ಅಸಡ್ಡೆ ಚಾಲಕ… ಗುಡ್ಡಗಾಡು ಪ್ರದೇಶದಲ್ಲಿ ಬಾಲಕಿಗೆ ಜನರಿಂದ ತುಂಬಿದ್ದ ಬಸ್ ಚಲಾಯಿಸಲು ಅವಕಾಶ ನೀಡಿದ ಡ್ರೈವರ್‌..! ಚಾಲಕನ ಪರವಾನಿಗೆ ಅಮಾನತು.. ವೀಕ್ಷಿಸಿ

ಉಧಂಪುರ: ಜಮ್ಮು ಮತ್ತು ಕಾಶ್ಮೀರದ ಉಧಂಪುರದಲ್ಲಿ ಅಪ್ರಾಪ್ತ ಬಾಲಕಿಯೊಬ್ಬಳು ಬಸ್ ಚಲಾಯಿಸುತ್ತಿರುವುದನ್ನು ತೋರಿಸುವ ವೀಡಿಯೊ ಆನ್‌ಲೈನ್‌ನಲ್ಲಿ ವೈರಲ್ ಆಗುತ್ತಿದೆ.
ಉಧಂಪುರ-ಲ್ಯಾಂಡರ್ ಮಾರ್ಗದಲ್ಲಿ ಚಲಿಸುತ್ತಿದ್ದ ಬಸ್ ಅನ್ನು ಪಂಚೈರಿಯ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ 11 ನೇ ತರಗತಿ ವಿದ್ಯಾರ್ಥಿನಿ ಓಡಿಸುತ್ತಿದ್ದಳು ಎಂಬುದು ಗಮನಾರ್ಹ. ಬಾಲಕಿ ಸ್ಟೀರಿಂಗ್ ಹಿಡಿದಿರುವಾಗ ಆಕೆಯ ಪಕ್ಕದಲ್ಲಿ ಕುಳಿತಿದ್ದ ಬಸ್ ಚಾಲಕ ಆಕೆಗೆ ವಾಹನ ಚಲಾಯಿಸುವುದನ್ನು ಹೇಳಿಕೊಡುತ್ತಿರುವುದು ಕಂಡುಬಂದಿದೆ.

ಬಸ್‌ನಲ್ಲಿ ಅನೇಕ ಶಾಲಾ ವಿದ್ಯಾರ್ಥಿಗಳು ಸೇರಿದಂತೆ ಪ್ರಯಾಣಿಕರು ತುಂಬಿದ್ದರು. ಮಾರ್ಗವು ಗುಡ್ಡಗಾಡು ಪ್ರದೇಶವಾದ್ದರಿಂದ ಅನನುಭವಿಗಳಿಗೆ ಬಸ್ ಓಡಿಸುವುದು ಅತ್ಯಂತ ಅಪಾಯಕಾರಿಯಾದ ಸ್ಥಳವಾಗಿದೆ. ಸಣ್ಣ ತಪ್ಪಾದರೂ ಪ್ರಯಾಣಿಕರಿಂದ ತುಂಬಿದ ಬಸ್ ನೂರಾರು ಅಡಿ ಆಳದ ಕಂದಕಕ್ಕೆ ಬೀಳುವ ಅಪಾಯವಿರುತ್ತದೆ. ಅಂತರ್ಜಾಲದಲ್ಲಿ ವೈರಲ್ ಆಗಿರುವ ವೀಡಿಯೊವನ್ನು ಗಮನಿಸಿದ ಜಿಲ್ಲಾಡಳಿತ ಬಸ್ ಚಾಲಕನ ವಿರುದ್ಧ ತಕ್ಷಣ ಕ್ರಮ ಕೈಗೊಂಡಿದೆ.

ವೀಡಿಯೊಗೆ ಪ್ರತಿಕ್ರಿಯಿಸಿದ ಎಆರ್‌ಟಿಒ ಉಧಂಪುರ್ ಜುಗಲ್ ಕಿಶೋರ್, ಚಾಲಕ ಹುಡುಗಿಗೆ ಬಸ್ ಓಡಿಸಲು ಕಲಿಸುತ್ತಿದ್ದುದನ್ನು ಕ್ಲಿಪ್ ಸ್ಪಷ್ಟವಾಗಿ ತೋರಿಸುತ್ತದೆ, ಇದು ಅಪಾಯಕಾರಿ ನಡವಳಿಕೆಯಾಗಿದೆ ಎಂದು ಹೇಳಿದ್ದಾರೆ. ಇದೀಗ ಜಿಲ್ಲಾಡಳಿತದ ಸೂಚನೆ ಮೇರೆಗೆ ಬಸ್ ಅನ್ನು ವಶಕ್ಕೆ ಪಡೆಯಲಾಗಿದೆ. ಪ್ರಯಾಣಿಕರ ಜೀವಕ್ಕೆ ಅಪಾಯ ತಂದಿರುವ ಬಸ್ ಚಾಲಕನ ಪರವಾನಿಗೆ ಹಾಗೂ ಪರ್ಮಿಟ್ ಅನ್ನು ಸಾರಿಗೆ ಇಲಾಖೆ ಅಮಾನತುಗೊಳಿಸಿದೆ.

ಉದಮ್‌ಪುರದಲ್ಲಿ ಮೋಟಾರು ವಾಹನ ಇಲಾಖೆಯು ತ್ವರಿತ ಕ್ರಮ ಕೈಗೊಂಡಿದೆ ಮತ್ತು ಅಪಾಯಕಾರಿ ಚಾಲನೆಗಾಗಿ ಮತ್ತು ಮೋಟಾರು ವಾಹನ ಕಾಯಿದೆಯ ಉಲ್ಲಂಘನೆಗಾಗಿ ಮಾನವ ಜೀವಗಳನ್ನು ಅಪಾಯಕ್ಕೆ ಸಿಲುಕಿಸುವುದಕ್ಕಾಗಿ ವಾಹನವನ್ನು ವಶಪಡಿಸಿಕೊಂಡಿದೆ” ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಚಾಲಕನ ಚಾಲನಾ ಪರವಾನಗಿ ಮತ್ತು ಮಾರ್ಗ ಪರವಾನಗಿಯನ್ನು ಅಮಾನತುಗೊಳಿಸುವ ಪ್ರಕ್ರಿಯೆಗಳನ್ನು ಪ್ರಾರಂಭಿಸಲಾಗಿದೆ ಎಂದು ವಕ್ತಾರರು ತಿಳಿಸಿದ್ದಾರೆ. ಬಸ್ ಚಾಲಕನಿಗೆ ಸಮನ್ಸ್ ನೀಡಲಾಗಿದ್ದು, ಆತನನ್ನು ವಿಚಾರಣೆ ನಡೆಸಲಾಗುವುದು. ಅದೇ ಮಾರ್ಗದಲ್ಲಿ ದಾಖಲೆಗಳಿಲ್ಲದೆ ಸಂಚರಿಸುತ್ತಿದ್ದ ಇನ್ನೊಂದು ವಾಹನವನ್ನೂ ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಎಲ್ಲಾ ಚಾಲಕರು ಸಂಚಾರಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಿದ್ದಾರೆ.

ಪ್ರಮುಖ ಸುದ್ದಿ :-   ಭಾರತೀಯ ನೌಕಾಪಡೆಯ ಮುಖ್ಯಸ್ಥರಾಗಿ ವೈಸ್ ಅಡ್ಮಿರಲ್ ದಿನೇಶ ತ್ರಿಪಾಠಿ ನೇಮಕ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement