ಕಾಶಿ ಯಾತ್ರಾರ್ಥಿಗಳಿಗೆ ಸಿಹಿ ಸುದ್ದಿ : ಕಾಶಿಯಾತ್ರೆ ಸಹಾಯಧನ ಯೋಜನೆಗೆ ರಾಜ್ಯ ಸರ್ಕಾರದಿಂದ ಅಧಿಕೃತ ಆದೇಶ, ಶೀಘ್ರವೇ ಅರ್ಜಿ ಆಹ್ವಾನ

posted in: ರಾಜ್ಯ | 0

ಬೆಂಗಳೂರು : ರಾಜ್ಯದ ಆಸಕ್ತ ಯಾತ್ರಾರ್ಥಿಗಳಿಗಾಗಿ ರಾಜ್ಯದ ಬಹುನಿರೀಕ್ಷಿತ ಕಾಶಿಯಾತ್ರೆ ಪ್ರವಾಸ ಯೋಜನೆ ಕುರಿತು ಸರ್ಕಾರ ಆದೇಶ ಹೊರಡಿಸಿದೆ.
ಅದರಂತೆ ರಾಜ್ಯದಿಂದ ಕಾಶಿ ಯಾತ್ರೆ ಕೈಗೊಳ್ಳುವ 30,000 ಯಾತ್ರಾರ್ಥಿಗಳಿಗೆ ರಾಜ್ಯ ಸರ್ಕಾರದಿಂದ ತಲಾ 5000 ರೂ.ಗಳ ಸಹಾಯ ಧನ ನೀಡಲಾಗುತ್ತದೆ.

ಈ ಕುರಿತು ಮುಜರಾಯಿ, ಹಜ್ ಮತ್ತು ವಕ್ಫ್ ಸಚಿವರಾದ ಶಶಿಕಲಾ ಜೊಲ್ಲೆ ಪ್ರಕಟಣೆ ಬಿಡುಗಡೆ ಮಾಡಿದ್ದು, 2022-23ನೇ ಸಾಲಿನ ಆಯವ್ಯಯದಲ್ಲಿ ಪ್ರಸ್ತಾಪವಾದ ಕಾಶಿಯಾತ್ರೆ ಪ್ರವಾಸ ಯೋಜನೆಗೆ ಸರ್ಕಾರ ಆದೇಶ ಹೊರಡಿಸಿದ್ದು, ಇದರಿಂದ ದೇವಾಲಯ ಪ್ರವಾಸೋದ್ಯಮಕ್ಕೆ ಪ್ರೋತ್ಸಾಹ ನೀಡಿದಂತಾಗಲಿದೆ ಎಂದು ತಿಳಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ವಾರಾಣಸಿಯ ಪುರಾತನ ಕಾಶಿಯ ಶ್ರೀ ವಿಶ್ವನಾಥ ಮಂದಿರವನ್ನು ವಿಶಿಷ್ಟ ರೀತಿಯಲ್ಲಿ ಜೀರ್ಣೋದ್ಧಾರ ಮಾಡುವ ಮೂಲಕ ಐತಿಹಾಸಿಕ ಕಾಶಿಗೆ ‘ದಿವ್ಯಕಾಶಿ-ಭವ್ಯಕಾಶಿ’ ಎಂಬ ಅಭಿದಾನ ದೊರೆಯುವಂತೆ ಮಾಡಿದ್ದು, ಈ ಸಂದರ್ಭದಲ್ಲಿ ರಾಜ್ಯದ ಸಾವಿರಾರು ಯಾತ್ರಾರ್ಥಿಗಳು ಕಾಶಿಯಾತ್ರೆ ಪ್ರವಾಸ ಯೋಜನೆಯಡಿ ಭವ್ಯಕಾಶಿಗೆ ಭೇಟಿ ನೀಡಿ ಶ್ರೀ ವಿಶ್ವನಾಥನ ದರ್ಶನ ಪಡೆಯಲು ಇದರಿಂದ ಅನುಕೂಲವಾಗಲಿದೆ ಎಂದು ತಿಳಿಸಿದ್ದಾರೆ.
ಕಾಶಿಯಾತ್ರೆ ಯೋಜನೆಯನ್ವಯ ಪ್ರತಿ ವರ್ಷ ರಾಜ್ಯದ 30 ಸಾವಿರ ಯಾತ್ರಾರ್ಥಿಗಳು ಸರ್ಕಾರದ ಸಹಾಯಧನದ ಮೂಲಕ ಕಾಶಿಗೆ ತೆರಳಬಹುದಾಗಿದೆ. ಪ್ರತಿಯೊಬ್ಬ ಯಾತ್ರಾರ್ಥಿಗೆ ಈ ಯೋಜನೆಯನ್ವಯ 5 ಸಾವಿರ ರೂ. ಸಹಾಯಧನ ನೀಡಲಾಗುವುದು ಎಂದು ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ.
ಸರ್ಕಾರದ ಆದೇಶ ಹೊರಡಿಸಲಾಗಿದ್ದು, ಶೀಘ್ರದಲ್ಲಿಯೇ ಇಲಾಖೆಯಿಂದ ಕಾಶಿಯಾತ್ರೆಗೆ ತೆರಳಲು ಆಸಕ್ತಿ ಹೊಂದಿರುವ ಯಾತ್ರಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.

ಓದಿರಿ :-   ತಾಳಿ ಕಟ್ಟುವ ವೇಳೆ ಮದುವೆ ಬೇಡವೆಂದು ಹೈಡ್ರಾಮಾ ಮಾಡಿದ ವಧು...!

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

4 / 5. ಒಟ್ಟು ವೋಟುಗಳು 1

advertisement

ನಿಮ್ಮ ಕಾಮೆಂಟ್ ಬರೆಯಿರಿ