4 ತಿಂಗಳ ಗರಿಷ್ಠ 14.55% ತಲುಪಿದ ಸಗಟು ಬೆಲೆ ಆಧಾರಿತ ಹಣದುಬ್ಬರ

ನವದೆಹಲಿ: ಸಗಟು ಬೆಲೆ ಆಧಾರಿತ ಹಣದುಬ್ಬರವು ಮಾರ್ಚ್‌ನಲ್ಲಿ ನಾಲ್ಕು ತಿಂಗಳ ಗರಿಷ್ಠ ಮಟ್ಟ 14.55%ಕ್ಕೆ ಏರಿದೆ, ತರಕಾರಿಗಳು ಬೆಲೆ ಒತ್ತಡವನ್ನು ಕಡಿಮೆಗೊಳಿಸಿದರೂ ಸಹ ಮುಖ್ಯವಾಗಿ ಕಚ್ಚಾ ತೈಲ ಮತ್ತು ಸರಕುಗಳ ಬೆಲೆಗಳು ಹೆಚ್ಚಳವಾಗಿರುವುದು ಈ ರೀತಿ ಹೆಚ್ಚಳಕ್ಕೆ ಕಾರಣವಾಗಿದೆ.
ಸೋಮವಾರ ಬಿಡುಗಡೆಯಾದ ಸರ್ಕಾರಿ ಅಂಕಿಅಂಶಗಳ ಪ್ರಕಾರ, ಏಪ್ರಿಲ್ 2021 ರಿಂದ ಪ್ರಾರಂಭವಾಗುವ ಸತತ 12 ನೇ ತಿಂಗಳಿಗೆ ಡಬ್ಲ್ಯುಪಿಐ ಹಣದುಬ್ಬರವು ಎರಡಂಕಿಗಳಲ್ಲಿ ಉಳಿದಿದೆ. ನವೆಂಬರ್ 2021 ರಲ್ಲಿ ಹಣದುಬ್ಬರವು ಶೇಕಡಾ 14.87 ರಷ್ಟಿದ್ದಾಗ ಕೊನೆಯ ಬಾರಿಗೆ ಡಬ್ಲ್ಯುಪಿಐ ಗರಿಷ್ಠ ಮಟ್ಟ ದಾಖಲಿಸಿತ್ತು.

ಫೆಬ್ರವರಿಯಲ್ಲಿ ಡಬ್ಲ್ಯುಪಿಐ ಹಣದುಬ್ಬರವು 13.11% ರಷ್ಟಿದ್ದರೆ, ಕಳೆದ ವರ್ಷ ಮಾರ್ಚ್‌ನಲ್ಲಿ ಇದು ಶೇಕಡಾ 7.89 ರಷ್ಟಿತ್ತು. ತಿಂಗಳ ಅವಧಿಯಲ್ಲಿ, ಆಹಾರ ಪದಾರ್ಥಗಳ ಹಣದುಬ್ಬರವು ಫೆಬ್ರವರಿಯಲ್ಲಿ 8.19% ರಿಂದ 8.06% ಕ್ಕೆ ಇಳಿದಿತ್ತು. ತರಕಾರಿ ಹಣದುಬ್ಬರವು ಫೆಬ್ರವರಿಯಲ್ಲಿ ಶೇಕಡಾ 26.93 ರ ವಿರುದ್ಧ ಮಾರ್ಚ್‌ನಲ್ಲಿ ಶೇಕಡಾ 19.88 ರಷ್ಟಿದೆ.

ಮಾರ್ಚ್, 2022 ರಲ್ಲಿ ಹಣದುಬ್ಬರ (ಡಬ್ಲ್ಯುಪಿಐ)ದ ಹೆಚ್ಚಿನ ದರವು ರಶಿಯಾ-ಉಕ್ರೇನ್ ಸಂಘರ್ಷದಿಂದ ಉಂಟಾದ ಜಾಗತಿಕ ಪೂರೈಕೆ ಸರಪಳಿಯಲ್ಲಿನ ಅಡಚಣೆಯಿಂದಾಗಿಪ್ರಾಥಮಿಕವಾಗಿ ಕಚ್ಚಾ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ, ಖನಿಜ ತೈಲಗಳು, ಮೂಲ ಲೋಹಗಳು ಇತ್ಯಾದಿಗಳ ಬೆಲೆಗಳ ಏರಿಕೆಯಿಂದಾಗಿ ಇದು ಸಂಭವಿಸಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

ಪ್ರಮುಖ ಸುದ್ದಿ :-   50 ದಿನಗಳ ನಂತರ ಜೈಲಿನಿಂದ ಹೊರಬಂದ ಅರವಿಂದ ಕೇಜ್ರಿವಾಲ್ ; ಸರ್ವಾಧಿಕಾರದ ವಿರುದ್ಧ ಹೋರಾಡಬೇಕಿದೆ ಎಂದ ದೆಹಲಿ ಸಿಎಂ

ಉತ್ಪಾದನಾ ವಸ್ತುಗಳ ಹಣದುಬ್ಬರವು ಮಾರ್ಚ್‌ನಲ್ಲಿ ಶೇಕಡಾ 10.71 ರಷ್ಟಿತ್ತು, ಫೆಬ್ರವರಿಯಲ್ಲಿ ಶೇಕಡಾ 9.84 ರಷ್ಟಿತ್ತು. ಇಂಧನ ಮತ್ತು ವಿದ್ಯುತ್ , ತಿಂಗಳ ಅವಧಿಯಲ್ಲಿ ಬೆಲೆ ಏರಿಕೆ ದರವು 34.52%ರಷ್ಟಿದೆ.
ಕಚ್ಚಾ ಪೆಟ್ರೋಲಿಯಂನ ಹಣದುಬ್ಬರವು ಫೆಬ್ರವರಿಯಲ್ಲಿ 55.17% ರಿಂದ ಮಾರ್ಚ್‌ನಲ್ಲಿ ಶೇಕಡಾ 83.56 ಕ್ಕೆ ಏರಿತು. ಮಾರ್ಚ್‌ನಲ್ಲಿ ಚಿಲ್ಲರೆ ಹಣದುಬ್ಬರವು ಶೇಕಡಾ 6.95 ಕ್ಕೆ ಏರಿತು – ಗ್ರಾಹಕರ ಬೆಲೆ ಸೂಚ್ಯಂಕವು ಆರ್‌ಬಿಐನ ಟಾಲರೆನ್ಸ್‌ ಮಿತಿ (tolerance limit) 6 ಶೇಕಡಾವನ್ನು ಉಲ್ಲಂಘಿಸಿದ ಸತತ ಮೂರನೇ ತಿಂಗಳು ಇದಾಗಿದೆ ಎಂದು ಕಳೆದ ವಾರ ಬಿಡುಗಡೆಯಾದ ಅಂಕಿಅಂಶಗಳು ತೋರಿಸಿವೆ.
ಈ ತಿಂಗಳ ಆರಂಭದಲ್ಲಿ ರಿಸರ್ವ್ ಬ್ಯಾಂಕ್ ತನ್ನ ಪ್ರಮುಖ ರೆಪೋ ದರವನ್ನು ಉಳಿಸಿಕೊಂಡಿದೆ .ಬೆಳವಣಿಗೆಯನ್ನು ಬೆಂಬಲಿಸಲು ಸತತ 11 ನೇ ಬಾರಿಗೆ 4 ಪ್ರತಿಶತದಲ್ಲೇ ಉಳಿದಿದೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement