ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಅನ್ನಪ್ರಸಾದಕ್ಕೆ ರಾಷ್ಟ್ರೀಯ ಸುರಕ್ಷತಾ ಗುಣಮಟ್ಟದ ಪ್ರಮಾಣಪತ್ರ

ಕೊಲ್ಲೂರು: ಕೇಂದ್ರ ಸರ್ಕಾರದ ಭಾರತೀಯ ಆಹಾರ ಸುರಕ್ಷಾ ಮತ್ತು ಗುಣಮಟ್ಟದ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ)ವು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಾಲಯದ ವತಿಯಿಂದ ಅರ್ಪಿಸುವ ನೈವೇದ್ಯ ಮತ್ತು ಭಕ್ತರಿಗೆ ನೀಡುವ ಪ್ರಸಾದ ರೂಪದ ಅನ್ನದಾಸೋಹ, ‘ಗರಿಷ್ಠ ಗುಣಮಟ್ಟದಿಂದ ಕೂಡಿದೆ’ ಎಂದು ಪ್ರಮಾಣ ಪತ್ರ ನೀಡಿದೆ.

ಪ್ರಮಾಣಪತ್ರವು ಏಪ್ರಿಲ್ 6, 2024 ರವರೆಗೆ ಮಾನ್ಯವಾಗಿರುತ್ತದೆ. ಎಫ್‌ಎಸ್‌ಎಸ್‌ಎಐ ಸ್ಥಾಪಿಸಿದ ಮಾನದಂಡಗಳ ಪ್ರಕಾರ ದೇವಾಲಯವು ದೇವರಿಗೆ ಆನಂದದಾಯಕ ನೈರ್ಮಲ್ಯದ ಕೊಡುಗೆ (BHOG) ಅಡಿಯಲ್ಲಿ ಪ್ರಮಾಣೀಕರಿಸಲ್ಪಟ್ಟಿದೆ ಎಂದು ಪ್ರಮಾಣಪತ್ರವು ಹೇಳಿದೆ.

ರಾಜ್ಯದ ಮುಜರಾಯಿ ಇಲಾಖೆಯ ಶ್ರೀಮಂತ ದೇವಾಲಯಗಳಲ್ಲಿ ಒಂದಾದಾಗಿರುವ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಾಲಯಕ್ಕೆ ಪ್ರತಿನಿತ್ಯವೂ ಸಾವಿರಾರೂ ಸಂಖ್ಯೆಯಲ್ಲಿ ರಾಜ್ಯ-ಹೊರ ರಾಜ್ಯಗಳಿಂದ ಭಕ್ತರು ಆಗಮಿಸುತ್ತಾರೆ. ದೇಗುಲದಲ್ಲಿ ಉಚಿತ ಭೋಜನ ಪ್ರಸಾದದ ವ್ಯವಸ್ಥೆಯಿದೆ.
ಈ ಭೋಜನ ಪ್ರಸಾದ ಹಾಗೂ ದೇವರಿಗೆ ಅರ್ಪಿಸುವ ನೈವೇದ್ಯಗಳು ಗರಿಷ್ಠ ಗುಣಮಟ್ಟದಿಂದ ಕೂಡಿದ್ದು, ಅತ್ಯಂತ ಸುರಕ್ಷಿತವಾಗಿದೆ ಎಂದು ಪ್ರಾಧಿಕಾರವು ಪ್ರಮಾಣಪತ್ರ ನೀಡಿದೆ.

ದೇವಾಲಯವು ಎಫ್‌ಎಸ್‌ಎಸ್‌ಎಐ ಪ್ರಮಾಣೀಕೃತ ತಯಾರಕರಿಂದ ದಿನಸಿ ವಸ್ತುಗಳನ್ನು ಖರೀದಿಸಿದೆ ಎಂದು ಅದು ಹೇಳಿದೆ. ದೇವಸ್ಥಾನವು ಸರಿಯಾದ ಕೋಲ್ಡ್ ಸ್ಟೋರೇಜ್ ಸೌಲಭ್ಯವನ್ನು ಹೊಂದಿತ್ತು.ನೈರ್ಮಲ್ಯ, ವಾತಾವರಣ, ಸಂಗ್ರಹಣೆ ಮತ್ತು ಆಹಾರ ತಯಾರಿಕೆಯಲ್ಲಿ ಬಳಸುವ ಶುದ್ಧ ನೀರು ಮುಂತಾದ ವಿವಿಧ ಅಂಶಗಳನ್ನು ಪರಿಗಣಿಸಿ, ಎಫ್‌ಎಸ್‌ಎಸ್‌ಎಐ ಪ್ರಮಾಣಪತ್ರವನ್ನು ನೀಡಿದೆ ಎಂದು ಉಡುಪಿಯ ಎಫ್‌ಎಸ್‌ಎಸ್‌ಎಐ ನಿಯೋಜಿತ ಅಧಿಕಾರಿ ಡಾ.ಪ್ರೇಮಾನಂದ ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಮಾಜಿ ಸಚಿವ ಎಚ್.ಡಿ ರೇವಣ್ಣಗೆ ಮತ್ತೊಂದು ಸಂಕಷ್ಟ : ಅಪಹರಣ ಪ್ರಕರಣ ದಾಖಲು

ಈ ಭೋಜನ ತಯಾರಿಸುವ ಅಡುಗೆ ಮನೆ, ಅಲ್ಲಿರುವ ಸೌಲಭಯಗಳು, ಆಹಾರ ತಯಾರಿಸುವ ವಿಧಾನ, ಈ ಸಂದರ್ಭದಲ್ಲಿ ಪಾಲಿಸುವ ಸ್ವಚ್ಛತೆ, ಆಹಾರ ತಯಾರಿಕಾ ಸಿಬ್ಬಂದಿಗೆ ನೀಡಿರುವ ತರಬೇತಿ ಇತ್ಯಾದಿ ಅಂಶಗಳನ್ನು ಆಧರಿಸಿ ಇತ್ತೀಚೆಗೆ ಪ್ರಾಧಿಕಾರವು ಖಾಸಗಿ ಎಜೆನ್ಸಿ ಮೂಲಕ ಆಡಿಟ್ ಮಾಡಿಸಿ 2024ರ ವರೆಗೆ ಈ ಪ್ರಮಾಣಪತ್ರ ನೀಡಿದೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement