ಮಂಗಳೂರು: ಪ್ರೀತಿಸಿದ ಹುಡುಗಿ ಜೊತೆ ಮನಸ್ತಾಪದ ಕಾರಣಕ್ಕೆ ಯುವಕನೊಬ್ಬ ಮೊಬೈಲ್ ಟವರ್ ಏರಿ ಕುಳಿತು ಕೆಲಕಾಲ ಎಲ್ಲರಿಗೂ ಫಜೀತಿ ಸೃಷ್ಟಿಸಿದ್ದಾನೆ.
ಮಂಗಳೂರು ಹೊರವಲಯದ ಅಡ್ಯಾರ್ ಎಂಬಲ್ಲಿ ಈ ಘಟನೆ ಸೋಮವಾರ ನಡೆದ ಬಗ್ಗೆ ವರದಿಯಾಗಿದೆ,
advertisement
9535127775 / 9901837775 / 6364528715 / 08362775155 / https://icsmpucollege.com/
ಕೊಡ್ಮಾಣ್ ಕಂಜಾರ ಎಂಬಲ್ಲಿನ ನಿವಾಸಿ ಸುಧೀರ್ ಎಂಬಾತ ಅದೇ ಊರಿನ ಯುವತಿಯನ್ನು ಪ್ರೀತಿಸುತ್ತಿದ್ದ. ಅವರಿಬ್ಬರ ನಡುವೆ ಯಾವುದೋ ವಿಚಾರಕ್ಕೆ ಮನಸ್ತಾಪ ಉಂಟಾಗಿದ್ದರಿಂದ ಹುಡುಗಿ ದೂರವಾಗಿದ್ದಳು ಎಂದು ಹೇಳಲಾಗಿದೆ. ಇದಕ್ಕಾಗಿ ಮನೊಂದ ಆತ ಅಡ್ಯಾರ್ ಬಳಿಯ ಆರ್ಕೆ ಬಿಲ್ಡಿಂಗ್ನ ಮೇಲಿದ್ದ ಮೊಬೈಲ್ ಟವರ್ ಏರಿ ಕುಳಿತು ಕೆಲಕಾಲ ಎಲ್ಲರನ್ನೂ ಕಂಗಾಲು ಮಾಡಿದ್ದಾನೆ.
ಪೊಲೀಸರು, ಸ್ಥಳೀಯರು ಆತನ ಮನವೊಲಿಕೆಗೆ ಎಷ್ಟೇ ಯತ್ನಿಸಿದರೂ ಫಲಕಾರಿಯಾಗಲಿಲ್ಲ. ಬಳಿಕ ಆತನ ಪ್ರೇಮಿ ಬಂದು ಸಮಾಧಾನ ಮಾಡಿದ ಬಳಿಕವೇ ಟವರ್ನಿಂದ ಕೆಳಗಿಳಿದಿದ್ದಾನೆ ಎಂದು ವರದಿಗಳು ತಿಳಿಸಿವೆ.
ನಿಮ್ಮ ಕಾಮೆಂಟ್ ಬರೆಯಿರಿ