಗಾಳಕ್ಕೆ ಸಿಕ್ಕಿಬಿದ್ದ ಅಪರೂಪದ ಡಿಸ್ಕೊ ಫಿಶ್…ವೀಕ್ಷಿಸಿ

ಕಾರವಾರ: ನಗರದ ಬೈತಕೋಲದ ಮೀನುಗಾರನ ಗಾಳಕ್ಕೆ ಅಪರೂಪದ ಮೀನು ಸಿಕ್ಕಿದ್ದು, ಇದಕ್ಕೆ ಡಿಸ್ಕೊ ಮೀನು (ತಂಬೂಸ್ ಮೀನು) ಎಂದು ಕರೆಯುತ್ತಾರಂತೆ.
ಇದು ವಇವಿಧ ಬಣ್ಣಗಳಿಂದ ಕೂಡಿದ ಅತ್ಯಂತ ಸುಂದರ ಮೀನು. ಮಾಣಿಗೌಡ ಎಂಬ ಮೀನುಗಾರನ ಗಾಳಕ್ಕೆ ಈ ಅಪರೂಪದ ಮೀನು ಸಿಕ್ಕಿ ಬಿದ್ದಿದೆ.

ಇದು ಹೆಚ್ಚಾಗಿ ಅಮೆಜಾನ್ ನದಿಯಲ್ಲಿ ಕಂಡುಬರುತ್ತದೆಯಂತೆ ಹಾಗೂ ಇದರ ಜೀವಿತಾವಧಿ ಸುಮಾರು12 ವರ್ಷಗಳು. ಇದು ಸಾಮಾನ್ಯವಾಗಿ 25 ಸೆಂಟಿಮೀಟರ್ ಉದ್ದವಾಗಿರುತ್ತದೆ, ಇದು ಚಪ್ಪಟೆ ಆಕಾರದಲ್ಲಿರುತ್ತದೆ ಮತ್ತು ತಲೆಯಿಂದ ಬಾಲಕ್ಕೆ ಹೋಗುವ ರೇಖೆಗಳನ್ನು ಹೊಂದಿದೆ.

ನೀರಿನ ಮೂಲಕ ವೇಗವಾಗಿ ಚಲಿಸಲು ಈ ಮೀನಿನ ರೆಕ್ಕೆಗಳು ತ್ರಿಕೋನದಲ್ಲಿರುತ್ತವೆ. ನೋಡಲು ಬಹಳ ಸುಂದರವಾಗಿರುತ್ತವೆ ಹಾಗೂ ಇದರ ಕಣ್ಣು ಕೆಂಪು ಮಿಶ್ರಿತ ಕಂದು ಬಣ್ಣದಲ್ಲಿರುತ್ತವೆ.

5 / 5. 2

ನಿಮ್ಮ ಕಾಮೆಂಟ್ ಬರೆಯಿರಿ

advertisement